ಅಥ ರಾಘವಃ ಸ್ವಭವನೋಪಗತೌ ವಿದಧೇ ಮತಿಂ ಸಹ ಜನೈರಖಿಲೈಃ ।
ಸಮಘೋಷಯಚ್ಚ ಯ ಇಹೇಚ್ಛತಿ ತತ್ ಪದಮಕ್ಷಯಂ ಸಪದಿ ಮೈತ್ವಿತಿ ಸಃ ॥೯.೬೦॥
ತದನಂತರ ಶ್ರೀರಾಮ
ಮಾಡುತ್ತಾನೆ ಆತನ ಸ್ವಧಾಮಕ್ಕೆ ತೆರಳುವ ತೀರ್ಮಾನ,
ಯೋಗ್ಯ ಜೀವಗಳನ್ನೂ
ತನ್ನೊಂದಿಗೆ ಕರೆದೊಯ್ವ ಕರುಣೆಯ ಮನ.
ಘೋಷಿಸಿದ ಯಾರ್ಯಾರು
ಮೋಕ್ಷ ಬಯಸುವಿರೋ ಹಿಂಬಾಲಿಸಿ ಎಂಬ ಆಹ್ವಾನ.
ಶ್ರುತ್ವಾ ತು ತದ್ ಯ ಇಹ ಮೋಕ್ಷಪದೇಚ್ಛವಸ್ತೇ ಸರ್ವೇ ಸಮಾಯಯುರಥಾsತೃಣಮಾಪಿಪೀಲಮ್
।
ರಾಮಾಜ್ಞಯಾ ಗಮನಶಕ್ತಿರಭೂತ್ ತೃಣಾದೇರ್ಯ್ಯೇ ತತ್ರ ದೀರ್ಘಭವಿನೋ ನಹಿ
ತೇ ತದೈಚ್ಛನ್ ॥೯.೬೧ ॥
ಕೇಳುತ್ತಾ ಶ್ರೀ
ರಾಮಚಂದ್ರನ ವಿಶಿಷ್ಟವಾದ ಘೋಷಣೆ,
ಇರುವೆ ,ಸ್ಥಾವರ ಕಡ್ಡಿಯೂ ಹೊರಟವಂತೆ ಬಂದು ಚಲನೆ.
ಯಾರ್ಯಾರಿಗೆ ಇತ್ತೋ
ಸಂಸಾರವಾಸ ದೀರ್ಘಕಾಲ,
ಅವರ್ಯಾರೂ ರಾಮನ
ಜೊತೆ ಹೊರಡ ಬಯಸಲಿಲ್ಲ.
ಸಂಸ್ಥಾಪಯಾಮಾಸ ಕುಶಂ ಸ್ವರಾಜ್ಯೇ ತೈಃ ಸಾಕಮೇವ ಚ ಲವಂ ಯುವರಾಜಮೀಶಃ ।
ಸಂಸ್ಥಾಪ್ಯ ವಾಲಿತನಯಂ ಕಪಿರಾಜ್ಯ ಆಶು ಸೂರ್ಯ್ಯಾತ್ಮಜೋsಪಿ
ರಘುವೀರಸಮೀಪಮಾಯಾತ್ ॥೯.೬೨ ॥
ಶ್ರೀರಾಮ ಮಾಡಿದ
ಕುಶಗೆ ಪಟ್ಟಾಭಿಷೇಕ,
ಲವನ ಮಾಡಿದ
ಯುವರಾಜನಾಗಿ ನೇಮಕ.
ಸುಗ್ರೀವ ಅಂಗದನ
ಕಪಿರಾಜ್ಯದ ರಾಜನಾಗಿ ಮಾಡಿದ,
ಅಂಗದಗೆ ರಾಜ್ಯಾಭಿಷೇಕ
ಮಾಡಿ ರಾಮನ ಬಳಿ ಬಂದ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula