Thursday 23 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 113 - 118

ಅಙ್ಗದಃ ಕಾಲತಸ್ತ್ಯಕ್ತ್ವಾ ದೇಹಮಾಪ ನಿಜಾಂ ತನುಮ್ ।
ರಾಮಾಜ್ಞಯೈವ ಕುರ್ವಾಣೋ ರಾಜ್ಯಂ ಕುಶಸಮನ್ವಿತಃ ॥೯.೧೧೩॥

ಅಂಗದ ಮತ್ತು ಕುಶ ರಾಮಾಜ್ಞೆಯಿಂದ ಮಾಡಿದರು ರಾಜ್ಯಭಾರ,
ಕಾಲಾಂತರದಲ್ಲಿ ದೇಹಬಿಟ್ಟು ಮೂಲರೂಪ ಸೇರಿದ ವ್ಯಾಪಾರ.

ವಿಭೀಷಣಶ್ಚ ಧರ್ಮ್ಮಾತ್ಮಾ ರಾಘವಾಜ್ಞಾಪುರಸ್ಕೃತಃ ।
ಸೇನಾಪತಿರ್ದ್ಧನೇಶಸ್ಯ ಕಲ್ಪಮಾವೀತ್ ಸ ರಾಕ್ಷಸಾನ್ ॥೯.೧೧೪॥

ವಿಭೀಷಣ ರಾಮಾಜ್ಞೆಯಂತೆ ಕುಬೇರನಿಗಾಗಿದ್ದ ವಿನೀತ,
ಸೇನಾಪತಿಯಾಗಿ ರಾಕ್ಷಸರ ರಕ್ಷಿಸಿದ ಕಲ್ಪಕಾಲ ಪರ್ಯಂತ

ರಾಮಾಜ್ಞಯಾ ಜಾಮ್ಬವಾಂಶ್ಚ ನ್ಯವಸತ್ ಪೃಥಿವೀತಳೇ ।
ಉತ್ಪತ್ತ್ಯರ್ತ್ಥಂ ಜಾಮ್ಬವತ್ಯಾಸ್ತದರ್ತ್ಥಂ ಸುತಪಶ್ಚರನ್ ॥೯.೧೧೫॥

ರಾಮಾಜ್ಞೆಯಂತೆ ಜಾಂಬವಂತ ಕಾಯುತ್ತಿದ್ದ ಜಾಂಬವತಿಯ ಉತ್ಪತ್ತಿ,
ಭೂಮಿಯಲ್ಲಿ ಬಹುಕಾಲ ಅನುಸರಿಸಿಕೊಂಡಿದ್ದ ತಪಸ್ಸಿನ ಪ್ರವೃತ್ತಿ.

ಅಥೋ ರಘೂಣಾಂ ಪ್ರವರಃ ಸುರಾರ್ಚ್ಚಿತಃ ಸ್ವಯೈಕತನ್ವಾ ನ್ಯವಸತ್ ಸುರಾಲಯೇ ।
ದ್ವಿತೀಯಯಾ ಬ್ರಹ್ಮಸದಸ್ಯಧೀಶ್ವರಸ್ತೇನಾರ್ಚ್ಚಿತೋsಥಾಪರಾಯಾ ನಿಜಾಲಯೇ ॥೯.೧೧೬॥

ತದನಂತರ ರಘುಕುಲೋತ್ತಮ ಶ್ರೀರಾಮ,
ತೋರಿದ ತನ್ನ ಪ್ರಿಯರೊಂದಿಗಿರುವ ನೇಮ.
ದೇವತೆಗಳಿಂದ ಪೂಜಿತನಾಗುತ್ತ ದೇವತೆಗಳೊಂದಿಗೆ ಒಂದು ರೂಪದಿಂದ,
ಸತ್ಯಲೋಕದಿ ಬ್ರಹ್ಮನಿಂದ ಪೂಜಿತನಾಗುತ್ತ ಇನ್ನೊಂದು ರೂಪದಿಂದ,
ವಿಷ್ಣುಲೋಕದೆಡೆಗೆ ಸಾಗಿದನಂತೆ ರಾಮಚಂದ್ರ ಮತ್ತೊಂದು ರೂಪದಿಂದ.

ತೃತೀಯರೂಪೇಣ ನಿಜಂ ಪದಂ ಪ್ರಭುಂ ವ್ರಜನ್ತಮುಚ್ಚೈರನುಗಮ್ಯ ದೇವತಾಃ ।
ಅಗಮ್ಯಮರ್ಯ್ಯಾದಮುಪೇತ್ಯ ಚ ಕ್ರಮಾದ್ ವಿಲೋಕಯನ್ತೋsತಿವಿದೂರತೋsಸ್ತುವನ್ ॥೯.೧೧೭ ॥

ಮೂರನೆಯ ರೂಪದಿಂದ ವಿಷ್ಣುಲೋಕದತ್ತ ಹೊರಟ ನಾರಾಯಣ,
ಅನುಸರಿಸಿದ ದೇವತೆಗಳಿಗೆ ಕಂಡ ಇದ್ದಂತವರ ಯೋಗ್ಯತಾ ಹೂರಣ.
ದೂರದಿಂದಲೇ ತೋರಿದರು ಉತ್ಕೃಷ್ಟವಾದ ಭಕ್ತಿ,
ಜಗಜ್ಜನಕಗೆ ನಮಿಸುತ್ತಾ ಸ್ತೋತ್ರ ಮಾಡಿದ ಆ ರೀತಿ.

ಬ್ರಹ್ಮಾ ಮರುನ್ಮಾರುತಸೂನುರೀಶಃ ಶೇಷೋ ಗರುತ್ಮಾನ್ ಹರಿಜಃ ಶಕ್ರಕಾದ್ಯಾಃ ।
ಕ್ರಮಾದನುವ್ರಜ್ಯ ತು ರಾಘವಸ್ಯ ಶಿರಸ್ಯಥಾsಜ್ಞಾಂ ಪ್ರಣಿಧಾಯ ನಿರ್ಯ್ಯಯುಃ ॥೯.೧೧೮॥

ಬ್ರಹ್ಮ, ಮುಖ್ಯಪ್ರಾಣ, ಹನುಮಂತ, ಸದಾಶಿವ, ಶೇಷ, ಗರುಡ, ಕಾಮ, ಇಂದ್ರ,
ಯೋಗ್ಯತಾನುಸಾರ ಅನುಸರಿಸಿದವರು ಮರಳಿದರು ಆಜ್ಞಾಪಿಸಲು ರಾಮಚಂದ್ರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula