ಶ್ರಾನ್ತೇಷು ತೇಷ್ವೇಕ ಉರುಕ್ರಮ ತ್ವಂ ಸುಧಾರಸಾಪ್ತ್ಯೈ ಮುದಿತೋ ಹ್ಯಮತ್ಥ್ನಾಃ
।
ತದಾ ಜಗದ್ಗ್ರಾಸಿ ವಿಷಂ ಸಮುತ್ಥಿತಂ ತ್ವದಾಜ್ಞಯಾ ವಾಯುರಧಾತ್ ಕರೇ
ನಿಜೇ॥೧೦.೧೩॥
ಆ ಎಲ್ಲಾ
ದೇವ-ದೈತ್ಯರಿಗಾಗಲು ಬಳಲಿಕೆ ಆಯಾಸ,
ತ್ರಿವಿಕ್ರಮ ನೀ
ಸಂತಸದಿ ಕಡಲ ಕಡೆದೆ ನಿರಾಯಾಸ.
ಕಡಲಿಂದ ಎದ್ದು
ಬಂತಾಗ ಜಗ ನುಂಗುವ ಅತಿ ತೀಕ್ಷ್ಣ ವಿಷ,
ನಿನ್ನ ಆಣತಿಯಂತೆ
ಅದಾಯಿತು ಮುಖ್ಯಪ್ರಾಣನ ಕೈ ವಶ.
ಕಲೇಃ ಸ್ವರೂಪಂ ತದತೀವ ದುಷ್ಷಹಂ ವರಾದ್ ವಿಧಾತುಃ ಸಕಲೈಶ್ಚ
ದುಃಸ್ಪೃಶಮ್ ।
ಕರೇ ವಿಮತ್ಥ್ಯಾಸ್ತಬಲಂ ವಿಧಾಯ ದದೌ ಸ ಕಿಞ್ಚಿದ್ ಗಿರಿಶಾಯ
ವಾಯುಃ
॥೧೦.೧೪॥
ಬ್ರಹ್ಮನವರದಿಂದ
ಯಾರೂ ಸಹಿಸಲಾಗದ ಮುಟ್ಟಲಾಗದ ಕಲಿಸ್ವರೂಪಿ ವಿಷ,
ಪ್ರಾಣದೇವ ಕೈಲಿ
ಅದನ್ನು ತಿಕ್ಕಿ ಮಾಡಿದ ವಿಷಪ್ರಭಾವ ತೀಕ್ಷ್ಣತೆಯ ಕೃಶ.
ನಿರ್ವೀರ್ಯವಾದ
ಕಿಂಚಿತ್ ಭಾಗವ ಪ್ರಾಣದೇವ ಮಾಡಿದ ರುದ್ರನ ಕೈವಶ.
ಸ ತತ್ ಪಿಬತ್ ಕಣ್ಠಗತೇನ ತೇನ ನಿಪಾತಿತೋ ಮೂರ್ಚ್ಛಿತ ಆಶು ರುದ್ರಃ ।
ಹರೇಃ ಕರಸ್ಪರ್ಶಬಲಾತ್ ಸ ಸಂಜ್ಞಾಮವಾಪ ನೀಲೋsಸ್ಯ
ಗಳಸ್ತದಾsಸೀತ್
॥೧೦.೧೫॥
ಆ ವಿಷವ ಪಾನ ಮಾಡಿದ
ಕೈಲಾಸನಾಥ,
ಕಂಠದಲ್ಲಿದ್ದ
ವಿಷದಿಂದ ಆದ ಮೂರ್ಛಿತ.
ಹರಿಯ ಕೈ
ಸ್ಪರ್ಶದಿಂದ ಆಯಿತವನಿಗೆ ಎಚ್ಚರ,
ಹೀಗೆ ಶಿವ
ವಿಷಬಾಧೆಯಿಂದ ನೀಲಕಂಠನಾದ ತೆರ.
ಅಥ ತ್ವದಾಜ್ಞಾಂ ಪುರತೋ ನಿಧಾಯ ನಿಧಾಯ ಪಾತ್ರೇ ತಪನೀಯರೂಪೇ ।
ಸ್ವಯಂ ಚ ನಿರ್ಮ್ಮತ್ಥ್ಯ ಬಲೋಪಪನ್ನಂ ಪಪೌ ಸ ವಾಯುಸ್ತದು ಚಾಸ್ಯ
ಜೀರ್ಣ್ಣಮ್ ॥೧೦.೧೬॥
ನಿನ್ನಾಜ್ಞೆಯಂತೆ
ವಾಯುದೇವನಿಂದ ಚಿನ್ನದ ಬಟ್ಟಲಲ್ಲಿದ್ದ ಘೋರ ವಿಷ ಸ್ವೀಕಾರ,
ತೀಕ್ಷ್ಣವಾಗಿದ್ದ
ಘನ ವಿಷವೂ ಪ್ರಾಣಗೆ ಜೀರ್ಣವಾಯ್ತು ಕಿಂಚಿತ್ತಾಗದೆ ವಿಕಾರ.
ಅತ್ಯಲ್ಪಪಾನಾಚ್ಚ ಬಭೂವ ಶೂಲಾ ಶಿವಸ್ಯ ಶೀರ್ಷ್ಣಶ್ಚ ಕರಾವಶಿಷ್ಟಮ್ ।
ಅಭೂತ್ ಕಲಿಃ ಸರ್ವಜಗತ್ಸು ಪೂರ್ಣ್ಣಂ ಪೀತ್ವಾ ವಿಕಾರೋ ನ ಬಭೂವ
ವಾಯೋಃ ॥೧೦.೧೭॥
ಮುಖ್ಯಪ್ರಾಣ ಕುಡಿದ
ಸಂಪೂರ್ಣ ವಿಷವಾಯಿತು ಜೀರ್ಣ,
ಸೋಂಕಲೂ ಇಲ್ಲವನಿಗೆ
ಯಾವುದೇ ವಿಕಾರದ ಚಿಕ್ಕ ಕಣ.
ಸ್ವಲ್ಪವೇ ಕುಡಿದ
ವಿಷ ಶಿವನ ತಲೆನೋವಿಗಾಯಿತು ಕಾರಣ,
ಅವನ ಕೈಲಿದ್ದ
ಅತ್ಯಲ್ಪ ವಿಷವಾಯಿತು ಜಗದಾದ್ಯಂತ ಪ್ರಸಾರಣ.
ದುಷ್ಟ ಕಲಿ
ಅಭಿಮಾನಿಯಾಗಿ ಎಲ್ಲೆಡೆ ಮಾಡಿದದರ ಧಾರಣ.
ಕಲೇಃ ಶರೀರಾದಭವನ್ ಕುನಾಗಾಃ ಸವೃಶ್ಚಿಕಾಃ ಶ್ವಾಪದಯಾತುಧಾನಾಃ ।
ಅಥ ತ್ವಯಾsಬ್ಧೌ ತು ವಿಮತ್ಥ್ಯಮಾನೇ ಸುರಾsಭವತ್ ತಾಮಸುರಾ
ಅವಾಪುಃ
॥೧೦.೧೮॥
ಕಲ್ಯಾಭಿಮಾನ್ಯವಾದ
ವಿಷದಿಂದ ಹಾವು ಚೇಳು ವಿಷಜಂತುಗಳ ಜನನ.
ನಿನ್ನಿಂದ
ಚೆನ್ನಾಗಿ ಕಡೆಯಲ್ಪಟ್ಟ ಕಡಲಿನಿಂದ ಮತ್ತಿನ ಮದ್ಯದ ಆಗಮನ,
ಅಸುರೀ ಚಟುವಟಿಕೆಗಳ ಆಗರವನ್ನು ಅಸುರರು ಪಡೆದರು ತಮ್ಮ ಸ್ವಾಧೀನ.[Contributed by Shri Govind Magal]
No comments:
Post a Comment
ಗೋ-ಕುಲ Go-Kula