ಅಥ ಯೇ ತ್ವತ್ಪದಾಮ್ಭೋಜಮಕರನ್ದೈಕಲಿಪ್ಸವಃ ।
ತ್ವಯಾ ಸಹಾsಗತಸ್ತೇಷಾಂ
ವಿಧೇಹಿ ಸ್ಥಾನಮುತ್ತಮಮ್ ॥೯.೧೦೧॥
ನಿನ್ನ ಪಾದಕಮಲಗಳ
ದುಂಬಿಗಳಾಗಿ ಬಯಸಿ ಮಕರಂದ,
ಅದನ್ನ
ನೆಚ್ಚಿಕೊಂಡು ಬಂದಿರುವ ಅನೇಕಾನೇಕ ಜೀವವೃಂದ.
ಅವರಿಗ್ಯಾವ್ಯಾವ
ಸ್ಥಾನ ಮಾನ,
ಆಜ್ಞಾಪಿಸು ತಂದೆ
ರಘುನಂದನ.
ಅಹಂ ಭವಃ ಸುರೇಶಾದ್ಯಾಃ ಕಿಙ್ಕರಾಃ ಸ್ಮ ತವೇಶ್ವರ ।
ಯಚ್ಚ ಕಾರ್ಯ್ಯಮಿಹಾಸ್ಮಾಭಿಸ್ತದಪ್ಯಾಜ್ಞಾಪಯಾsಶು ನಃ
॥೯.೧೦೨॥
ನಾನು ಸದಾಶಿವ
ಇಂದ್ರ ಮೊದಲಾದವರೆಲ್ಲ ನಿನ್ನ ಸೇವಕ ಪಡೆ,
ನಿನ್ನಿಚ್ಛೆಯ
ಆಜ್ಞೆಗೆ ಕಾಯುತ್ತಿದ್ದೇವೆ ಹೇಗಿರಬೇಕು ನಮ್ಮ ನಡೆ.
ಇತ್ಯುದೀರಿತಮಾಕರ್ಣ್ಣ್ಯ ಶತಾನನ್ದೇನ ರಾಘವಃ ।
ಜಗಾದ ಭಾವಗಮ್ಭೀರಸುಸ್ಮಿತಾಧರಪಲ್ಲವಃ ॥೯.೧೦೩ ॥
ಹೀಗೆ ಜೀವರಲ್ಲಿ
ಎಣೆಯಿರದ ಆನಂದದ ಬ್ರಹ್ಮದೇವರ ಮಾತ,
ಕೇಳಿ ಗಂಭೀರ
ಮುಗುಳ್ನಗೆಯಿಂದ ನುಡಿದ ರಾಮಚಂದ್ರನಾತ.
ಜಗದ್ಗುರುತ್ವಮಾದಿಷ್ಟಂ ಮಯಾ ತೇ ಕಮಲೋದ್ಭವ ।
ಗುರ್ವಾದೇಶಾನುಸಾರೇಣ ಮಯಾssದಿಷ್ಟಾ ಚ
ಸದ್ಗತಿಃ ॥೯.೧೦೪॥
ಅತಸ್ತ್ವಯಾ ಪ್ರದೇಯಾ ಹಿ ಲೋಕಾ ಏಷಾಂ ಮದಾಜ್ಞಯಾ ।
ಹೃದಿ ಸ್ಥಿತಂ ಚ ಜಾನಾಸಿ ತ್ವಮೇವೈಕಃ ಸದಾ ಮಮ ॥೯.೧೦೫॥
ಹೇ ಕಮಲಸಂಜಾತ
ಬ್ರಹ್ಮನೇ,
ಕೊಟ್ಟಿದೆ ನಿನಗೆ
ಜಗದ್ಗುರುತ್ವವನ್ನೇ.
ನಿನ್ನ ಗುರುವಾದ
ನನ್ನಿಂದ ಇದೋ ಆಣತಿ,
ನನ್ನ ಪಾದಕಮಲ
ದಾಸರಿಗೆಲ್ಲ ಆಗಲಿ ಸದ್ಗತಿ.
ಅವರಿಗೆಲ್ಲಾ
ಅರ್ಹಲೋಕ ಪಾಲಿಸಬೇಕು ನೀನು,
ನನ್ನ ಪ್ರಿಯ
ಮಗನಾಗಿ ನನ್ನೆದೆಯ ಇಂಗಿತಬಲ್ಲವನು.
ಇತೀರಿತೋ ಹರೇರ್ಭಾವವಿಜ್ಞಾನೀ ಕಞ್ಜಸಮ್ಭವಃ ।
ಪಿಪೀಲಿಕಾತೃಣಾನ್ತಾನಾಂ ದದೌ ಲೋಕಾನನುತ್ತಮಾನ್ ।
ವೈಷ್ಣವಾನ್ ಸನ್ತತತ್ವಾಚ್ಚ ನಾಮ್ನಾ ಸಾನ್ತಾನಿಕಾನ್ ವಿಭುಃ ॥೯.೧೦೬॥
ತೇ ಜರಾಮೃತಿಹೀನಾಶ್ಚ ಸರ್ವದುಃಖವಿವರ್ಜ್ಜಿತಾಃ ।
ಸಂಸಾರಮುಕ್ತಾ ನ್ಯವಸಂಸ್ತತ್ರ ನಿತ್ಯಸುಖಾಧಿಕಾಃ ॥೯.೧೦೭॥
ಹೀಗೆ ಪರಮಾತ್ಮನ
ಭಾವವ ಅರಿತವನಾದ ಚತುರ್ಮುಖ,
ಎಲ್ಲಾ ಜೀವರಿಗೂ
ಕೊಡಮಾಡಿದ ಲೋಕ ಸಾಂತಾನಿಕ.
ಇರುವೆ ಕಡ್ಡಿ
ಸದೃಶವಾದ ಸಾತ್ವಿಕ ಜೀವಿಗಳೆಲ್ಲ,
ಯೋಗ್ಯತೆಯ ಉತ್ತಮ
ಲೋಕಗಳ ಪಡೆದರೆಲ್ಲ.
ಮುಕ್ತರಾದವರು ಅವರು
ಸಂಸಾರ ಬಂಧದಿಂದ,
ಇದ್ದರಲ್ಲಿ ,ಮುಪ್ಪು ಸಾವಿಲ್ಲದ ನಿತ್ಯ ಸುಖದಿಂದ.[Contributed by Shri Govind Magal]
No comments:
Post a Comment
ಗೋ-ಕುಲ Go-Kula