ನಿಃಶೇಷತೋ ವಿನಿಹತೇ ಸ್ವಬಲೇ ಸ ಕಂಸಶ್ಚರ್ಮ್ಮಾಸಿಪಾಣಿರಭಿಯಾತುಮಿಯೇಷ
ಕೃಷ್ಣಮ್ ।
ತಾವತ್ ತಮೇವ ಭಗವನ್ತಮಭಿಪ್ರಯಾತಮುತ್ತುಙ್ಗಮಞ್ಚಶಿರಸಿ ಪ್ರದದರ್ಶ
ವೀರಮ್ ॥೧೩.೧೨೭॥
ಕೃಷ್ಣನಿಂದ ತನ್ನ
ಸೈನ್ಯ ನಿಶ್ಯೇಷವಾಗಿ ನಾಶವಾದಾಗ,
ಕತ್ತಿ ಗುರಾಣಿ
ಹಿಡಿದು ಕೃಷ್ಣಗೆ ಎದುರಾದ ಕಂಸನಾಗ.
ಅಷ್ಟರಲ್ಲೇ ಕಂಸನ
ಆವರಿಸಿಬಿಟ್ಟಿದ್ದ ಕೃಷ್ಣಮಹಾಭಾಗ.
ತಂ ಶ್ಯೇನವೇಗಮಭಿತಃ ಪ್ರತಿಸಞ್ಚರನ್ತಂ ನಿಶ್ಚಿದ್ರಮಾಶು ಜಗೃಹೇ
ಭಗವಾನ್ ಪ್ರಸँಹ್ಯ ।
ಕೇಶೇಷು ಚೈನಮಭಿಮೃಶ್ಯ ಕರೇಣ ವಾಮೇನೋದ್ಧೃತ್ಯ ದಕ್ಷಿಣಕರೇಣ ಜಘಾನ ಕೇsಸ್ಯ ॥೧೩.೧೨೮॥
ಕಂಸ ಗಿಡುಗವೇಗದಿಂದ
ಕೃಷ್ಣನೆದುರು ಮತ್ತೆ ಮತ್ತೆ ಹಾರಿಬಂದ,
ಇದನ್ನು ನೋಡಿದ
ಶ್ರೀಕೃಷ್ಣ ಕಂಸನ ಆ ವೇಗವನ್ನು ನಾಶಮಾಡಿದ.
ಅವನ ತಲೆಯನ್ನು
ಎಡಗೈಯಿಂದ ಹಿಡಿದ,
ಕೂದಲು ಸೆಳೆದು
ಬಲಗೈಯಿಂದ ಹೊಡೆದ.
ಸಞ್ಚಾಲಿತೇನ ಮಕುಟೇನ ವಿಕುಣ್ಡಲೇನ ಕರ್ಣ್ಣದ್ವಯೇನ ವಿಗತಾಭರಣೋರಸಾ ಚ
।
ಸ್ರಸ್ತಾಮ್ಭರೇಣ ಜಘನೇನ ಸುಶೋಚ್ಯರೂಪಃ ಕಂಸೋ ಬಭೂವ
ನರಸಿಂಹಕರಾಗ್ರಸಂಸ್ಥಃ ॥೧೩.೧೨೯॥
ಪುರುಷೋತ್ತಮ
ಕೃಷ್ಣನ ಕೈಯಲ್ಲಿ ಬಂಧಿಯಾದ ಕಂಸನ ಸ್ಥಿತಿ,
ಕಿರೀಟ,ಕುಂಡಲ,ಎದೆಯಾಭರಣ ಎಲ್ಲವೂ ಕಳಚಿದ ಹೇಯಗತಿ.
ಉಟ್ಟ ಸೊಂಟದ
ಬಟ್ಟೆಯೂ ಬಿಚ್ಚಿದ ಶೋಚನೀಯ ಪರಿಸ್ಥಿತಿ.
ಉತ್ಕೃಷ್ಯ ತಂ ಸುರಪತಿಃ ಪರಮೋಚ್ಚಮಞ್ಚಾದನ್ಯೈರಜೇಯಮತಿವೀರ್ಯ್ಯಬಲೋಪಪನ್ನಮ್।
ಅಬ್ಜೋದ್ಭವೇಶವರಗುಪ್ತಮನನ್ತಶಕ್ತಿರ್ಭೂಮೌ ನಿಪಾತ್ಯ ಸ ದದೌ ಪದಯೋಃ
ಪ್ರಹಾರಮ್ ॥೧೩.೧೩೦॥
ಕಂಸನ
ನಿಗ್ರಹಿಸಿದ-ದೇವತೆಗಳ ಒಡೆಯ ಅನಂತ ಶಕ್ತಿಯ ಕೃಷ್ಣಪರಮಾತ್ಮ,,
ಹಣ್ಣಾದ-ಅನ್ಯರಿಗೆ
ಅಜೇಯ ಅತಿಬಲದ ಬ್ರಹ್ಮ ರುದ್ರ ವರರಕ್ಷಿತ ದುರಾತ್ಮ.
ಆಸನದಿಂದ ಕಂಸನ
ಸೆಳೆದ,
ನೆಲಕ್ಕೆ ಕೆಡವಿ
ಕಾಲಿಂದ ಒದ್ದ.
ದೇಹೇ ತು ಯೋsಭವದಮುಷ್ಯ ರಮೇಶಬನ್ಧುರ್ವಾಯುಃ ಸ ಕೃಷ್ಣತನುಮಾಶ್ರಯದನ್ಯಪಾಪಮ್ ।
ದೈತ್ಯಂ ಚಕರ್ಷ ಹರಿರತ್ರ ಶರೀರಸಂಸ್ಥಂ ಪಶ್ಯತ್ಸು ಕಞ್ಜಜಮುಖೇಷು
ಸುರೇಷ್ವನನ್ತಃ ॥೧೩.೧೩೧॥
ಕಂಸನೊಳಗಿದ್ದ
ಭಗವತ್ಬಂಧುವಾದ ಮುಖ್ಯಪ್ರಾಣ,
ಸೇರಿಕೊಂಡ ತನ್ನ
ಆಶ್ರಯತಾಣನಾದ ನಾರಾಯಣ.
ಕಂಸನಲ್ಲಿದ್ದ
ದೈತ್ಯನ ಸೆಳೆದ ಭಗವಾನ್ ಶ್ರೀಕೃಷ್ಣ.
ದ್ವೇಷಾತ್ ಸ ಸರ್ವಜಗದೇಕಗುರೋಃ ಸ್ವಕೀಯೈಃ ಪೂರ್ವಪ್ರಮಾಪಿತಜನೈಃ
ಸಹಿತಃ ಸಮಸ್ತೈಃ ।
ಧಾತ್ರ್ಯಾದಿಭಿಃ ಪ್ರತಿ ಯಯೌ ಕುಮತಿಸ್ತಮೋsನ್ಧಮನ್ಯೇsಪಿ
ಚೈವಮುಪಯಾನ್ತಿ ಹರಾವಭಕ್ತಾಃ ॥೧೩.೧೩೨॥
ಕೆಟ್ಟಬುದ್ಧಿಯುಳ್ಳ
ದುರುಳನಾದ ಆ ಕಂಸ,
ಮಾಡಿದ್ದಕ್ಕೆ
ಜಗದಗುರು ಭಗವಂತನ ದ್ವೇಷ,
ಮೊದಲೇ ಭಗವಂತನಿಂದ
ಹತರಾಗಿ ಸೇರಿಕೊಂಡ ಆಭಗವದ್ವೇಷಿಗಳ ತಾಣ,
No comments:
Post a Comment
ಗೋ-ಕುಲ Go-Kula