Wednesday, 22 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 108 - 112

ಯೇ ತು ದೇವಾ ಇಹೋದ್ಭೂತಾ ನೃವಾನರಶರೀರಿಣಃ ।
ತೇ ಸರ್ವೇ ಸ್ವಾಂಶಿತಾಮಾಪುಸ್ತನ್ಮೈನ್ದವಿವಿದಾವೃತೇ   ॥೯.೧೦೮॥

ಶ್ರೀರಾಮನೊಂದಿಗೆ ಭುವಿಯಲ್ಲಿ ಅವತರಿಸಿದ್ದ ದೇವತಾಗಣ,
ಮೈಂದ ವಿವಿದರ ಬಿಟ್ಟು ಮೂಲರೂಪ ಹೊಂದಿದರು ಆ ಕ್ಷಣ.

ಅಸುರಾವೇಶತಸ್ತೌ ತು ನ ರಾಮಮನುಜಗ್ಮತುಃ ।
ಪೀತಾಮೃತೌ ಪುರಾ ಯಸ್ಮಾನ್ಮಮ್ರತುರ್ನ್ನಚ ತೌ ತದಾ   ॥೯.೧೦೯॥

ಮೈಂದ ವಿವಿದರಲ್ಲಿದ್ದ ಅಸುರಾವೇಶ,
ಶ್ರೀರಾಮನ ಅನುಸರಿಸಲಾಗದ ಪಾಶ.
ಸಮುದ್ರ ಮಥನ ಕಾಲದಲ್ಲಿ ಸೇವಿಸಿಯಾಗಿತ್ತು ಅಮೃತ,
ಆ ಕಾರಣದಿಂದಾಗಿಯೇ ಅವರಿಬ್ಬರು ಆಗಲಿಲ್ಲ ಮೃತ.

ತಯೋಶ್ಚ ತಪಸಾ ತುಷ್ಟಶ್ಚಕ್ರೇ ತಾವಜರಾಮರೌ ।
ಪುರಾ ಸ್ವಯಮ್ಭುಸ್ತೇನೋಭೌ ದರ್ಪ್ಪಾದಮೃತಮನ್ಥನೇ  ॥೯.೧೧೦॥
ಪ್ರಸ̐ಹ್ಯಾಪಿಬತಾಂ ದೇವೈರ್ದ್ದೇವಾಂಶತ್ವಾದುಪೇಕ್ಷಿತೌ
ಪೀತಾಮೃತೇಷು ದೇವೇಷು ಯುದ್ಧ್ಯಮಾನೇಷು ದಾನವೈಃ  ॥೯.೧೧೧॥
ತೈರ್ದ್ದತ್ತಮಾತ್ಮಹಸ್ತೇ ತು ರಕ್ಷಾಯೈ ಪೀತಮಾಶು ತತ್ ।
ತಸ್ಮಾದ್ ದೋಷಾದಾಪತುಸ್ತಾವಾಸುರಂ ಭಾವಮೂರ್ಜ್ಜಿತಮ್  ॥೯.೧೧೨ ॥

ಆಶ್ವೀದೇವತೆಗಳ ಅವತಾರವಾದ ಮೈಂದ ವಿವಿದ,
ತಪದಿ ಬ್ರಹ್ಮನಿಂದ ಪಡೆದ ಅವಧ್ಯತ್ವದ ವರಪ್ರಸಾದ.
ಅವರದಿರದಿದ್ದರೂ ಪಾಲು ಸೇವಿಸಿದ್ದರು ಅಮೃತವ ಬಲಾತ್ಕಾರದಿಂದ,
ದೇವತೆಗಳೂ ಸುಮ್ಮನಿದ್ದರಂತೆ  ದೇವತಾರೂಪ ಅವರಾಗಿದ್ದರಿಂದ.
ದೇವತೆಗಳಾದರು ಅಮೃತ ಸೇವಿಸಿ ಸಿದ್ಧ,
ಎದುರಿಸಿದರು ದೈತ್ಯರ ಮುಂದಾಗಿ ಯುದ್ಧ.
ಆ ಸಮಯ ಅಮೃತಪಾತ್ರೆಯ ಮೈಂದ ವಿವಿದರಿಗಿತ್ತ ದೇವತೆಗಳ ಕೂಟ,
ಭಗವದಾಜ್ಞೆ ಇರದೇ ಅವರಿಬ್ಬರದನು ಉದ್ಧಟತನದಿ ಸೇವಿಸಿದ ಆಟ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula