Saturday, 4 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 12 - 16

ಸ ಬ್ರಹ್ಮರುದ್ರಮರುದಶ್ವಿದಿವಾಕರಾದಿಮೂರ್ದ್ಧನ್ಯರತ್ನಪರಿಘಟ್ಟಿತಪಾದಪೀಠಃ ।
ನಿತ್ಯಂ ಸುರೈಃ ಸಹ ನರೈರಥ ವಾನರೈಶ್ಚ ಸಮ್ಬೂಜ್ಯಮಾನಚರಣೋ ರಮತೇ ರಮೇಶಃ  ॥೯.೧೨॥

ಬ್ರಹ್ಮ-ರುದ್ರ-ಇಂದ್ರ-ಅಶ್ವೀದೇವತೆಗಳು ಮತ್ತು ಸೂರ್ಯ,
ಮುಂತಾದವರ ಕಿರೀಟರತ್ನ ಮುಟ್ಟುವ ಪಾದದವ ರಾಮಚಂದ್ರ.
ಇಂಥಾ ರಾಮ ಯಾವಾಗಲೂ ದೇವತೆ ಮನುಷ್ಯ ಕಪಿಗಳಿಂದ,
ಪಾದಪೂಜೆಗೊಂಡು ಕ್ರೀಡಿಸುತ್ತಾ ಹೊಂದುತ್ತಿದ್ದ ಆನಂದ.

ತಸ್ಯಾಖಿಲೇಶಿತುರನಾದ್ಯನುಗೈವ ಲಕ್ಷ್ಮೀಃ ಸೀತಾಬಿಧಾ ತ್ವರಮಯತ್ ಸ್ವರತಂ ಸುರೇಶಮ್ ।
ನಿತ್ಯಾವಿಯೋಗಿಪರಮೋಚ್ಚನಿಜಸ್ವಭಾವಾ ಸೌನ್ದರ್ಯವಿಭ್ರಮಸುಲಕ್ಷಣಪೂರ್ವಭಾವಾ ॥೯.೧೩॥

ವಿಯೋಗವೇ ಇರದ ಜಗದ ಮಾತಾಪಿತರ ದಾಂಪತ್ಯ,
ಮಾತೆ ಲಕ್ಷ್ಮೀ ಸೀತೆಯಾಗಿ ಸ್ವರಮಣಗೀವ ಪ್ರೀತ್ಯಾತಿಥ್ಯ.
ಲಕ್ಷ್ಮೀ ಉತ್ಕೃಷ್ಟ ಆನಂದಸ್ವರೂಪ ಕಾಂತಿಗಳ ಗುಣಸಾಗರ,
ಅಂಥಾ ತಾಯಿ ಭಗವಂತನೊಡನೆ ವಿಹರಿಸಿದ ವ್ಯಾಪಾರ.

ರೇಮೇ ತಯಾ ಸ ಪರಮಃ ಸ್ವರತೋsಪಿ ನಿತ್ಯಂ ನಿತ್ಯೋನ್ನತಪ್ರಮದಭಾರಭೃತಸ್ವಭಾವಃ ।
ಪೂರ್ಣ್ಣೋಡುರಾಜಸುವಿರಾಜಿತಸನ್ನಿಶಾಸು ದೀಪ್ಯನ್ನಶೋಕವನಿಕಾಸು ಸುಪುಷ್ಟಿತಾಸು  ॥೯.೧೪॥

ತನ್ನ ಸಂತಸಕ್ಕೆ ಬೇರೆ ಯಾರೊಬ್ಬರೂ ಬೇಕಿಲ್ಲದ ಸಂತಸದ ಸೆಲೆ ನಾರಾಯಣ,
ಬೆಳದಿಂಗಳ ಹೂದೋಟದಲ್ಲಿ ಸೀತೆಯೊಡನೆ ವಿಹರಿಸಿದನಂತೆ ಸಂತಸದ ಗಡಣ.




ಗಾಯನ್ತಿ ಚೈನಮನುರಕ್ತಧಿಯಃ ಸುಕಣ್ಠಾ ಗನ್ಧರ್ವಚಾರಣಗಣಾಃ ಸಹ ಚಾಪ್ಸರೋಭಿಃ ।
ತಂ ತುಷ್ಟುವುರ್ಮ್ಮುನಿಗಣಾಃ ಸಹಿತಾಃ ಸುರೇಶೈ ರಾಜಾನ ಏನಮನುಯಾನ್ತಿ ಸದಾsಪ್ರಮತ್ತಾಃ ॥೯.೧೫॥

ಗಂಧರ್ವರು ಚಾರಣರು ಅಪ್ಸರೆಯರಿಂದ ಭಗವದ್ ಮಹಿಮಾ ಗಾಯನ,
ಮನಕರಗಿದ ದೇವತೆಗಳು ಮುನಿಗಳು ಭಕ್ತರಿಂದ ರಾಮನ ಗುಣಗಾನ.
ಸಾಮಂತರು ಅಹಂಕಾರ ಮದ ಬಿಟ್ಟು ಮಾಡಿದರಂತೆ  ಇವನ ಅನುಸರಣ.

ಏವಂ ತ್ರಯೋದಶಸಹಸ್ರಮಸೌ ಸಮಾಸ್ತು ಪೃಥ್ವೀಂ ರರಕ್ಷ ವಿಜಿತಾರಿರಮೋಘವೀರ್ಯ್ಯಃ ।
ಆನನ್ದಮಿನ್ದುರಿವ ಸನ್ದಧದಿನ್ದಿರೇಶೋ ಲೋಕಸ್ಯ ಸಾನ್ದ್ರಸುಖವಾರಿಧಿರಪ್ರಮೇಯಃ ॥೯.೧೬॥

ಹೀಗೆ ಶ್ರೀರಾಮ ಭೂಮಿಯನಾಳಿದ್ದು ಹದಿಮೂರು ಸಾವಿರ ವರ್ಷ,
ಲಕ್ಷ್ಮೀಪತಿಯಾದ ರಾಮ ಚಂದ್ರನಂತೆ ಲೋಕಕಿತ್ತಿದ್ದ ತಂಪಾದ ಹರ್ಷ.
ಚೆನ್ನಾಗಿ ಭೂರಕ್ಷಣೆ ಮಾಡಿದ್ದ ನಿಬಿಡ ಆನಂದಗಳ ಸಮುದ್ರ,
ಹೋಲಿಕೆಯೇ ಮಾಡಲಾಗದಂಥ  ಗುಣಗಡಣನವ ರಾಮಚಂದ್ರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula