ಅಥಾsಹ ವಾಯುನನ್ದನಂ ಸ ರಾಘವಃ
ಸಮಾಶ್ಲಿಷನ್ ।
ತವಾಹಮಕ್ಷಗೋಚರಃ ಸದಾ ಭವಾಮಿ ನಾನ್ಯಥಾ ॥೯.೬೩॥
ಆದಮೇಲೆ ಶ್ರೀರಾಮ
ಸ್ವಧಾಮಕ್ಕೆ ತೆರಳುವ ಘೋಷಣೆ,
ಅದರಂತೆ ಎಲ್ಲರದೂ
ಆದ ಮೇಲೆ ಅಲ್ಲಿ ಜಮಾವಣೆ.
ಹನುಮನ ತಬ್ಬಿ
ನಾನಿನಗೆಂದೂ ವ್ಯಕ್ತ ಎಂದ ರಾಮನ ಕರುಣೆ.
ತ್ವಯಾ ಸದಾ ಮಹತ್ ತಪಃ ಸುಕಾರ್ಯ್ಯಮುತ್ತಮೋತ್ತಮಮ್ ।
ತದೇವ ಮೇ ಮಹತ್ ಪ್ರಿಯಂ ಚಿರಂ ತಪಸ್ತ್ವಯಾ ಕೃತಮ್ ॥೯.೬೪ ॥
ನಿನ್ನಿಂದ ಹೀಗೆಯೇ
ಮಾಡಲ್ಪಡಬೇಕು ಮಹಾ ತಪದ ಯಾಗ,
ಜೀವಗಣರಲ್ಲಿ
ಯಾರಿಗೂ ಸಾಧ್ಯವಿರದ ಆ ವಿಶೇಷ ಯೋಗ.
ಅದು ಎನಗೆ ಅತ್ಯಂತ
ಪ್ರಿಯಕರ,
ಮಾಡುತ್ತಿರುವೆ ಅದ
ನೀನು ನಿರಂತರ.
ಮುಂದೆಯೂ ನೀ
ಮಾಡುವೆ ಆ ಕಾರ್ಯ.
ದಶಾಸ್ಯಕುಮ್ಭಕರ್ಣ್ಣಕೌ ಯಥಾ ಸುಶಕ್ತಿಮಾನಪಿ।
ಜಘನ್ಥ ನ ಪ್ರಿಯಾಯ ಮೇ ತಥೈವ ಜೀವ ಕಲ್ಪಕಮ್ ॥೯.೬೫॥
ರಾವಣ ಕುಂಭಕರ್ಣರ
ಕೊಲ್ಲಲು ನೀನಾಗಿದ್ದರೂ ಶಕ್ತ,
ನೀನು ಅವರುಗಳನ್ನು
ಕೊಲ್ಲಲಿಲ್ಲ ಕೇವಲ ನನ್ನ ಪ್ರೀತ್ಯರ್ಥ.
ನನ್ನ ಪ್ರೀತಿಗಾಗಿ
ನೀ ಜೀವಿಸು ಕಲ್ಪವಾಗುವವರೆಗೆ ಪೂರ್ತ.
ಪಯೋಬ್ಧಿಮಧ್ಯಗಂ ಚ ಮೇ ಸುಸದ್ಮ ಚಾನ್ಯದೇವ ವಾ ।
ಯಥೇಷ್ಟತೋ ಗಮಿಷ್ಯಸಿ ಸ್ವದೇಹಸಂಯುತೋsಪಿ ಸನ್
॥೯.೬೬॥
ಕ್ಷೀರಸಾಗರದ
ಮಧ್ಯದಲ್ಲಿರುವ ನನ್ನ ಆ ಧಾಮ,
ಇತರ ಮನೆಗಳಾದ
ಅನಂತಾಸನ ವೈಕುಂಠ-ನಾಮ.
ನನ್ನ ಮನೆಗಳ
ಬಾಗಿಲುಗಳು ನಿನಗೆ ಸದಾ ಮುಕ್ತ,
ಬಯಸಿದಾಗ ಬರಬಹುದು
ನೀ ನಿನ್ನ ದೇಹ ಸಮೇತ.
ಯಥೇಷ್ಟಭೋಗಸಂಯುತಃ ಸುರೇಶಗಾಯಕಾದಿಭಿಃ ।
ಸಮೀಢ್ಯಮಾನಸದ್ಯಶಾ ರಮಸ್ವ ಮತ್ಪುರಃ ಸದಾ ॥೯.೬೭ ॥
ತವೇಪ್ಸಿತಂ ನ ಕಿಞ್ಚನ ಕ್ವಚಿತ್ ಕುತಶ್ಚಿದೇವ ವಾ ।
ಮೃಷಾ ಭವೇತ್ ಪ್ರಿಯಶ್ಚ ಮೇ ಪುನಃಪುನರ್ಭವಿಷ್ಯಸಿ ॥೯.೬೮ ॥
ನಿನಗೆ ಬೇಕಾದಾಗ
ಪಡೆಯಬಹುದು ಬಯಸಿದ್ದನ್ನ,
ಗಂಧರ್ವರು
ಮಾಡುತ್ತಿರುತ್ತಾರೆ ನಿನ್ನೆಶಸ್ಸಿನ ಗಾಯನ.
ನೀ ಯಶಸ್ಸಿನ ಶಿಖರ; ನನ್ನೆದುರು ನಿನ್ನದಾಗಲೀ ಸಂತಸದ ವಿಹಾರ,
ನಿನ್ನ ಬಯಕೆ ಎಂದೂ ಎಲ್ಲೆಲ್ಲೂ ಸಾಕಾರ;ನೀನು
ನನಗೆ ಸದಾ ಪ್ರಿಯಕರ.[Contributed by Shri Govind Magal]
No comments:
Post a Comment
ಗೋ-ಕುಲ Go-Kula