Monday 13 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 53 - 59

ಏಕಾನ್ತೇ ತು ಯದಾ ರಾಮಶ್ಚಕ್ರೇ ರುದ್ರೇಣ ಸಂವಿದಮ್ ।
ದ್ವಾರಪಾಲಂ  ಸ ಕೃತವಾಂಸ್ತದಾ ಲಕ್ಷ್ಮಣಮೇವ ಸಃ ॥೯.೫೩॥

ಯದ್ಯತ್ರ ಪ್ರವಿಶೇತ್ ಕಶ್ಚಿದ್ದನ್ಮಿ ತ್ವೇತಿ ವಚೋ ಬ್ರುವನ್ ।
ತದನ್ತರಾssಗತಮೃಷಿಂ ದೃಷ್ಟ್ವಾsಮನ್ಯತ ಲಕ್ಷ್ಮಣಃ ॥೯.೫೪ ॥

ದುರ್ವಾಸಸಃ ಪ್ರತಿಜ್ಞಾ ತು ರಾಮಂ ಪ್ರಾಪ್ಯೈವ ಭಜ್ಯತಾಮ್ ।
ಅನ್ಯಥಾ ತ್ವಯಶೋ ರಾಮೇ ಕರೋತ್ಯೇಷ ಮುನಿರ್ದ್ಧ್ರುವಮ್ ॥ ೯.೫೫ ॥

ರಾಘವೋ ಘ್ನನ್ನಪಿ ತು ಮಾಂ ಕರೋತ್ಯೇವ ದಯಾಂ ಮಯಿ ।
ಇತಿ ಮತ್ವಾ ದದೌ ಮಾರ್ಗ್ಗಂ ತು ದುರ್ವಾಸಸೇ ತದಾ .೫೬

ರಾಮಚಂದ್ರ ಏಕಾಂತದಲ್ಲಿ ಮಾತುಕತೆಯಾಡುವ ಕ್ಷಣ,
ರಾಮನಿಂದ ದ್ವಾರಪಾಲಕನಾಗಿ ನೇಮಿಸಲ್ಪಟ್ಟವ ಲಕ್ಷ್ಮಣ.
ಒಂದು ವೇಳೆ ಯಾರದಾದರೂ ಆದರೆ ಪ್ರವೇಶ,
ನಿನ್ನ ಕೊಲ್ಲುತ್ತೇನೆ ಎಂದು ಲಕ್ಷ್ಮಣಗೆ ರಾಮನಾದೇಶ.
ಅದೇ ಸಮಯಕ್ಕೆ ಮುನಿ ದೂರ್ವಾಸರ ಆಗಮನ,
ಲಕ್ಷ್ಮಣನ ಸಮಯೋಚಿತ ಚಿಂತನೆಯ ತೀರ್ಮಾನ.
ದೂರ್ವಾಸರ ಪ್ರತಿಜ್ಞೆ ರಾಮನ ಹೊಂದಿ ಮುರಿಯಲ್ಪಡಲಿ,
ಈ ಮುನಿಯಿಂದ ರಾಮಚಂದ್ರಗೆ ಅಪಯಶಸ್ಸು ಬಾರದಿರಲಿ.
ರಾಮಾಜ್ಞೆ ಉಲ್ಲಂಘಿಸಿ ದೂರ್ವಾಸರ ಬಿಟ್ಟರೆ ತನ್ನ ಸಂಹಾರ,
ರಾಮ ತನ್ನಲ್ಲಿ ದಯೆ ತೋರುವನೆಂದು ಮುನಿಯ ಬಿಟ್ಟ ವ್ಯಾಪಾರ.

ಸ್ವಲೋಕಗಮನಾಕಾಙ್ಕ್ಷೀ ಸ್ವಯಮೇವ ತು ರಾಘವಃ ।
ಇಯಂ ಪ್ರತಿಜ್ಞಾ ಹೇತುಃ ಸ್ಯಾದಿತಿ ಹನ್ಮೀತಿ ಸೋsಕರೋತ್ ॥೯.೫೭॥

ಸರ್ವಜ್ಞ ರಾಮಗೆ ತಿಳಿಯದೇ ಲಕ್ಷ್ಮಣ ತನ್ನ ಲೋಕಕ್ಕೆ ಹೋಗುವನೆಂದು,
ಹೀಗೆಲ್ಲಾ ನಡೆಯಲೆಂದೇ ಪ್ರತಿಜ್ಞೆ ಮಾಡಿದ್ದ ಲಕ್ಷ್ಮಣನ ಕೊಲ್ಲುವೆನೆಂದು.

ಅತ್ಯನ್ತಬನ್ಧುನಿದನಂ ತ್ಯಾಗ ಏವೇತಿ ಚಿನ್ತಯನ್ ।
ಯಾಹಿ ಸ್ವಲೋಕಮಚಿರಾದಿತ್ಯುವಾಚ ಸ ಲಕ್ಷ್ಮಣಮ್ ॥೯.೫೮ ॥

ಹತ್ತಿರ ಬಂಧುಗಳಲ್ಲಿ ಕೊಂದರಷ್ಟೇ ಅಲ್ಲ ಸಂಹಾರ,
ಅವರ ತ್ಯಾಗವೂ ಸಮ ಎಂದುಕೊಂಡ ರಾಮಚಂದ್ರ.
ನಿನ್ನ ಲೋಕ ಸೇರೆಂದು ಲಕ್ಷ್ಮಣಗೆ ಹೇಳಿದ ವ್ಯಾಪಾರ.

ಇತ್ಯುಕ್ತಃ ಸ ಯಯೌ ಜಗದ್ಭವಭಯಧ್ವಾನ್ತಚ್ಛಿದಂ ರಾಘವಂ
ಧ್ಯಾಯನ್ನಾಪ ಚ ತತ್ಪದಂ ದಶಶತೈರ್ಯ್ಯುಕ್ತೋ ಮುಖಾಮ್ಭೋರುಹೈಃ ।
ಆಸೀಚ್ಛೇಷಮಹಾಫಣೀ ಮುಸಲಭೃದ್ ದಿವ್ಯಾಕೃತಿರ್ಲ್ಲಾಙ್ಗಲೀ ।
ಪರ್ಯ್ಯಙ್ಕತ್ವಮವಾಪ ಯೋ ಜಲನಿಧೌ ವಿಷ್ಣೋಃ ಶಯಾನಸ್ಯ ಚ ॥೯.೫೯॥

ಈರೀತಿಯಾಗಿ ಹೇಳಲ್ಪಟ್ಟವನಾದ ಲಕ್ಷ್ಮಣ,
ಮಾಡಿದ ಭವಭಯಹರಣ ಹರಿಯ ಧ್ಯಾನ.
ಸಾವಿರ ಹೆಡೆಗಳುಳ್ಳ ಶೇಷನಾಗಿ,
ಒನಕೆ ನೇಗಿಲುಗಳ ಹಿಡಿದವನಾಗಿ,
ಕ್ಷೀರಸಾಗರದಿ ಹರಿಯ ಹಾಸಿಗೆಯಾಗಿ,
ಅವತಾರ ಮುಗಿಸಿದ ಮೂಲರೂಪ ಸೇರಿದವನಾಗಿ.

No comments:

Post a Comment

ಗೋ-ಕುಲ Go-Kula