ಪುಂವ್ಯತ್ಯಾಸೇನ ಚೋಕ್ತಿಃ ಸ್ಯಾತ್ ಪುರಾಣಾದಿಷು ಕುತ್ರಚಿತ್ ।
ಕೃಷ್ಣಾಮಾಹ ಯಥಾ ಕೃಷ್ಣೋ ಧನಞ್ಜಯಶರೈರ್ಹತಾನ್ ॥ ೧೩೦॥
ಶತಂ ದುರ್ಯ್ಯೋಧನಾದೀಂಸ್ತೇ ದರ್ಶಯಿಷ್ಯ ಇತಿ ಪ್ರಭುಃ ।
ಭೀಮಸೇನಹತಾಸ್ತೇ ಹಿ ಜ್ಞಾಯನ್ತೇ ಬಹುವಾಕ್ಯತಃ ॥ ೧೩೧॥
ಪುರಾಣಗಳಲ್ಲಿ
ಕಾಣುವುದುಂಟು ಕೆಲವೊಂದು ಪುರುಷವ್ಯತ್ಯಾಸದ ಪ್ರಸಂಗ,
ಕೃಷ್ಣ
ದ್ರೌಪದಿಗ್ಹೇಳುವುದು ಅರ್ಜುನನಿಂದ ನೂರು ದುರ್ಯೋಧನಾದಿಗಳ ಪ್ರಾಣಭಂಗ.
ಇದು ಭಾರತದಲ್ಲಿ
ಕಂಡುಬರುವ ವಾಕ್ಯವದು ಸಂಕ್ಷಿಪ್ತ,
ಬಹುವಾಕ್ಯದಂತೆ
ಕೌರವಾದಿಗಳಾದದ್ದು ಭೀಮನಿಂದ ಹತ.
ವಿಸ್ತಾರೇ ಭೀಮನಿಹತಾಃ ಸಙ್ಕ್ಷೇಪೇsರ್ಜ್ಜನಪಾತಿತಾಃ
।
ಉಚ್ಯನ್ತೇ ಬಹವಶ್ಚಾನ್ಯೇ ಪುಂವ್ಯತ್ಯಾಸಸಮಾಶ್ರಯಾತ್ ॥೯.೧೩೨ ॥
ವಿಸ್ತಾರೇ ಕೃಷ್ಣನಿಹತಾ ಬಲಭದ್ರಹತಾ ಇತಿ ।
ಉಚ್ಯನ್ತೇ ಚ ಕ್ವಚಿತ್ ಕಾಲವ್ಯತ್ಯಾಸೋsಪಿ
ಕ್ವಚಿದ್ ಭವೇತ್ ॥೯.೧೩೩॥
ವಿಸ್ತಾರದಲ್ಲಿ
ಹೇಳಲ್ಪಟ್ಟಿದೆ ಭೀಮನಿಂದಾಗಿದೆ ದುರ್ಯೋಧನಾದಿಗಳ ಮರಣ,
ಸಂಕ್ಷೇಪದಲ್ಲಿ
ಹೇಳಲ್ಪಟ್ಟಿದೆ ಅರ್ಜುನನಾದ ಕೌರವಾದಿಗಳ ಮರಣಕ್ಕೆ ಕಾರಣ.
ಈ ಪುರುಷ
ವ್ಯತ್ಯಾಸವ ತಿಳಿಸುವುದು ಎರಡರ ಅಧ್ಯಯನದ ಹೂರಣ.
ವಿಸ್ತಾರದಲ್ಲಿ
ಕೃಷ್ಣನಿಂದ ಹತರಾದರೆಂದು ನಿರೂಪಣೆ,
ಸಂಕ್ಷೇಪದಲ್ಲಿ
ಬಲರಾಮನಿಂದ ಹತರೆಂದು ವಿವರಣೆ.
ಬೇಕದಕೆ
ಬಹುವಾಕ್ಯಗಳ ಸಮೀಕರಣದನುಸರಣೆ.
ಯಥಾ ಸುಯೋಧನಂ ಭೀಮಃ ಪ್ರಾಹಸತ್ ಕೃಷ್ಣಸನ್ನಿಧೌ c ।
ಇತಿ ವಾಕ್ಯೇಷು ಬಹುಷು ಜ್ಞಾಯತೇ ನಿರ್ಣ್ಣಯಾದಪಿ ॥೯.೧೩೪ ॥
ಅನಿರ್ಣ್ಣಯೇ ತು ಕೃಷ್ಣಸ್ಯ ಪೂರ್ವಮುಕ್ತಾ ಗತಿಸ್ತತಃ ।
ವ್ಯತ್ಯಾಸಾಸ್ತ್ವೇವಮಾದ್ಯಾಶ್ಚ ಪ್ರಾತಿಲೋಮ್ಯಾದಯಸ್ತಥಾ ॥೯.೧೩೫॥
ದೃಶ್ಯನ್ತೇ ಭಾರತಾದ್ಯೇಷು ಲಕ್ಷಣಗ್ರನ್ಥತಶ್ಚ ತೇ ।
ಜ್ಞಾಯನ್ತೇ ಬಹುಭಿರ್ವಾಕ್ಯೈರ್ನ್ನಿರ್ಣ್ಣಯಗ್ರನ್ಥತಸ್ತಥಾ ॥೯.೧೩೬॥
ತಸ್ಮಾದ್ ವಿನಿರ್ಣ್ಣಯಗ್ರನ್ಥಾನಾಶ್ರಿತ್ಯೈವ ಚ ಲಕ್ಷಣಮ್ ।
ಬಹುವಾಕ್ಯಾನುಸಾರೇಣ ನಿರ್ಣ್ಣಯೋsಯಂ ಮಯಾ
ಕೃತಃ ॥೯.೧೩೭॥
ಇಂದ್ರಪ್ರಸ್ಥದಲ್ಲಿ
ಜಾರಿಬಿದ್ದ ದುರ್ಯೋಧನನ ಭೀಮ ಅಪಹಾಸ್ಯ ಮಾಡಿದ ನಿರೂಪಣೆ,
ಕೃಷ್ಣಸಾನ್ನಿಧ್ಯದಲ್ಲಿ
ಭೀಮ ಇದ ಮಾಡಿದ್ದು ಎಂದು ಬಹುವಾಕ್ಯಗಳ ವಿಶೇಷ ವಿವರಣೆ.
ನಿರ್ಣಯವಿರದಿದ್ದರೆ
ಕೃಷ್ಣ ಇಂದ್ರಪ್ರಸ್ಥದಲ್ಲಿರಲಿಲ್ಲ ಎಂಬ ಅರ್ಥ,
ಲಕ್ಷಣಗ್ರಂಥ ಬಹುವಾಕ್ಯ ನಿರ್ಣಯಗಳ ಮಥಿಸಿಟ್ಟರು ಆನಂದತೀರ್ಥ.[Contributed by Shri Govind Magal]
No comments:
Post a Comment
ಗೋ-ಕುಲ Go-Kula