Monday 6 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 17 - 21

ದೇವ್ಯಾಂ ಸ ಚಾಜನಯದಿನ್ದ್ರಹುತಾಶನೌ ದ್ವೌ ಪುತ್ರೌ ಯಮೌ ಕುಶಲವೌ ಬಲಿನೌ 
ಗುಣಾಢ್ಯೌ ।
ಶತ್ರುಘ್ನತೋ ಲವಣಮುದ್ಬಣಬಾಣದಗ್ಧಂ ಕೃತ್ವಾ ಚಕಾರ ಮಧುರಾಂ 
ಪುರಮುಗ್ರವೀರ್ಯ್ಯಃ  ॥೯.೧೭॥

ರಾಮಚಂದ್ರ ಸೀತಾದೇವಿಯಲ್ಲಿ ಇಂದ್ರಾಗ್ನಿ ಸ್ವರೂಪ ಕುಶ ಲವರ ಅವಳಿ ಮಕ್ಕಳಾಗಿ ಪಡೆದ,
ಉತ್ಕೃಷ್ಟ ಶಕ್ತಿಯ ವಿಶಿಷ್ಠ ಬಾಣ ಶತ್ರುಘ್ನಗೆ ಕೊಟ್ಟು ಲವಣಾಸುರನ ಸಂಹಾರ ಮಾಡಿಸಿದ.
ಲವಣಾಸುರನಿದ್ದ ಜಾಗವದು ಮಧುವನ,
ಅಭಿವೃದ್ಧಿಗೊಳಿಸಿ ಮಾಡಿದ ಮಥುರಾಪಟ್ಟಣ.




ಕೋಟಿತ್ರಯಂ ಸ ನಿಜಘಾನ ತಥಾsಸುರಾಣಾಂ ಗನ್ಧರ್ವಜನ್ಮ ಭರತೇನ ಸತಾ ಚ 
ಧರ್ಮ್ಮಮ್ ।
ಸಂಶಿಕ್ಷಯನ್ನಯಜದುತ್ತಮಕಲ್ಪಕೈಃ ಸ್ವಂ ಯಜ್ಞೈರ್ಭವಾಜಮುಖಸತ್ಸಚಿವಾಶ್ಚ 
ಯತ್ರ  ॥೯.೧೮॥

ಆನಂತರ ಶ್ರೀರಾಮಚಂದ್ರ ಮಾಡಿಸಿದ ಭರತನ ಮುಖಾಂತರ,
ಗಂಧರ್ವರೂಪದ ಮೂರುಕೋಟಿ ಅಸುರಸೇನೆಯ ಸಂಹಾರ.
ಸಜ್ಜನರಿಗೆ ಧರ್ಮ ತಿಳಿಸಲು ,ಲೋಕಶಿಕ್ಷಣಾರ್ಥ ತೋರಿಕೆಯ ಕಾರ್ಯ,
ಬ್ರಹ್ಮರುದ್ರಾದಿಗಳ ನೆರವಲ್ಲಿ ತನ್ನ ತಾನೇ ಪೂಜೆಗೊಂಡ ರಾಮಚಂದ್ರ.

ಅಥಶೂದ್ರತಪಶ್ಚರ್ಯ್ಯಾನಿಹತಂ ವಿಪ್ರಪುತ್ರಕಮ್ ।
ಉಜ್ಜೀವಯಾಮಾಸ ವಿಭುರ್ಹತ್ವಾ ತಂ ಶೂದ್ರತಾಪಸಮ್ ॥೯.೧೯॥

ಕೆಲ ಕಾಲಾನಂತರ ನೀಚ ಉದ್ದೇಶದ ದುಷ್ಟ ಶೂದ್ರ ಶಂಬೂಕನ ಸಂಹಾರ,
ವೃದ್ಧ ಬ್ರಾಹ್ಮಣ ಪುತ್ರನಿಗೆ ರಾಮ ಮಾಡಿದ ಮರು ಜೀವದಾನದ ಕಾರ್ಯ.

ಜಙ್ಘನಾಮಾsಸುರಃ ಪೂರ್ವಂ ಗಿರಿಜಾವರದಾನತಃ ।
ಬಭೂವ ಶೂದ್ರಃ ಕಲ್ಪಾಯುಃ ಸ ಲೋಕಕ್ಷಯಕಾಮ್ಯಯಾ ॥೯.೨೦॥

ಜಂಘ ಎಂಬ ಒಬ್ಬ ಅಸುರ,
ಅವನಿಗಿತ್ತು ಪಾರ್ವತಿಯ ವರ.
ಕಲ್ಪಾಂತ್ಯದವರೆಗೂ ಬದುಕಿರುವ ಶಕ್ತಿ,
ಲೋಕನಾಶ ಅವನ ತಪಸ್ಸಿನ ಹಿಂದಿನ ಯುಕ್ತಿ.

ತಪಶ್ಚಚಾರ ದುರ್ಬುದ್ಧಿರಿಚ್ಛನ್ ಮಾಹೇಶ್ವರಂ ಪದಮ್ ।
ಅನನ್ಯವಧ್ಯಂ ತಂ ತಸ್ಮಾಜ್ಜಘಾನ ಪುರುಷೋತ್ತಮಃ ॥೯.೨೧॥

ರುದ್ರ ಪದವಿಯ ನೀಚ ಬಯಕೆ ತಪಸ್ಸಿನ ಹಿಂದಿನ  ಉದ್ದೇಶ,
ವರ ನೀಡಿದ ತಾಯಿ ಪಾರ್ವತಿಯ ಪಡೆವ ಕಾಮಾವೇಶ.
ಶಂಬೂಕ ಬೇರ್ಯಾರೂ ಕೊಲ್ಲಲಾಗದ ಇಂಥಾ ನೀಚ ತಪೋನಿರತ,
ಸ್ವತಃ ನಾರಾಯಣನೇ ಶ್ರೀರಾಮಚಂದ್ರನಾಗಿ ಅವನ ಕೊಂದಾತ.

No comments:

Post a Comment

ಗೋ-ಕುಲ Go-Kula