ಗಣೇಶ ಚತುರ್ಥಿಯಂದು ಎಲ್ಲೆಲ್ಲೂ ಕೇಳುವ ಗಣಪತಿಯ ಕಥೆಯ ಹಿಂದಿನ
ತಿರುಳೇನು?
ಆನೆ ಮೊಗದ ವಿಶ್ವಂಭರ ರೂಪಿ ಪರಮಾತ್ಮನ ಜೊತೆಗೆ ಆಕಾಶ ತತ್ತ್ವ, ಶಿವ-ಪಾರ್ವತಿ ಪುತ್ರ ಶ್ರೀ ಗಣೇಶ
ಪ್ರಾಚೀನ ಗ್ರಂಥಗಳಲ್ಲಿ ಅನೇಕ ಕಥೆಗಳನ್ನು ಕಾಣುತ್ತೇವೆ.
ಅದನ್ನು ಮೇಲ್ನೋಟದಲ್ಲಿ ನೋಡಿದರೆ ವಿನೋದವೆನಿಸುತ್ತದೆ. ಆದರೆ ಅದರ ತಿರುಳನ್ನು ಅರಿತರೆ ಜೀವನ
ಸಾರ್ಥಕ. ಇದಕ್ಕೆ ಉತ್ತಮ ಉದಾಹರಣೆ ಗಣಪತಿಯ ಕಥೆ. "ಪಾರ್ವತಿ ತನ್ನ ಮೈಯ ಮಣ್ಣಿನಿಂದ
ಗಣಪತಿಯನ್ನು ನಿರ್ಮಿಸಿದಳು, ಆತನ ತಲೆಯನ್ನು ಶಿವ ಕಡಿದ, ನಂತರ ಆತನಿಗೆ ಉತ್ತರ ದಿಕ್ಕಿಗೆ ತಲೆ
ಹಾಕಿದ ಆನೆಯ ತಲೆಯನ್ನು ಜೋಡಿಸಿದರು, ಕಡಬು ತಿಂದ ಗಣೇಶ ಹೊಟ್ಟೆಗೆ
ಹಾವನ್ನು ಸುತ್ತಿಕೊಂಡ". ಏನಿದರ ಅರ್ಥ? ಪ್ರಾಯಃ ಈ ಕಥೆಯನ್ನು ಕೇಳದವರಿಲ್ಲ; ಆದರೆ ಅರ್ಥ ತಿಳಿದವರು ಸಾವಿರಕ್ಕೆ
ಒಬ್ಬರಿಲ್ಲ! ಈ ಕಥೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಮಾತ್ರ ನಮಗೆ ಕಥೆಯ ಮಹತ್ವ, ಪೂಜೆಯ ಮಹತ್ವ, ನಂಬಿಕೆಯ ಮಹತ್ವ ಅರಿಯುತ್ತದೆ.
ಗಣಪತಿ ಆಕಾಶದ ದೇವತೆ. ಆಕಾಶ ಪಂಚ ಭೂತಗಳಲ್ಲಿ ಮಹತ್ತಾದದ್ದು. ಗಣಪತಿಯ ಸ್ಥಾನ
ಇಪ್ಪತ್ತೊಂದನೆಯದು. ಅದಕ್ಕಾಗಿ ಆತನಿಗೆ ಇಪ್ಪತ್ತೊಂದು ಮೋದಕ ಅರ್ಪಣೆ. ಐದು ಅಂತಃಕರಣ, ಐದು ಜ್ಞಾನೇಂದ್ರಿಯ, ಐದು ಕರ್ಮೇಂದ್ರಿಯ, ಐದು ತನ್ಮಾತ್ರೆಗಳು(ಶಬ್ದ, ಸ್ಪರ್ಶ ರೂಪ ರಸ ಗಂಧ) ಇದರಿಂದ
ಆಚೆಗೆ ಆಕಾಶ, ಗಾಳಿ, ಬೆಂಕಿ,ನೀರು, ಮಣ್ಣು. ಇಲ್ಲಿ ಆಕಾಶ ಇಪ್ಪತ್ತೊಂದನೇ
ಮೆಟ್ಟಿಲಲ್ಲಿದೆ. ಇದು ಇಪ್ಪತ್ತೊಂದನೇ ತತ್ವ. ಗಣಪತಿಗಿಂತ ಮೊದಲ ಸ್ತರದಲ್ಲಿರುವ
ತತ್ತ್ವಾಭಿಮಾನಿಗಳು ಇಪ್ಪತ್ತುಮಂದಿ. ಬ್ರಹ್ಮ, ವಾಯು, ಗರುಡ, ಶೇಷ, ರುದ್ರ, ಇಂದ್ರ, ಕಾಮ, ಅಹಂಪ್ರಾಣ, ಅನಿರುದ್ಧ, ಸ್ವಾಯಂಭುವಮನು, ಬೃಹಸ್ಪತಿ, ದಕ್ಷಪ್ರಜಾಪತಿ, ಪ್ರವಹವಾಯು, ಚಂದ್ರ, ಸೂರ್ಯ, ಯಮಧರ್ಮ, ವರುಣ, ವಹ್ನಿ, ಮಿತ್ರ ಮತ್ತು ನಿರ್ಋತಿ. ಗಣಪತಿ
ಇಪ್ಪತ್ತೊಂದನೆಯವನು.
ಶಿವ ಪಾರ್ವತಿಯರು ದಂಪತಿಗಳು. ಇಲ್ಲಿ ಶಿವ ಮನಸ್ಸಿನ ಅಭಿಮಾನಿ
ಮತ್ತು ಪಾರ್ವತಿ ವಾಕ್ ದೇವತೆ. ಮನಸ್ಸು ಯೋಚಿಸಿದಂತೆ ಮಾತು. ಅದಕ್ಕಾಗಿ ಅವರದು ಅನ್ಯೋನ್ಯ
ದಾಂಪತ್ಯ. ಶಬ್ದದ ಮೂಲಶಕ್ತಿ ಗಾಳಿ ಮತ್ತು ಆಕಾಶ. ಆಕಾಶ ಮತ್ತು ಗಾಳಿ ಇಲ್ಲದಿದ್ದರೆ ಶಬ್ದವಿಲ್ಲ.
ನಮ್ಮ ಒಳಗಿನ ವಾಕ್ ನಾದವೇ ಪಾರ್ವತಿ-ಅದು ಶಬ್ದ ರೂಪದಲ್ಲಿ ಹೊರ ಹೊಮ್ಮುವುದೇ ಮಾತು. ಇದು ಮೂಲ
ನಾದದ ಸ್ಥೂಲ ರೂಪ. ಮನುಷ್ಯನಿಗೆ ದೊಡ್ಡ ಆಪತ್ತು ಮಾತು. ಅಧ್ಯಾತ್ಮ ಸಾಧನೆಗೆ ಬೇಕಾಗಿರುವುದು
ಮಾತಿಗಿಂತ ಹೆಚ್ಚಾಗಿ ಮೌನ. ತನ್ನತನದ ಅರಿವಿಲ್ಲದೇ(Awareness of self), ಅಹಂಕಾರ ತತ್ವದ ವಿರುದ್ಧ ಮಾತು
ಬೆಳೆದಾಗ, ಮಾತಿನ ಶಿರಛೇದನವಾಗದೇ ಜ್ಞಾನವಿಲ್ಲ. ಶಿರಛೇದನವಾದ ಮೇಲೆ ಪುನಃ ಅದೇ
ಮಾತು ಮುಂದುವರಿಯಬಾರದು. ಅದಕ್ಕಾಗಿ ಎಲ್ಲವನ್ನು ಕೇಳುವ ದೊಡ್ಡ ಕಿವಿಯುಳ್ಳ, ಪ್ರಾಣಶಕ್ತಿಯನ್ನು ನಿಯಂತ್ರಿಸುವ
ಉದ್ದನೆಯ ಮೂಗಿನ ಸಂಕೇತ ರೂಪವಾದ ಆನೆಯ ತಲೆಯನ್ನು ಇಟ್ಟು ಗಣಪತಿ ಎನ್ನುವ ಹೊಸ ಆಕಾರದ
ಜನನವಾಯಿತು. ಗಣಪತಿಯನ್ನು ನೋಡಿದಾಕ್ಷಣ ನಮಗೆ ನೆನಪಿಗೆ ಬರಬೇಕಾದ ವಿಷಯ ಮಾತಿಗಿಂತ ಮನನ ಹೆಚ್ಚು
ಮಾಡು, ಸರಿಯಾಗಿ ಕೇಳಿಸಿಕೋ (Be a good listener) ಎನ್ನುವ ವಿಚಾರ.
ಉತ್ತರ ದಿಕ್ಕಿಗೆ ತಲೆ ಹಾಕುವುದು ಅಂದರೆ ಏನು? ಸಾಮಾನ್ಯವಾಗಿ ನಮಗೆಲ್ಲರಿಗೂ
ಗೊತ್ತಿರುವಂತೆ ಉತ್ತರಕ್ಕೆ ತಲೆ ಹಾಕಿ ಮಲಗಬಾರದು. ದಕ್ಷಿಣಕ್ಕೆ ಮುಖ ಮಾಡಿ ಪೂಜೆಗೆ ಕುಳಿತು
ಕೊಳ್ಳಬಾರದು. ದೇವಸ್ಥಾನದಲ್ಲಿ ಅಪ್ರದಕ್ಷಿಣೆ ಸುತ್ತಬಾರದು ಇತ್ಯಾದಿ. ಆದರೆ ಈ ಎಲ್ಲಾ ವಿಚಾರ
ಏಕೆ? ಇದರ ಹಿಂದಿರುವ ಸಿದ್ಧಾಂತ ಏನು? ಈ ಭೂಮಿಯಲ್ಲಿ ಉತ್ತರ ಧ್ರುವದ ಶಕ್ತಿ
ಉತ್ತರದಿಂದ ಪೂರ್ವಕ್ಕೆ ಹರಿಯುತ್ತಿರುತ್ತದೆ ಹಾಗೂ ದಕ್ಷಿಣ ಧ್ರುವದ ಶಕ್ತಿ ದಕ್ಷಿಣದಿಂದ
ಪಶ್ಚಿಮಕ್ಕೆ ಹರಿಯುತ್ತಿರುತ್ತದೆ. ನಮ್ಮ ಚಲನೆ ಕೂಡಾ ಈ ಶಕ್ತಿಪಾತಕ್ಕೆ ಅನುಗುಣವಾಗಿರಬೇಕು.
ನಾವು ದಕ್ಷಿಣಕ್ಕೆ ಮುಖ ಮಾಡಿದರೆ ದಕ್ಷಿಣ ಧ್ರುವದ ಶಕ್ತಿಪಾತಕ್ಕೆ ನಮ್ಮನ್ನು ನಾವು
ಒಡ್ಡಿಕೊಂಡಂತೆ ಹಾಗೂ ಉತ್ತರಕ್ಕೆ ಮುಖ ಮಾಡಿದರೆ ಉತ್ತರ ದ್ರುವದ ಶಕ್ತಿಪಾತಕ್ಕೆ ಒಡ್ಡಿಕೊಂಡಂತೆ.
ಉತ್ತರಕ್ಕೆ ತಲೆ ಹಾಕಿ ಮಲಗುವುದು ಎಂದರೆ ಎದ್ದಾಗ ದಕ್ಷಿಣಕ್ಕೆ ಮುಖ ಮಾಡುವುದು. ಆದ್ದರಿಂದ
ದಕ್ಷಿಣ ಮುಖ ಹಾಗೂ ಉತ್ತರ ತಲೆ ಎರಡೂ ಒಂದೆ. ಈ ಎರಡು ಶಕ್ತಿಪಾತದಲ್ಲಿ ಒಂದು ದೊಡ್ಡ
ವ್ಯತ್ಯಾಸವಿದೆ. ಅದೇನೆಂದರೆ ಉತ್ತರದ ಶಕ್ತಿಪಾತ ಊರ್ಧ್ವಮುಖವಾದದ್ದು ಹಾಗೂ ದಕ್ಷಿಣದ ಶಕ್ತಿಪಾತ
ಸಂಸಾರದ ಸುಳಿಯಲ್ಲಿ ಸಿಲುಕಿಸುವಂತಾದ್ದು. ಈ ಕಾರಣಕ್ಕಾಗಿ ಉತ್ತರಕ್ಕೆ ತಲೆ ಹಾಕಿ ಮಲಗಿದರೆ ಅಥವಾ
ದಕ್ಷಿಣಕ್ಕೆ ಮುಖ ಮಾಡಿ ಪೂಜೆಗೆ ಕುಳಿತರೆ ನಮ್ಮ ಶಿರಛೇದನವಾಗುತ್ತದೆ. ನಾವು ಪುನಃ ಈ ಸಂಸಾರದ
ಸುಳಿಯಲ್ಲಿ ಸುತ್ತಬೇಕಾಗುತ್ತದೆ. ಇನ್ನು ಹೊಟ್ಟೆಗೆ ಹಾವಿನ ಸುತ್ತು. ಹಾವು ಕುಂಡಲಿನೀ ಶಕ್ತಿಯ
ಸಂಕೇತ. ಇದು ಚಕ್ರಾಕಾರವಾಗಿ ತಲೆ ಕೆಳಗೆ ಹಾಕಿ ಮಲಗಿದ ಹಾವಿನ ರೂಪದಲ್ಲಿ ನಮ್ಮ ಮಲ-ಮೂತ್ರ
ದ್ವಾರದ ಮಧ್ಯದಲ್ಲಿರುತ್ತದೆ. ಕುಂಡಲಿನೀ ಜಾಗೃತವಾಗುವುದು ಎಂದರೆ ಈ ಹಾವು ಹೆಡೆಯೆತ್ತಿ
ನಿಲ್ಲುವುದು. ಕುಂಡಲಿನೀ ಜಾಗೃತವಾದಾಗ ಶಕ್ತಿ- ಮೂಲಾಧಾರ, ಮಣಿಪುರ ಹಾಗೂ ಸ್ವಾದಿಷ್ಠಾನ ಶಕ್ತಿ
ಕೇಂದ್ರಗಳಲ್ಲಿ ಊರ್ಧ್ವ ಮುಖವಾಗಿ ಸಂಚರಿಸುತ್ತದೆ. ನಮ್ಮ ಹೊಕ್ಕುಳಿನ ಮೇಲಿನ ಶಕ್ತಿ ಕೇಂದ್ರ
ಜ್ಞಾನದ ಬಾಗಿಲು, ಗಣಪತಿ ಈ ಮೂರು ಶಕ್ತಿ ಕೇಂದ್ರಗಳನ್ನು ನಿಯಂತ್ರಿಸಿ ನಮಗೆ ಜ್ಞಾನದ
ಬಾಗಿಲನ್ನು ತೆರೆಯುವ ಶಕ್ತಿದೇವತೆ. ಇಷ್ಟೊಂದು ಸಂಗತಿ ಈ ಪುಟ್ಟ ಕಥೆಯಲ್ಲಿದೆ. ಇದು ಹೂವಿನಿಂದ
ಹಣ್ಣಿಗೆ ಹೋಗುವ ರೀತಿ. ಕೇವಲ ಮೇಲ್ನೋಟದ ಅರ್ಥದಲ್ಲೇ (ಹೂವಿನಲ್ಲೇ)ನಿಂತರೆ ತೊಂದರೆಯಿಲ್ಲ, ಅದರಿಂದಾಚೆಗೆ ಏನೂ ಇಲ್ಲ ಎಂದು
ತಿಳಿದರೆ ಅದು ಅನರ್ಥ!
ಯಾವುದೇ ಪೂಜೆ-ಕರ್ಮವನ್ನು ಮಾಡುವಾಗ ವಿಘ್ನನಿವಾರಕನಾದ ಗಣಪತಿ
ಪೂಜೆ ಮಾಡುವುದು ಸಂಪ್ರದಾಯ. ಅದಕ್ಕಾಗಿ ಗಣಪತಿ ಮಂಡಲ ಬರೆದು ಪೂಜಿಸಿ ನಂತರ ಇತರ ಕರ್ಮವನ್ನು
ಮಾಡುತ್ತಾರೆ.
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ
ಹೀಗೆ ವಿಘ್ನ ನಿವಾರಕ ಗಣಪತಿ ಸ್ತುತಿ ಮೊದಲಿಗೆ.
ಭಗವಂತ ತನ್ನ ವಿಶ್ವಂಭರರೂಪದಲ್ಲಿ ಗಣಪತಿಯ ಅಂತರ್ಯಾಮಿಯಾಗಿ
ಸನ್ನಿಹಿತನಾಗಿದ್ದಾನೆ.
ಭಗವಂತನ ವಿಶ್ವಂಭರ ರೂಪಕ್ಕೆ ಒಟ್ಟು ೧೯ ತಲೆಗಳು. ನಡುವಿನಲ್ಲಿ
ಆನೆಯ ಮೊಗ ಹಾಗೂ ಎಡ ಬಲಗಳಲ್ಲಿ ೯-೯ ಮಾನವ ಮೊಗ.
ಸಹಸ್ರನಾಮ ಭಗವಂತನ 'ವಿಶ್ವಮ್' ಎನ್ನುವ ವಿಘ್ನನಿವಾರಕ 'ವಿಶ್ವಂಭರ' ರೂಪದ ನಾಮದಿಂದ ಪ್ರಾರಂಭವಾಗುತ್ತದೆ.
ನಮ್ಮ ಜೀವನದಲ್ಲಿರುವ ಮೂರು ಅವಸ್ಥೆಗಳಲ್ಲಿ
(ಎಚ್ಚರ-ಕನಸು-ನಿದ್ದೆ), ನಮ್ಮ ಎಚ್ಚರವನ್ನು ನಿಯಂತ್ರಿಸುವ ಭಗವಂತನ ರೂಪ 'ವಿಶ್ವ' ನಾಮಕ ರೂಪ.
ದೇವತೆಗಳು ನಮಗೆ ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿ ಕೊಟ್ಟು, ನಮ್ಮನ್ನು ನಿಯಮನ ಮಾಡಿಕೊಂಡು ಈ
ನಮ್ಮ ದೇಹದಲ್ಲಿ ನೆಲೆಸಿದ್ದಾರೆ. ಇವರಲ್ಲಿ ಒಬ್ಬ ದೇವತೆ ಗಣಪತಿ. ಆತ ಆಕಾಶದ ದೇವತೆ.
ಬ್ರಹ್ಮಾಂಡದಲ್ಲಿ ಆಕಾಶ ಹಾಗೂ ಪಿಂಡಾಂಡದಲ್ಲಿ ರಕ್ತಸಂಚಾರ, ಉಸಿರಾಟಕ್ಕೆ ಬೇಕಾದ ಅವಕಾಶ(Space)ವನ್ನು ಒದಗಿಸಿ ಮನುಷ್ಯ
ಜೀವಂತವಾಗಿರಲು ಅವಕಾಶವನ್ನು ಈತ ಕಲ್ಪಿಸಿಕೊಡುತ್ತಾನೆ. ಈತ ಅವಕಾಶದ ದೇವತೆಯಾದ್ದರಿಂದ
ವಿಘ್ನನಾಶ.
ಶಿವ ಪಾರ್ವತೀ ಪುತ್ರ,
ನಿನ್ನದೆಂಥಾ ಪಾತ್ರ.
ನಿನ್ನ ಮನೆ ಆಕಾಶ,
ನೀ ನೀಡುವೆ ಅವಕಾಶ.
ದೇಹ ನಾಡಿಗಳಿಗೆ ನೀ ಮೂಲಾಧಾರ,
ಮೊದಲ ಅಂತರ್ಜಾಗೃತಿಯ ಸೂತ್ರಧಾರ.
ನಿನ್ನ ಅನುಗ್ರಹವಿರೇ ಅಪಾರ,
ಸಹಸ್ರಾರದಲ್ಲಿ ಪರಮಸಾಕ್ಷಾತ್ಕಾರ.
ನಿನ್ನಪ್ಪನ ಮನೆ ಮನಸು,
ಅವಕಾಶವೀವ ನೀನವನ ಕೂಸು.
ನಮೋ ಗಣೇಶಾಂತರ್ಗತ ವಿಶ್ವಂಭರ,
ತೊಡಿಸೆಮಗೆ ಜ್ಞಾನ ಭಕ್ತಿ ವೈರಾಗ್ಯಗಳಂಬರ.
ಗಲ್ಲಿ ಗಲ್ಲಿಗೂ ಗಣೇಶ ಅಲಂಕಾರದಾಡಂಬರ,
ಕಿವಿಗಡಚಿಕ್ಕುವ ಚಿತ್ರಗೀತೆಗಳ ಮೈಕಾಸುರ.
ಅರ್ಥ ಅನುಸಂಧಾನಕೆ ಎಲ್ಲೆಲ್ಲೂ ತತ್ವಾರ,
ಒಪ್ಪಿಯಾನೆ ಇದ ಗಣೇಶಾಂತರ್ಗತ ವಿಶ್ವಂಭರ.
ನಮೋ ನಮೋ ಆಕಾಶಾಭಿಮಾನಿ ಗಣೇಶ, ಕರುಣಿಸು ಸದ್ಬುದ್ಧಿ ಸತ್ಕರ್ಮಗಳ ಅವಕಾಶ.
ನೀಡೆಮಗೆ ಸಚ್ಛಾಸ್ತ್ರ ಕೇಳುವ ತೆರೆದ ಕಿವಿ,
ಅವಾದಾವು ದುರ್ವಚನ ದುರ್ವಾದಗಳಿಗೆ ಪವಿ.
ವಿಘ್ನ ನಿವಾರಕ ತರಿದುಬಿಡು ವಿಘ್ನ,
ನಿನ್ನೊಲುಮೆಯಿಂದ ಬದುಕಾಗಲಿ ಯಜ್ಞ.
ಬಾಳ ಯಾತ್ರೆಯಲಿ ಸತ್ಕರ್ಮಗಳನೇ ನಡೆಸು,
ತಂದೆಯೊಡಗೂಡಿ ಎಮ್ಮ ಮನ ಹರಿಪಾದದೊಳಿರಿಸು.
ಸತ್ಕರ್ಮಗಳಲೇ ಅವಕಾಶ ಕೊಡು ಗಣಪ,
ಹರಿಚರಣಗಳಲಿ ಎಮ್ಮ ಮನವಿಡಲಿ ನಿನ್ನಪ್ಪ.
ಸುಜ್ಞಾನ ಮತಿಯಿತ್ತು ಸಲಹು ನೀ ಪವಮಾನ,
ಸುತ್ತುವಾಟ ಮುಗಿಸಿ ಎತ್ತಿಕೋ ಗರುಡವಾಹನ.
(Contributed by Shri Prakash Shetty)
ಶಿವ ಪಾರ್ವತೀ ಪುತ್ರ,
ನಿನ್ನದೆಂಥಾ ಪಾತ್ರ.
ನಿನ್ನ ಮನೆ ಆಕಾಶ,
ನೀ ನೀಡುವೆ ಅವಕಾಶ.
ದೇಹ ನಾಡಿಗಳಿಗೆ ನೀ ಮೂಲಾಧಾರ,
ಮೊದಲ ಅಂತರ್ಜಾಗೃತಿಯ ಸೂತ್ರಧಾರ.
ನಿನ್ನ ಅನುಗ್ರಹವಿರೇ ಅಪಾರ,
ಸಹಸ್ರಾರದಲ್ಲಿ ಪರಮಸಾಕ್ಷಾತ್ಕಾರ.
ನಿನ್ನಪ್ಪನ ಮನೆ ಮನಸು,
ಅವಕಾಶವೀವ ನೀನವನ ಕೂಸು.
ನಮೋ ಗಣೇಶಾಂತರ್ಗತ ವಿಶ್ವಂಭರ,
ತೊಡಿಸೆಮಗೆ ಜ್ಞಾನ ಭಕ್ತಿ ವೈರಾಗ್ಯಗಳಂಬರ.
ಗಲ್ಲಿ ಗಲ್ಲಿಗೂ ಗಣೇಶ ಅಲಂಕಾರದಾಡಂಬರ,
ಕಿವಿಗಡಚಿಕ್ಕುವ ಚಿತ್ರಗೀತೆಗಳ ಮೈಕಾಸುರ.
ಅರ್ಥ ಅನುಸಂಧಾನಕೆ ಎಲ್ಲೆಲ್ಲೂ ತತ್ವಾರ,
ಒಪ್ಪಿಯಾನೆ ಇದ ಗಣೇಶಾಂತರ್ಗತ ವಿಶ್ವಂಭರ.
ನಮೋ ನಮೋ ಆಕಾಶಾಭಿಮಾನಿ ಗಣೇಶ, ಕರುಣಿಸು ಸದ್ಬುದ್ಧಿ ಸತ್ಕರ್ಮಗಳ ಅವಕಾಶ.
ನೀಡೆಮಗೆ ಸಚ್ಛಾಸ್ತ್ರ ಕೇಳುವ ತೆರೆದ ಕಿವಿ,
ಅವಾದಾವು ದುರ್ವಚನ ದುರ್ವಾದಗಳಿಗೆ ಪವಿ.
ವಿಘ್ನ ನಿವಾರಕ ತರಿದುಬಿಡು ವಿಘ್ನ,
ನಿನ್ನೊಲುಮೆಯಿಂದ ಬದುಕಾಗಲಿ ಯಜ್ಞ.
ಬಾಳ ಯಾತ್ರೆಯಲಿ ಸತ್ಕರ್ಮಗಳನೇ ನಡೆಸು,
ತಂದೆಯೊಡಗೂಡಿ ಎಮ್ಮ ಮನ ಹರಿಪಾದದೊಳಿರಿಸು.
ಸತ್ಕರ್ಮಗಳಲೇ ಅವಕಾಶ ಕೊಡು ಗಣಪ,
ಹರಿಚರಣಗಳಲಿ ಎಮ್ಮ ಮನವಿಡಲಿ ನಿನ್ನಪ್ಪ.
ಸುಜ್ಞಾನ ಮತಿಯಿತ್ತು ಸಲಹು ನೀ ಪವಮಾನ,
ಸುತ್ತುವಾಟ ಮುಗಿಸಿ ಎತ್ತಿಕೋ ಗರುಡವಾಹನ.
(Contributed by Shri Prakash Shetty)
Nice article.
ReplyDeleteಓದಿದ ನಿಮಗೆ ಧನ್ಯವಾದಗಳು
Deleteಉಪಯುಕ್ತ ಮಾಹಿತಿಗಾಗಿ ವಂದನೆಗಳು......
ReplyDeleteUltimate...
ReplyDeleteVery informative article. Thanks🙏
ReplyDelete