ಅಥ ಬ್ರಹ್ಮಾ ಹರಿಂ ಸ್ತುತ್ವಾ ಜಗಾದೇದಂ ವಚೋ ವಿಭುಮ್ ।
ತ್ವದಾಜ್ಞಯಾ ಮಯಾ ದತ್ತಂ ಸ್ಥಾನಂ ದಶರಥಸ್ಯ ಹಿ ॥೯.೯೪ ॥
ಮಾತೄಣಾಂ ಚಾಪಿ ತಲ್ಲೋಕಸ್ತ್ವಯುತಾಬ್ದಾದಿತೋsಗ್ರತಃ ।
ಅನರ್ಹಾಯಾಸ್ತ್ವಯಾssಜ್ಞಪ್ತಾ
ಕೈಕೇಯ್ಯಾ ಅಪಿ ಸದ್ಗತಿಃ ॥೯.೯೫ ॥
ಸೂತ್ವಾ ತು ಭರತಂ ನೈಷಾ ಗಚ್ಛೇತ ನಿರಯಾನಿತಿ ।
ತಥಾsಪಿ ಸಾ ಯದಾವೇಶಾಚ್ಚಕಾರ
ತ್ವಯ್ಯಶೋಭನಮ್ ॥೯.೯೬ ॥
ತದನಂತರ, ಭಗವಂತ ಸ್ವಧಾಮವನ್ನು ಸೇರಿಯಾದ ಮೇಲೆ,
ಬಾಗಿದ
ಬ್ರಹ್ಮನಿಂದಾಯಿತು ತಾ ದೈವಾಜ್ಞೆ ಪಾಲಿಸಿದ ಲೀಲೆ.
ನಿನ್ನಾಜ್ಞೆಯಂತೆ
ದಶರಥಗೆ ಕೊಡಲಾಗಿದೆ ಮುಕ್ತಿ,
ಕೌಸಲ್ಯಾದಿ ನಿನ್ನ
ತಾಯಂದಿರಿಗೂ ಉತ್ತಮ ಗತಿ.
ಕೈಕೇಯಿ ಸದ್ಗತಿ
ಹೊಂದಲು ಅಲ್ಲವಾದರೂ ಅರ್ಹ,
ನಿನ್ನಾಜ್ಞೆಯಂತೆ
ಸದ್ಗತಿಯಾಗಿದೆ ಅವಳಿಗೆ ಓ ಆರ್ಯ.
ಭರತನಂಥಾ ಮಗನನ್ನು
ಹೆತ್ತ ಆ ಮಹಾತಾಯಿ,
ನರಕವಾಗಬಾರದವಳಿಗೆನ್ನುವ
ನೀ ಕರುಣಾಮಯಿ.
ನಿನ್ನ
ಸಂಕಲ್ಪವದು-ಭರತನ ಮೇಲಿನ ಅನುಗ್ರಹದ ಧಾರ,
ಕೈಕೇಯಿಗೂ
ತೆರೆಯಲ್ಪಟ್ಟಿದೆ ಉತ್ತಮ ಲೋಕದ ಆ ದ್ವಾರ.
ನಿಕೃತಿರ್ನ್ನಾಮ ಸಾ ಕ್ಷಿಪ್ತಾ ಮಯಾ ತಮಸಿ ಶಾಶ್ವತೇ ।
ಕೈಕಯಿ ತು ಚಲಾನ್ ಲೋಕಾನ್ ಪ್ರಾಪ್ತಾ ನೈವಾಚಲಾನ್ ಕ್ವಚಿತ್ ॥೯.೯೭ ॥
ಪಶ್ಚಾದ್ ಭಕ್ತಿಮತೀ ಯಸ್ಮಾತ್ ತ್ವಯೀ ಸಾ ಯುಕ್ತಮೇವ ತತ್ ।
ಮನ್ಥರಾ ತು ತಮಸ್ಯನ್ಧೇ ಪಾತಿತಾ ದುಷ್ಟಚಾರಿಣೀ ॥೯.೯೮ ॥
ಕೈಕೇಯಿ ಯಾರ
ಆವೇಶದಿಂದ ನಿನ್ನಲಿ ಕೆಟ್ಟದಾಗಿ ನಡೆದುಕೊಂಡ; ಆ ನಿಕೃತಿ,
ಅಂತಹಾ ತಾಮಸಿಗೆ ಕೊಡಲ್ಪಟ್ಟಿದೆ
ಶಾಶ್ವತವಾದ ಅಂಧಂತಮಸ್ಸಿನ ಗತಿ.
ಕೈಕೇಯಿಗಾಗಿದೆ
ಸದ್ಯಕ್ಕೆ ಅಸ್ಥಿರವಾದ ಸ್ವರ್ಗಾದಿ ಲೋಕ,
ನಿನ್ನ ಭಕ್ತಳಾದ
ಆಕೆಗೆ ಸಾಧನಾನಂತರ ಅಚಲವಾದ ನಾಕ.
ಮಂಥರೆಗೆ
ದೊರಕಿರುವುದು ಅಂಧಂತಮಸ್ಸಿನ ಆ ಪಾಕ.
ಸೀತಾರ್ತ್ಥಂ ಯೇsಪ್ಯನಿನ್ದಮ್ಸ್ತ್ವಾಂ
ತೇsಪಿ ಯಾತಾ ಮಹತ್ ತಮಃ ।
ಪ್ರಾಯಶೋ ರಾಕ್ಷಸಾಸ್ಚೈವ ತ್ವಯಿ ಕೃಷ್ಣತ್ವಮಾಗತೇ ॥೯.೯೯॥
ಶೇಷಾ ಯಾಸ್ಯನ್ತಿ ತಚ್ಛೇಷಾ ಅಷ್ಟಾವಿಂಶೇ ಕಲೌ ಯುಗೇ ।
ಗತೇ ಚತುಸ್ಸಹಸ್ರಾಬ್ದೇ ತಮೋಗಾಸ್ತ್ರಿಶತೋತ್ತರೇ ॥೯.೧೦೦ ॥
ಸೀತೆ ವಿಚಾರದಲ್ಲಿ
ನಿನ್ನ ನಿಂದಿಸಿದ ಸುರಾಣಕ ದೈತ್ಯ ವೃಂದ,
ಅಸುರರಾದ ಅವರಿಗೆ
ಆಗಿದೆ ಅಂಧಂತಮಸ್ಸಿನದೇ ಬಂಧ.
ನಿನ್ನಿಂದ ಹತರಾದ
ಬಹುತೇಕ ರಾಕ್ಷಸರೆಲ್ಲ ಸೇರಿದ್ದಾರೆ ತಮಸ್ಸಿಗೆ,
ಉಳಿದವರದು ನಿನ್ನ
ಕೃಷ್ಣಾವತಾರದಲ್ಲಿ ತಮಸ್ಸಿನೆಡೆಗೆ ನಡಿಗೆ.
ಕೃಷ್ಣಾವತಾರದಲ್ಲೂ
ತಮಸ್ಸು ಹೊಂದದೇ ಉಳಿದ ದೈತ್ಯವೃಂದ,
ಇಪ್ಪತ್ತೆಂಟನೇ ಕಲಿಯುಗದಲ್ಲಾಗುತ್ತದೆ ಅವರ ಮೀಸಲು
ಕಾರ್ಯದಿಂದ.[Contributed by Shri Govind Magal]
No comments:
Post a Comment
ಗೋ-ಕುಲ Go-Kula