Wednesday, 21 August 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 96 - 102


ಅಗ್ರೇsಥ ದಾನಪತಿಮಕ್ಷಯಪೌರುಷೋsಸಾವೀಶೋ ವಿಸೃಜ್ಯ ಸಬಲಃ ಸಹಿತೋ ವಯಸ್ಯೈಃ ।
ದ್ರಷ್ಟುಂ ಪುರೀಮಭಿಜಗಾಮ ನರೇನ್ದ್ರಮಾರ್ಗ್ಗೇ ಪೌರೈಃ ಕುತೂಹಲಯುತೈರಭಿಪೂಜ್ಯಮಾನಃ॥೧೩.೯೬॥
ಮಥುರೆಯ ತಲುಪಿದ ಮೇಲೆ ದಾನಪತಿ ಎಂದೂ ಕರೆಯಲ್ಪಡುವ ಅಕ್ರೂರನ ಮುಂದೆ ಕಳಿಸಿಕೊಟ್ಟ,
ಎಂದೂ ಕುಂದದ ಬಲದ ಶ್ರೀಕೃಷ್ಣ ಗೆಳೆಯರಿಂದ ಕೂಡಿಕೊಂಡು ಮಥುರಾನಗರಿ ನೋಡಲು ಹೊರಟ.
ರಾಜಮಾರ್ಗದಲ್ಲಿ ಇವನ ನೋಡಿದ ಪಟ್ಟಣಿಗರಿಂದ ಕುತೂಹಲದ ನೋಟ,
ತನ್ನ ಗುಣ ಮೊದಲಾದವುಗಳಿಂದ ಹೊಗಳಲ್ಪಟ್ಟ ಶ್ರೀಕೃಷ್ಣನಿಂದ ನಗರ ಓಡಾಟ.

ಆಸಾದ್ಯ ಕುಞ್ಜರಗತಂ ರಜತಂ ಯಯಾಚೇ ವಸ್ತ್ರಾಣಿ ಕಂಸದಯಿತಂ ಗಿರಿಶಾವರೇಣ ।
ಮೃತ್ಯೂಜ್ಝಿತಂ ಸಪದಿ ತೇನ ದುರುಕ್ತಿವಿದ್ಧಃ ಪಾಪಂ ಕರಾಗ್ರಮೃದಿತಂ ವ್ಯನಯದ್ ಯಮಾಯ॥೧೩.೯೭॥

ಹೀಗೆ ಮಥುರೆಯಲ್ಲಿ ಸಾಗಿರಲು ಶ್ರೀಕೃಷ್ಣನ ತಿರುಗಾಟ,
ಕಂಸಪ್ರಿಯ,ಪಾರ್ವತೀವರದಿಂದ ಅವಧ್ಯ ಅಗಸನ ನೋಟ.
ಆನೆಮೇಲೆ ಕುಳಿತ ಅಗಸನನ್ನು ಬಟ್ಟೆ ಕೇಳಿದ ಕೃಷ್ಣ,
ಬದಲಾಗಿ ಅವನಿಂದ ಸ್ವೀಕರಿಸಿದ ಬೈಗಳವು ತೀಕ್ಷ್ಣ.
ಬೈಗುಳ ಕೇಳಿಸಿಕೊಂಡ  ಶ್ರೀಕೃಷ್ಣ ಸಿಟ್ಟಾದ,
ಕೈತುದಿಯಿಂದ ಹೊಡೆದವನ ಯಮಪುರಿಗಟ್ಟಿದ.

ಹತ್ವಾ ತಮಕ್ಷತಬಲೋ ಭಗವಾನ್ ಪ್ರಗೃಹ್ಯ ವಸ್ತ್ರಾಣಿ ಚಾsತ್ಮಸಮಿತಾನಿ ಬಲಸ್ಯ ಚಾದಾತ್।
ದತ್ವಾsಪರಾಣಿ ಸಖಿಗೋಪಜನಸ್ಯ ಶಿಷ್ಟಾನ್ಯಾಸ್ತೀರ್ಯ್ಯ ತತ್ರ ಚ ಪದಂ ಪ್ರಣಿಧಾಯ ಚಾsಗಾತ್॥೧೩.೯೮॥
ಎಂದೂ ಹಾಳಾಗದ ಶಕ್ತಿವುಳ್ಳ ಶ್ರೀಮನ್ನಾರಾಯಣ,
ಅಗಸನ ಮುಗಿಸಿ ಅನುವುಗೊಳಿಸಿದವನ ಕಡೇ ಪಯಣ.
ಶ್ರೀಕೃಷ್ಣ ತನಗೆ ಯೋಗ್ಯವಾದ ಬಟ್ಟೆಗಳ ತೊಟ್ಟ,
ಬಲರಾಮ ಗೋವಳರಿಗೆ ಯೋಗ್ಯ ಬಟ್ಟೆಗಳ ಕೊಟ್ಟ.
ಉಳಿದವನ್ನು ದಾರಿಯಮೇಲೆ ಹಾಸಿದ,
ಅದರಮೇಲೆ ಹೆಜ್ಜೆಯಿಡುತ್ತಾ ಸಾಗಿದ. 

ಗ್ರಾಹ್ಯಾಪಹೇಯರಿಹಿತೈಕಚಿದಾತ್ಮಸಾನ್ದ್ರಸ್ವಾನನ್ದಪೂರ್ಣ್ಣವಪುರಪ್ಯಯಶೋಷಹೀನಃ ।
ಲೋಕಾನ್ ವಿಡಮ್ಬ್ಯ ನರವತ್ಸಮಲಕ್ತಕಾದ್ಯೈರ್ವಪ್ತ್ರಾವಿಭೂಷಿತ ಇವಾಭವದಪ್ರಮೇಯಃ ॥೧೩.೯೯॥
ಸ್ವೀಕಾರ್ಯ,ಅಪಹೇಹ್ಯ,ತ್ಯಾಜ್ಯಗಳಿಂದ ರಹಿತನಾದವ,
ಕೇವಲ ಘನೀಭವಿಸಿದ ಆನಂದವೇ ಮೈದಾಳಿ ಬಂದವ.
ದೋಷದೂರನಾದ ಶ್ರೀಮನ್ನಾರಾಯಣ,
ಮನುಷ್ಯನಂತೆ ಮಾಡುತ್ತಾನೆ ಲೋಕಮೋಹನ.
ಆದಂತೆ ಕಂಡ ಕ್ಷೌರಿಕನಿಂದ ಭೂಷಿತ,
ಸುಗಂಧಸೂಸುವವನೂ ಆದ ಗಂಧಲೇಪಿತ.

ಮಾಲಾ ಅವಾಪ್ಯ ಚ ಸುದಾಮತ ಆತ್ಮತನ್ತ್ರಸ್ತಾವಕ್ಷಯೋsನುಜಗೃಹೇ ನಿಜಪಾರ್ಷದೌ ಹಿ ।
ಪೂರ್ವಂ ವಿಕುಣ್ಠಸದನಾದ್ಧರಿಸೇವನಾಯ ಪ್ರಾಪ್ತೌ ಭುವಂ ಮೃಜನಪುಷ್ಪಕರೌ ಪುರಾsಪಿ ॥೧೩.೧೦೦॥
ನಾಶವಿರದ ಸರ್ವಸ್ವತಂತ್ರ ನಾರಾಯಣ,
ಅನುಗ್ರಹಿಸಿದ ಸುದಾಮನೆಂಬ ಹೂವಾಡಿಗನ.
ಭಗವತ್ಸೇವೆಗೆ ಬಂದ ಆ ಕ್ಷೌರಿಕ ಮಾಲಾಕಾರರು,
ಮೂಲತಃ ವೈಕುಂಠದಲ್ಲೂ ಅದೇ ಸೇವಾ ನಿರತರು.

ಸರ್ವೇಷ್ಟಪುಷ್ಟಿಮಿಹ ತತ್ರ ಸರೂಪತಾಂ ಚ ಕೃಷ್ಣಸ್ತಯೋರ್ವರಮದಾದಥ ರಾಜಮಾರ್ಗ್ಗೇ ।
ಗಚ್ಛನ್ ದದರ್ಶ ವನಿತಾಂ ನರದೇವಯೋಗ್ಯಮಾದಾಯ ಗನ್ಧಮಧಿಕಂ ಕುಟಿಲಾಂ ವ್ರಜನ್ತೀಮ್ ॥೧೩.೧೦೧॥
ಶ್ರೀಕೃಷ್ಣ ಅವರಿಬ್ಬರಿಗೂ ಸರ್ವಾಭೀಷ್ಟ ಸಿದ್ಧಿಯ ಕೊಟ್ಟ,
ಬಿಡುಗಡೆಯನ್ನು "ಸ್ವರೂಪ್ಯ"ವರದರೂಪವಾಗಿ ಇಟ್ಟ.
ರಾಜಮಾರ್ಗದಲ್ಲಿ ಮುಂದೆ ಸಾಗುತ್ತಿದ್ದ ಶ್ರೀಗೋವಿಂದ,
ಗಂಧಹಿಡಿದು ಹೋಗುವ ಗೂನು ಹೆಂಗಸಿನ ಕಂಡ.

ತೇನಾರ್ತ್ಥಿತಾ ಸಪದಿ ಗನ್ಧಮದಾತ್ ತ್ರಿವಕ್ರಾ ತೇನಾಗ್ರಜೇನ ಸಹಿತೋ ಭಗವಾನ್ ಲಿಲಿಮ್ಪೇ ।
ತಾಂ ಚಾsಶ್ವೃಜುತ್ವಮನಯತ್ ಸ ತಯಾsರ್ತ್ಥಿತೋsಲಮಾಯಾಮಿ ಕಾಲತ ಇತಿ ಪ್ರಹಸನ್ನಮುಞ್ಚತ್॥೧೩.೧೦೨॥
ಕೃಷ್ಣ ಅವಳಲ್ಲಿ ಗಂಧವ ಬೇಡಿದ,
ಅವಳರ್ಪಿಸಿದ ಗಂಧವ ತಾನು ಪಡೆದ.
ಅಣ್ಣನೊಂದಿಗೆ ಮಾಡಿಕೊಂಡ ಗಂಧಲೇಪನ,
ಮಾಡಿದ ಅವಳ ಕುಟಿಲಾಂಗದ ನಿವಾರಣ.
ತ್ರಿವಕ್ರೆ ಬೇಡಿದಳು ಕೃಷ್ಣನ ಅಂಗಸಂಗ,
ಮತ್ತೆ ಬರುವೆನೆಂದು ಹೊರಟ ಶ್ರೀರಂಗ.

No comments:

Post a Comment

ಗೋ-ಕುಲ Go-Kula