ತಸ್ಯೈವಮಬ್ಜಭವಲೋಕಸಮಾಮಿಮಾಂ ಕ್ಷ್ಮಾಂ ಕೃತ್ವಾsನುಶಾಸತ
ಉದೀಕ್ಷ್ಯ ಗುಣಾನ್ ಧರಾಯಾಃ ।
ವೈಶೇಷ್ಯಮಾತ್ಮಸದನಸ್ಯ ಹಿ ಕಾಙ್ಕ್ಷಮಾಣಾ ವೃನ್ದಾರಕಾಃ ಕಮಲಜಂ ಪ್ರತಿ
ತಚ್ಛಶಂಸುಃ ॥೯.೪೪॥
ಹೀಗೆ ಸಾಗಿರಲು
ರಾಮಚಂದ್ರನ ಆಳ್ವಿಕೆ,
ಭೂಮಿ ಸಮನಾಗಿತ್ತದು
ಬ್ರಹ್ಮಲೋಕಕ್ಕೆ.
ಹೀಗೆಂದರು ಇದ
ಗಮನಿಸುತ್ತಿದ್ದ ದೇವತಾವೃಂದ , ಬ್ರಹ್ಮಲೋಕದ ಹಿರಿತನದ ಹೆಬ್ಬಯಕೆಯಿಂದ.
ಆಮನ್ತ್ರ್ಯ ತೈಃ ಸಹ ವಿಭುರ್ಭಗವತ್ಪ್ರಯಾಣಂ ಸ್ವೀಯಾಯ ಸದ್ಮನ ಇಯೇಷ
ದಿದೇಶ ಚೈವ ।
ರುದ್ರಂ ಸ್ವಲೋಕಗಮನಾಯ ರಘೂತ್ತಮಸ್ಯ ಸಮ್ಪ್ರಾರ್ತ್ಥನೇ ಸ ಚ ಸಮೇತ್ಯ
ವಿಭುಂ ಯಯಾಚೇ ॥೯.೪೫॥
ಬ್ರಹ್ಮದೇವ
ನಡೆಸುತ್ತಾನೆ ಎಲ್ಲಾ ದೇವತೆಗಳೊಂದಿಗೆ ಆಪ್ತಾಲೋಚನೆ,
ರಾಮ ತನ್ನ ಲೋಕಕ್ಕೆ
ತೆರಳಲು ವಿನಂತಿಸಲಿಕ್ಕೆ ರುದ್ರನ ನಿಯೋಜನೆ.
ಅದೇ ರೀತಿ ರಾಮನ
ಬಳಿಬಂದು ಶಿವ ಮಾಡುತ್ತಾನೆ ನಮ್ರ ನಿವೇದನೆ.
ಏಕಾನ್ತಮೇತ್ಯ ರಘುಪೇಣ ಸಮಸ್ತಕಾಲೋ ರುದ್ರೋ ಜಗಾದ ವಚನಂ ಜಗತೋ
ವಿಧಾತುಃ ।
ವೈಶೇಷ್ಯಮಾತ್ಮಭವನಸ್ಯ ಹಿ ಕಾಙ್ಕ್ಷಮಾಣಾಸ್ತ್ವಾಮರ್ತ್ಥಯನ್ತಿ
ವಿಬುಧಾಃ ಸಹಿತಾ ವಿಧಾತ್ರಾ ॥೯.೪೬ ॥
ರಾಮಚಂದ್ರನಿದ್ದಲ್ಲಿಗೆ
ಸಂಹಾರಕ ರುದ್ರದೇವರ ಆಗಮನ,
ನಿವೇದಿಸಿಕೊಳ್ಳುತ್ತಾನೆ
ರುದ್ರ ಬ್ರಹ್ಮದೇವನಾಡಿದ ಮಾತನ್ನ.
ಭೂಮಿಗಿಂತ ತಮ್ಮ
ಲೋಕದ ಉತ್ತಮತ್ವ,
ದೇವತೆಗಳ ಪ್ರಾರ್ಥನೆ ನಿನ್ನಲ್ಲಿ ಅದ ಬೇಡುತ್ತಾ .
ಪುತ್ರಸ್ತವೇಶ ಕಮಲಪ್ರಭವಸ್ತಥಾsಹಂ
ಪೌತ್ರಸ್ತು ಪೌತ್ರಕವಚೋ ಯದಪಿ ಹ್ಯಯೋಗ್ಯಮ್ ।
ಸಮ್ಭಾವಯನ್ತಿ ಗುಣಿನಸ್ತದಹಂ ಯಯಾಚೇ ಗನ್ತುಂ ಸ್ವಸದ್ಮ ನತಿಪೂರ್ವಮಿತೋ
ಭವನ್ತಮ್ ॥೯.೪೭॥
ಶಿವ ರಾಮನಲ್ಲಿ
ವಿನಂತಿಸಿಕೊಳ್ಳುತ್ತಾನೆ- ಬ್ರಹ್ಮ ನಿನ್ನ ಮಗ,
ಅಪಥ್ಯವೆನಿಸಿದರೂ
ನಿನಗೆ ನನ್ನ ನುಡಿ ; ನಾನು ನಿನ್ನ
ಮೊಮ್ಮಗ.
ಗುಣಿಗಳಿಗೆ
ಮೊಮ್ಮಕ್ಕಳ ಮೇಲೆ ಬಲು ಪ್ರೀತಿಯಂತೆ ಶ್ರೀರಾಮ,
ನಮಸ್ಕರಿಸಿ
ಬೇಡುತ್ತಿದ್ದೇನೆ ಸೇರಿಕೋ ಸ್ವಾಮೀ ನಿನ್ನ ಸ್ವಧಾಮ.
ಯತ್ಕಾರ್ಯ್ಯಸಾಧನಕೃತೇ ವಿಬುಧಾರ್ತ್ಥಿತಸ್ತ್ವಂ ಪ್ರಾದುಶ್ಚಕರ್ತ್ಥ
ನಿಜರೂಪಮಶೇಷಮೇವ ।
ತತ್ ಸಾಧಿತಂ ಹಿ ಭವತಾ ತದಿತಃ ಸ್ವಧಾಮ ಕ್ಷಿಪ್ರಂ ಪ್ರಯಾಹಿ ಹರ್ಷಂ ವಿಬುಧೇಷು ಕುರ್ವನ್ ॥೯.೪೮॥
ದೇವತೆಗಳಿಂದ
ಪ್ರಾರ್ಥಿತನಾಗಿ ಯಾವುದಕ್ಕೆ ಮಾಡಿದ್ದೆಯೋ ಅವತಾರ,
ಸಾಧಿಸಲ್ಪಟ್ಟಾಗಿದೆ
ಸ್ವಾಮಿ ನಿನ್ನಿಂದಾಗಲೇ ಆ ವಿಶೇಷಕಾರ್ಯ.
ಹಾಗಾಗಿ ದೇವತೆಗಳ
ಪ್ರಾರ್ಥನೆ ಇದು ಶ್ರೀರಾಮ,
ದೇವತೆಗಳಿಗೆ
ಹರ್ಷವೀಯುತ್ತ ಸೇರು ನಿನ್ನ ಧಾಮ.
ಓಮಿತ್ಯುವಾಚ ಭಗವಾಂಸ್ತದಶೇಷಮೇವ ಶ್ರುತ್ವಾ ರಹಸ್ಯಥ ತನುಸ್ತ್ವಪರಾ
ಹರಸ್ಯ ।
ದುರ್ವಾಸನಾಮಯುಗಿಹಾsಗಮದಾಶು
ರಾಮ ಮಾಂ ಭೋಜಯ ಕ್ಷುಧಿತಮಿತ್ಯಸಕೃದ್ ಬ್ರುವಾಣಾ॥೯.೪೯॥
ಶಿವನಿಂದ
ರಹಸ್ಯದಲ್ಲಿ ಎಲ್ಲವನ್ನು ಕೇಳಿಸಿಕೊಂಡ
ಶ್ರೀರಾಮಚಂದ್ರ,
ಹಾಗೇ ಆಗಲಿ ಎಂದು
ಸಮ್ಮತಿಸಿದ ಭಕ್ತವತ್ಸಲ ರಘುಕುಲಚಂದ್ರ.
ಆಗಾಗುತ್ತದೆ ಶಿವನ
ಇನ್ನೊಂದು ರೂಪದ ಪ್ರವೇಶ,
ಹಸಿದಿಹ ನನಗೆ
ಉಣಬಡಿಸೆಂದು ಬಂದ ದೂರ್ವಾಸ.
No comments:
Post a Comment
ಗೋ-ಕುಲ Go-Kula