Sunday 19 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 83 - 88

ಉದಾರಬಾಹುಭೂಷಣಃ ಶುಭಾಙ್ಗದಃ ಸಕಙ್ಕಣಃ ।
ಮಹಾಙ್ಗುಲೀಯಭೂಷಿತಃ ಸುರಕ್ತಸತ್ಕರಾಮ್ಭುಜಃ ॥೯.೮೩ ॥

ಉತ್ತಮ ತೋಳ್ಬಂದಿ ಕಂಕಣ ಉಂಗುರಗಳ ಧರಿಸಿದವ,
ಉತ್ಕೃಷ್ಟ ಬಾಹುಭೂಷಣ ಕೆಂಪಾದ ಕರಪದ್ಮಗಳುಳ್ಳವ.

ಅನರ್ಘರತ್ನಮಾಲಯಾ  ವನಾಖ್ಯಯಾ ಚ ಮಾಲಯಾ ।
ವಿಲಾಸಿವಿಸ್ತೃತೋರಸಾ ಬಭಾರ ಚ ಶ್ರಿಯಂ ಪ್ರಭುಃ ॥೯.೮೪ ॥

ಅನರ್ಘ್ಯ ರತ್ನ ಹೂಮಾಲೆಗಳಿಂದ ಶೋಭಿಸುವ ದಿವ್ಯ ವಕ್ಷ,
ಶ್ರೀಲಕ್ಷ್ಮಿಯನ್ನು ಧರಿಸಿ ಅಲ್ಲಿ ಕೊಟ್ಟಿದ್ದಾನೆ ಅವಳ ಶಾಶ್ವತ ಕಕ್ಷ.

ಸ ಭೂತಿವತ್ಸಭೂಷಣಸ್ತನೂದರೇ ವಲಿತ್ರಯೀ ।
ಉದಾರಮಧ್ಯಭೂಷಣೋ ಲಸತ್ತಟಿತ್ಪ್ರಭಾಮ್ಬರಃ ॥೯.೮೫ ॥

ಶ್ರೀವತ್ಸದಿಂದ ಕೂಡಿದ ರಾಮನ ಚೆಲುಉದರ,
ಆ ಉದರದಲ್ಲಿ ಕಾಣುವ ಮೂರುಗೆರೆ ಪದರ.
ಉಟ್ಟಿರುವ ಮಿಂಚಿನ ಪ್ರಭೆಯ ಪೀತಾಂಬರ.

ಕರೀನ್ದ್ರಸತ್ಕರೋರುಯುಕ್ ಸುವೃತ್ತಜಾನುಮಣ್ಡಲಃ ।
ಕ್ರಮಾಲ್ಪವೃತ್ತಜಙ್ಘಕಃ ಸುರಕ್ತಪಾದಪಲ್ಲವಃ ॥೯.೮೬ ॥
ಲಸದ್ಧರಿನ್ಮಣಿಧ್ಯುತೀ ರರಾಜ ರಾಘವೋsಧಿಕಮ್ ।
ಅಸಙ್ಖ್ಯಸತ್ಸುಖಾರ್ಣ್ಣವಃ ಸಮಸ್ತಶಕ್ತಿಸತ್ತನುಃ ॥೯.೮೭ ॥

ಆನೆಯ ಸೊಂಡಿಲಿನಂತಹ ತೊಡೆಗಳು,
ಉರುಟಾದ ಮಂಡಿ ಮೊಣಕಾಲುಗಳು.
ಕೆಂಪು ಪಾದತಳ,ನೀಲಮಣಿಯ ಮೈಕಾಂತಿ,
ಆನಂದಸಾಗರ ,ಸಮಸ್ತ ಜಗದ ಮೂಲಶಕ್ತಿ.
ಸುಂದರ ಶಕ್ತ ಅಸೀಮ ರಾಮ ಶೋಭಿಸಿದ ರೀತಿ.

ಜ್ಞಾನಂ ನೇತ್ರಾಬ್ಜಯುಗ್ಮಾನ್ಮುಖವರಕಮಲಾತ್ ಸರ್ವವೇದಾರ್ತ್ಥಸಾರಾಂ-
ಸ್ತನ್ವಾ ಬ್ರಹ್ಮಾಣ್ಡಬಾಹ್ಯಾನ್ತರಮಧಿಕರುಚಾ ಭಾಸಯನ್ ಭಾಸುರಾಸ್ಯಃ ।
ಸರ್ವಾಭೀಷ್ಟಾಭಯೇ ಚ ಸ್ವಕರವರಯಗೇನಾರ್ತ್ಥಿನಾಮಾದಧಾನಃ
ಪ್ರಾಯಾದ್ದೇವಾಧಿದೇವಃ ಸ್ವಪದಮಭಿಮುಖಶ್ಚೋತ್ತರಾಶಾಂ 
ವಿಶೋಕಾಮ್ ॥೯.೮೮॥

ಎರಡು ತಾವರೆ ಕಣ್ಣುಗಳವು ಜ್ಞಾನ ಜ್ಯೋತಿ,
ವೇದಾರ್ಥಸಾರ ಕೊಡುವ ಮುಖಕಮಲ ಕಾಂತಿ.
ಸ್ವಶಕ್ತಿಯಿಂದ ಬ್ರಹ್ಮಾಂಡದೊಳಗೆ ಹೊರಗೆ ವ್ಯಾಪ್ತ,
ಹೊಳೆಮುಖದ,ನೋವು ನೀಗಿಪ ವರ ಅಭಯ ಹಸ್ತ.
ಇಂಥಾ ದೇವಾಧಿದೇವ ಪರಂಧಾಮಕೆ ನಡೆದ ನಾಥ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula