Wednesday 8 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 27 - 33

ಅಥಕೇಚಿದಾಸುರಸುರಾಃ ಸುರಾಣಕಾ ಇತ್ಯುರುಪ್ರಥಿತಪೌರುಷಾಃ ಪುರಾ ।
ತೇ ತಪಃ ಸುಮಹದಾಸ್ಥಿತಾ ವಿಭುಂ ಪದ್ಮಸಮ್ಭವಮವೇಕ್ಷ್ಯ ಚೋಚಿರೇ ॥೯.೨೭॥

ಸುರಾಣಕರು ಎಂದು ಪ್ರಸಿದ್ಧವಾದ ವಿಶೇಷ ಬಲದ ಅಸುರರಿದ್ದರು,
ಅವರು ತಮ್ಮ ತಪಸ್ಸಿಗೊಲಿದ ಬ್ರಹ್ಮದೇವನಲ್ಲಿ ಹೀಗೆ ಹೇಳಿದರು.

ಭೂರಿಪಾಕಕೃತಿನೋsಪಿ ನಿಶ್ಚಯಾನ್ಮುಕ್ತಿಮಾಪ್ನುಮ ಉದಾರಸದ್ಗುಣ ।
ಇತ್ಯುದೀರಿತಮಜೋsವಧಾರ್ಯ್ಯ ತತ್ ಪ್ರಾಹ ಚ ಪ್ರಹಸಿತಾನನಃ ಪ್ರಭುಃ ॥೯.೨೮॥

ಉತ್ಕೃಷ್ಟ ಸದ್ಗುಣಭರಿತನಾದ ಬ್ರಹ್ಮದೇವಾ ನಿನಗೆ ನಮಸ್ಕಾರ,
ಪಾಪಕರ್ಮಿಷ್ಟರಾಗಿದ್ದರೂ ನಮಗಾಗಬೇಕು ಮೋಕ್ಷಸಾಕ್ಷಾತ್ಕಾರ.
ಮುಗುಳ್ನಕ್ಕ ಬ್ರಹ್ಮದೇವ ಸೂಚಿಸುತ್ತಾನೆ -ವರ -ಪರಿಹಾರ.

ಯಾವದೇವ ರಮಯಾ ರಮೇಶ್ವರಂ ನೋ ವಿಯೋಜಯಥ ಸದ್ಗುಣಾರ್ಣ್ಣವಮ್ ।
ತಾವದುಚ್ಚಮಪಿ ದುಷ್ಕೃತಂ ಭವನ್ಮೋಕ್ಷಮಾರ್ಗ್ಗಪರಿಪನ್ಥಿ ನೋ ಭವೇತ್ ॥೯.೨೯॥

ಎಲ್ಲಿಯವರೆಗೆ ರಮಾ ರಮೇಶ್ವರರು ಆಗುವುದಿಲ್ಲವೋ ಬೇರ್ಪಡೆ,
ಅಲ್ಲೀವರೆಗೆ ನಿಮ್ಮ ತಪ್ಪುಗಳಾಗುವುದಿಲ್ಲ ಮೋಕ್ಷಮಾರ್ಗಕ್ಕೆ ತಡೆ.

ಇತ್ಯುದೀರಿತಮವೇತ್ಯ ತೇSಸುರಾಃ ಕ್ಷಿಪ್ರಮೋಕ್ಷಗಮನೋತ್ಸುಕಾಃ ಕ್ಷಿತೌ ।
ಸಾಧನೋಪಚಯಕಾಙ್ಕ್ಷಿಣೋ ಹರೌ ಶಾಸತಿ ಕ್ಷಿತಿಮಶೇಷತೋSಭವನ್ ॥೯.೩೦॥

ಹೀಗೆ ಬ್ರಹ್ಮದೇವನಿಂದ ಅಸುರರು ವರ ಪಡೆಯುತ್ತಾರೆ,
ಸಾಧನೆಗಾಗಿ ರಾಮನಾಳ್ವಿಕೆಯ ಭುವಿಯಲ್ಲಿ ಹುಟ್ಟುತ್ತಾರೆ.

ತಾನನಾದಿಕೃತದೋಷಸಞ್ಚಯೈರ್ಮ್ಮೋಕ್ಷಮಾರ್ಗ್ಗಗತಿಯೋಗ್ಯತೋಜ್ಝಿತಾನ್ ।
ಮೈಥಿಲಸ್ಯ ತನಯಾ ವ್ಯಚಾಲಯನ್ಮಾಯಯಾ ಸ್ವತನುವಾ ಸ್ವಮಾರ್ಗ್ಗತಃ ॥೯.೩೧॥

ಯೋಗ್ಯತೆಯಿರದ ಪಾಪಿಷ್ಟ ಸುರಾಣಕರಿಗೆ ಸೀತಾಮಾತ,
ದುರ್ಗಾರೂಪದ ಮಾಯೆಯಿಂದ ಮಾಡುತ್ತಾಳೆ ಮಾರ್ಗಚ್ಯುತ.

ಆಜ್ಞಯೈವ ಹಿ ಹರೇಸ್ತು ಮಾಯಯಾ ಮೋಹಿತಾಸ್ತು ದಿತಿಜಾ ವ್ಯನಿನ್ದಯನ್ ।
ರಾಘವಂ ನಿಶಿಚರಾಹೃತಾಂ ಪುನರ್ಜ್ಜಾನಕೀಂ ಜಗೃಹ ಇತ್ಯನೇಕಶಃ ॥೯.೩೨॥

ಭಗವದಾಜ್ಞೆಯಂತೆ ದುರ್ಗೆಯಿಂದ ಪ್ರೇರಿತ ದೈತ್ಯರು,
ಶ್ರೀರಾಮಚಂದ್ರನ ನಿಂದನೆ ಮಾಡಲಾರಂಭಿಸಿದರು.
ರಾವಣ ಹೊತ್ತೊಯ್ದ ಸೀತ ಕಳಂಕಿತ,
ರಾಮನಿಂದ ಹೇಗಾಗುತ್ತಾಳೆ ಸ್ವೀಕೃತ.
ಹೀಗೆ ವಿಧವಿಧವಾದ ದೈವ ನಿಂದನೆ,
ಹಾಗೇ ಆಗಬೇಕಿತ್ತವರುಗಳ ಸಾಧನೆ.

ಬ್ರಹ್ಮವಾಕ್ಯಮೃತಮೇವ ಕಾರಯನ್ ಪಾತಯಂಸ್ತಮಸಿ ಚಾನ್ಧ ಆಸುರಾನ್ ।
ನಿತ್ಯಮೇವ ಸಹಿತೋsಪಿ ಸೀತಯಾ ಸೋsಜ್ಞಸಾಕ್ಷಿಕಮಭೂದ್ ವಿಯುಕ್ತವತ್ ॥೯.೩೩॥

ಸತ್ಯವಾಗಿಸಲು ಬ್ರಹ್ಮ ಸುರಾಣಕರಿತ್ತಿದ್ದ ವರ,
ತೋರಲು ದೈತ್ಯರಿಗೆ ಅಂಧಂತಮಸ್ಸಿನ ದ್ವಾರ.
ಇದ್ದರೂ ಲಕ್ಷ್ಮೀನಾರಾಯಣರಿಗೆ ವಿಯೋಗವೇ ಇರದ ಸ್ಥಿತಿ,
ರಾಮ ತೋರಿಕೊಂಡ ಸೀತೆಯಿಂದ ಬೇರೆಯಾದಂಥ ರೀತಿ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula