Wednesday 1 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 01 - 05

।। ಓಂ ।।
ಅಥಾsಪ್ತರಾಜ್ಯೋ ಭಗವಾನ್ ಸ ಲಕ್ಷ್ಮಣಂ ಜಗಾದ ರಾಜಾ ತರುಣೋ ಭವಾsಶು ।
ಇತೀರಿತಸ್ತ್ವಾಹ ಸ ಲಕ್ಷ್ಮಣೋ ಗುರುಂ ಭವತ್ಪದಾಬ್ಜಾನ್ನ ಪರಂ ವೃಣೋಮ್ಯಹಮ್ ॥೯.೦೧॥

ಪಟ್ಟಾಭಿಶಿಕ್ತನಾಗಿ ರಾಜ್ಯಪ್ರಾಪ್ತಿಯಾದಮೇಲೆ ಶ್ರೀರಾಮಚಂದ್ರ,
ಲಕ್ಷ್ಮಣಗೆ ಯುವರಾಜನಾಗಲು ಹೇಳುತ್ತಾನೆ ಗುಣಸಾಂದ್ರ.
ಈ ಮಾತ ಕೇಳಿದ ಲಕ್ಷ್ಮಣ ನುಡಿದ ತಾನು,
ನಿನ್ನಪಾದಸೇವೆ ಬಿಟ್ಟು ಬೇಕಿಲ್ಲ ಬೇರಿನ್ನೇನು.

ನ ಮಾಂ ಭವತ್ಪಾದನಿಷೇವಣೈಕಸ್ಪೃಹಂ ತದನ್ಯತ್ರ ನಿಯೋಕ್ತುಮರ್ಹತಿ ।
ನಹೀದೃಶಃ ಕಶ್ಚಿದನುಗ್ರಹಃ ಕ್ವಚಿತ್ ತದೇವ ಮೇ ದೇಹಿ ತತಃ ಸದೈವ ॥೯.೦೨॥

ನಿನ್ನ ಪಾದಚಿಂತನೆ ಮತ್ತು ಪಾದಸೇವೆಯ ಯೋಗ,
ಬೇರಿನ್ನೇನೂ ಬಯಸದ ನನಗದುವೇ ಮಹಾಭಾಗ್ಯ.
ನಿನ್ನ ಪಾದಸೇವೆಯಲ್ಲಿ ತೊಡಗಿದಾಗ ನೀ ಕರುಣಿಸುವ ಅನುಗ್ರಹ,
ಮಿಗಿಲಿಲ್ಲವದಕೆ ನೀಡೆನಗೆ ನಿರಂತರ ನನಗದರದೇ ದಾಹ.

ಇತೀರಿತಸ್ತಸ್ಯ ತದೇವ ದತ್ತ್ವಾ ದೃಢಂ ಸಮಾಶ್ಲಿಷ್ಯ ಚ ರಾಘವಃ ಪ್ರಭುಃ ।
ಸ ಯೌವರಾಜ್ಯಂ ಭರತೇ ನಿಧಾಯ ಜುಗೋಪ ಲೋಕಾನಖಿಲಾನ್ ಸಧರ್ಮ್ಮಕಾನ್  ॥೯.೦೩॥

ಈ ರೀತಿ ಪ್ರಾರ್ಥಿಸಿದ ಲಕ್ಷ್ಮಣ,
ಶ್ರೀರಾಮ ಅವನಿಗಿತ್ತ ಆಲಿಂಗನ.
ಭರತಗಿತ್ತ ಯುವರಾಜ್ಯ,ಪೂರೈಸುತ್ತ ಲಕ್ಷ್ಮಣನ ಕೋರಿಕೆ,
ಎಲ್ಲಾ ಲೋಕಗಳಿಗೂ ವಿಸ್ತರಿಸಿದ ರಾಮ ಧರ್ಮದ ಆಳ್ವಿಕೆ.

ಪ್ರಶಾಸತೀಶೇ ಪೃಥಿವೀ ಬಭೂವ ವಿರಿಞ್ಚಲೋಕಸ್ಯ ಸಮಾ ಗುಣೋನ್ನತೌ ।
ಜನೋsಖಿಲೋ ವಿಷ್ಣುಪರೋ ಬಭೂವ ನ ಧರ್ಮ್ಮಹಾನಿಶ್ಚ ಬಭೂವ ಕಸ್ಯಚಿತ್  ॥೯.೦೪॥

ಶ್ರೀರಾಮನಾಳ್ವಿಕೆಯಲ್ಲಿ ಭೂಲೋಕ,
ನೆನಪಿಸುವಂತಿತ್ತು ಆ ಸತ್ಯಲೋಕ.
ಎಲ್ಲರಲ್ಲೂ ಇತ್ತು ವಿಷ್ಣು ಭಕ್ತಿ,
ಯಾರಿಗೂ ಆಗಲಿಲ್ಲ ಧರ್ಮಚ್ಯುತಿ.

ಗುಣೈಶ್ಚ ಸರ್ವೈರುದಿತಾಶ್ಚ ಸರ್ವೇ ಯಥಾಯಥಾ ಯೋಗ್ಯತಯೋಚ್ಛನೀಚಾಃ ।
ಸಮಸ್ತರೋಗಾದಿಭಿರುಜ್ಝಿತಾಶ್ಚ ಸರ್ವೇ ಸಹಸ್ರಾಯುಷ ಊರ್ಜ್ಜಿತಾ ಧನೈಃ ॥೯.೦೫॥

ಎಲ್ಲರಿಗಿತ್ತು ಯೋಗ್ಯತಾನುಸಾರವಾದ ಗುಣ,
ಎಲ್ಲರಿಗಿತ್ತು ರೋಗವಿರದ ಆರೋಗ್ಯ ಲಕ್ಷಣ.
ಎಲ್ಲರಿಗಿತ್ತು ಯುಗಧರ್ಮದ ಪೂರ್ಣಾಯುಷ್ಯ,
ದರಿದ್ರರಿರಲಿಲ್ಲ ಧನವಿತ್ತು ಬೇಕಾದಷ್ಟು ಅವಶ್ಯ.

No comments:

Post a Comment

ಗೋ-ಕುಲ Go-Kula