Friday 17 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 75 - 82

ಸ ತೈ ಸಮಾವೃತೋ ವಿಭುರ್ಯ್ಯಯೌ ದಿಶಂ ತದೋತ್ತರಾಮ್ ।
ಅನನ್ತಸೂರ್ಯ್ಯದೀಧಿತಿರ್ದ್ದುರನ್ತಸದ್ಗುಣಾರ್ಣ್ಣವಃ ॥೯.೭೫ ॥

ಅನಂತ ಸೂರ್ಯಕಾಂತಿ ಹೊಂದಿರುವ,
ಸದ್ಗುಣಗಳ ಕಡಲಿನಂತೆ ಕಂಗೊಳಿಸುವ,
ಸರ್ವ ಸಮರ್ಥದೇವ ಶ್ರೀಮನ್ನಾರಾಯಣ,
ಸಮಸ್ತರೊಂದಿಗೆ ಹೊರಟ ಉತ್ತರಕ್ಕೆ ಪಯಣ.

ಸಹಸ್ರಸೂರ್ಯ್ಯಮಣ್ಡಲಜ್ವಲತ್ಕಿರೀಟಮೂರ್ದ್ಧಜಃ ।
ಸುನೀಲಕುನ್ತಳಾವೃತಾಮಿತೇನ್ದುಕಾನ್ತಸನ್ಮುಖಃ ॥೯.೭೬ ॥
ಸುರಕ್ತಪದ್ಮಲೋಚನಃ ಸುವಿದ್ಯುದಾಭಕುಣ್ಡಲಃ ।
ಸುಹಾಸವಿದ್ರುಮಾಧರಃ ಸಮಸ್ತವೇದವಾಗ್ರಸಃ ॥೯.೭೭॥

ದಿವಾಕರೌಘಕೌಸ್ತುಭಪ್ರಭಾಸಕೋರುಕನ್ಧರಃ ।
ಸುಪೀವರೋನ್ನತೋರುಸಜ್ಜಗದ್ಭರಾಂಸಯುಗ್ಮಕಃ ॥೯.೭೮ ॥

ಸುವೃತ್ತದೀರ್ಘಪೀವರೋಲ್ಲಸದ್ಭುಜದ್ವಯಾಙ್ಕಿತಃ ।
ಜಗದ್ ವಿಮತ್ಥ್ಯ ಸಮ್ಭೃತಃ ಶರೋsಸ್ಯ ದಕ್ಷಿಣೇ ಕರೇ ॥೯.೭೯॥

ಸ್ವಯಂ ಸ ತೇನ ನಿರ್ಮ್ಮಿತೋ ಹತೌ ಮಧುಶ್ಚ ಕೈಟಭಃ ।
ಶರೇಣ ತೇನ ವಿಷ್ಣುನಾ ದದೌ ಚ ಲಕ್ಷ್ಮಣಾನುಜೇ ॥೯.೮೦ ॥

(ಶ್ರೀರಾಮ ಹೇಗೆ ಕಾಣಿಸುತ್ತಿದ್ದ ಎನ್ನುವ ವರ್ಣನೆ ಇಲ್ಲಿದೆ) 
ಸಹಸ್ರ ಸೂರ್ಯಮಂಡಲದಂತೆ ಹೊಳೆವ ಕಿರೀಟ,
ಕಪ್ಪಾದ  ಗುಂಗುರುಕೂದಲಿಂದೊಪ್ಪುವ ಲಲಾಟ.
ಸುಂದರವಾದ ದಿವ್ಯ ಮುಖಕಮಲ ಹೊಂದಿದವ,
ಕೆಂಪು ಕಣ್ತುದಿ,ಮಿಂಚಿನಂಥ ಕುಂಡಲ ಧರಿಸಿದವ.
ನಸುನಗೆಯ ಕೆಂದುಟಿಯ ಶ್ರೀರಾಮಚಂದ್ರ,
ಸಮಸ್ತ ವೇದರಸಕ್ಕವನ ತುಟಿಗಳೇ ಕೇಂದ್ರ.
ಸೂರ್ಯಕಾಂತಿಯ ಕೌಸ್ತುಭ ಧರಿಸಿದಂಥಾ ಕೊರಳು,
ಸಮಸ್ತ ಜಗವ ಹೊರುವ ದಪ್ಪ ಎತ್ತರದ ನೀಳ್ತೋಳು.
ಉರುಟು ಉದ್ದ ದಪ್ಪವಾದ ಎರಡು ತೋಳು,
ಶ್ರೀರಾಮಚಂದ್ರಗೆ ಚಿನ್ಹೆಗಳಿಂತಿದ್ದವವು ಕೇಳು.
ಬಲಗೈಯಲ್ಲಿ ಜಗದೆಲ್ಲ ದೈತ್ಯರ ನಾಶ ಮಾಡಿದಂಥ  ಬಾಣ,
ರಾಮನಿಂದ ಆಗಿ ಸ್ವೀಕರಿಸಲ್ಪಟ್ಟಿದ್ದರು ಶತ್ರುಘ್ನ ಲಕ್ಷ್ಮಣ.
ಅದೇ ಬಾಣದಿಂದ ಮಧುಕೈಟಭರು ಸೇರಿದ್ದರು ತಮ್ಮ ತಾಣ.

ಸ ಶತ್ರುಸೂದನೋsವಧೀನ್ಮಧೋಃ ಸುತಂ ರಸಾಹ್ವಯಮ್ ।
ಶರೇಣ ಯೇನ ಚಾಕಾರೋತ್ ಪುರೀಂ ಚ ಮಾಧುರಾಭಿಧಾಮ್ ॥೯.೮೧ ॥

ಸಮಸ್ತಸಾರಸಮ್ಭವಂ ಶರಂ ದಧಾರ ತಂ ಕರೇ ।
ಸ ವಾಮಬಾಹುನಾ ಧನುರ್ದ್ದಧಾರ ಶಾರ್ಙ್ಗಸಙ್ಜ್ಞಿತಮ್ ॥೯.೮೨ ॥

ಮಧುನಾಮಕ ದೈತ್ಯನ ಮಗ-ರಸದ ಹೆಸರುಳ್ಳ ಲವಣ,
ಶತ್ರುಘ್ನ ಅವನ ಕೊಂದಿದ್ದ ಬಳಸಿಕೊಂಡು ಇದೇ ಬಾಣ.
ಆ ಬಾಣದ ಸಹಾಯದಿಂದಾಗಿತ್ತು ಮಥುರಾಪಟ್ಟಣ ನಿರ್ಮಾಣ.
ರಾಮಚಂದ್ರನ ಬಲಗೈಯಲ್ಲಿತ್ತು ಎಲ್ಲಾ ಸಾರದ ಆ ಬಾಣ,
ಶ್ರೇಷ್ಠ ಶಾರ್ಙ್ಗಧನುಸ್ಸು ಸೇರಿತ್ತು ರಾಮನ ಎಡಗೈಯ ತಾಣ.

No comments:

Post a Comment

ಗೋ-ಕುಲ Go-Kula