Monday, 13 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 40 - 43

ಪ್ರವಿಶ್ಯ ಭೂಮೌ ಸಾ ದೇವೀ ಲೋಕದೃಷ್ಟ್ಯನುಸಾರತಃ ।
ರೇಮೇ ರಾಮೇಣಾವಿಯುಕ್ತಾ ಭಾಸ್ಕರೇಣ ಪ್ರಭಾ ಯಥಾ  ॥೯.೪೦॥

ಸೀತಾದೇವಿ ಲೋಕದ ಕಣ್ಣಿಗೆ ಮಾಡಿದಳು ಭೂಮಿಯ ಪ್ರವೇಶ,
ಸೂರ್ಯನೊಳಗಿನ ಪ್ರಭೆಯಂತೆ ರಾಮನೊಡನೆ ಇದ್ದಳೆಂಬುದು ವಿಶೇಷ.

ಏವಂ ರಮಲಾಳಿತಪಾದಪಲ್ಲವಃ ಪುನಃ ಸ ಯಜ್ಞೈಶ್ಚ ಯಜನ್ ಸ್ವಮೇವ ।
ವರಾಶ್ವಮೇಧಾದಿಭಿರಾಪ್ತಕಾಮೋ ರೇಮೇsಭಿರಾಮೋ ನೃಪತೀನ್ 
ವಿಶಿಕ್ಷಯನ್  ॥೯.೪೧॥

ಹೀಗೆ ಆಪ್ತಕಾಮನಾದ ಪ್ರಭು ಶ್ರೀರಾಮಚಂದ್ರ,
ರಮಾವಂದಿತ ಪಾದಕಮಲಗಳ  ಗುಣಸಾಂದ್ರ.
ಮಾಡುತ್ತಿದ್ದ ರಾಜರ ಶಿಕ್ಷಣಾರ್ಥವಾಗಿ ಅಶ್ವಮೇಧಾದಿ ಯಜ್ಞ,
ತನ್ನನ್ನೇ ತಾ ಆರಾಧಿಸಿಕೊಂಡು ಶಿಕ್ಷಣವೀಯುತ್ತಿದ್ದ ಸರ್ವಜ್ಞ.

ರಾಮಸ್ಯ ದೃಶ್ಯಾ ತ್ವನ್ಯೇಷಾಮದೃಶ್ಯಾ ಜನಕಾತ್ಮಜಾ ।
ಭೂಮಿಪ್ರವೇಶಾದೂರ್ಧ್ವಂ ಸಾ ರೇಮೇ ಸಪ್ತಶತಂ ಸಮಾಃ ॥೯.೪೨॥

ಸೀತೆ ರಾಮಗಾಗಿದ್ದಳು ದೃಶ್ಯ -ಇತರರಿಗೆ ಅದೃಶ್ಯ,
ಆಡಿದಳು ಸೀತಾ ರಾಮನೊಡನೆ ಏಳುನೂರು ವರ್ಷ.




ಏವಂವಿಧಾನ್ಯಗಣಿತಾನಿ ಜನಾರ್ದ್ದನಸ್ಯ ರಾಮಾವತಾರಚರಿತಾನಿ 
ತದನ್ಯಪುಮ್ಭಿಃ ।
ಶಕ್ಯಾನಿ ನೈವ ಮನಸಾsಪಿ ಹಿ ತಾನಿ ಕರ್ತ್ತುಂ ಬ್ರಹ್ಮೇಶಶೇಷಪುರುಹೂತಮುಖೈಃ 
ಸುರೈಶ್ಚ  ॥೯.೪೩

ಇಂಥಾ ಶ್ರಿಹರಿಯ ರಾಮಾವತಾರದ ಚರಿತ್ರೆಗಳು ಅಗಣಿತ,
ಬ್ರಹ್ಮ ರುದ್ರ ಶೇಷ ಇಂದ್ರಾದಿ ದೇವತೆಗಳಿಗೂ ಆಗದು ಮನೋಗತ.
ಇದನ್ನೆಲ್ಲಾ ಮಾಡುವವ ನಾರಾಯಣ,
ಬೇರಾರಿಗೂ ಸಾಧ್ಯವೇ ಆಗದ ಕಾರಣ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula