Friday 16 August 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 92 - 95

ಸಂಸ್ಥಾಪ್ಯತೌ ರಥವರೇ ಜಗತಾsಭಿವನ್ದ್ಯೌ ಶ್ವಾಫಲ್ಕಿರಾಶ್ವವತತಾರ ಯಮಸ್ವಸಾರಮ್ ।
ಸ್ನಾತ್ವ ಸ ತತ್ರ ವಿಧಿನೈವ ಕೃತಾಘಮರ್ಷಃ ಶೇಷಾಸನಂ ಪರಮಪೂರುಷಮತ್ರ ಚೈಕ್ಷತ್ ॥೧೩.೯೨॥
ಜಗತ್ತಿನಿಂದ ನಮಸ್ಕರಿಸಲ್ಪಡುವ ಅವರಿಬ್ಬರನ್ನು ಶ್ರೇಷ್ಠ ರಥದಲ್ಲಿ ಕುಳ್ಳಿರಿಸಿ,
ಶ್ವಫಲ್ಕಪುತ್ರ ಅಕ್ರೂರ ತಾನು ಯಮುನಾ ನದಿಗಿಳಿದ ಮಂಗಳಸ್ನಾನ ಬಯಸಿ.
ಅಘಮರ್ಷಣ ಸೂಕ್ತ ಪಠಿಸುತ್ತಾ ಸ್ನಾನ ಮಾಡಿದ,
ಅಲ್ಲೇ ನೀರಲ್ಲೇ ಶೇಷಶಾಯಿ ಹರಿಯ ನೋಡಿದ.


ನಿತ್ಯಂ ಹಿ ಶೇಷಮಭಿಪಶ್ಯತಿ ಸಿದ್ಧಮನ್ತ್ರೋ ದಾನೇಶ್ವರಃ ಸ ತು ತದಾ ದದೃಶೇ ಹರಿಂ ಚ ।
ಅಗ್ರೇ ಹಿ ಬಾಲತುನುಮೀಕ್ಷ್ಯ ಸ ಕೃಷ್ಣಮತ್ರ ಕಿಂ ನಾಸ್ತಿ ಯಾನ ಇತಿ  ಯಾನಮುಖೋ ಬಭೂವ॥೧೩.೯೩॥
ಅಕ್ರೂರಗೆ ಸಿದ್ಧಿಯಾಗಿತ್ತು ಮಂತ್ರ ಅಘಮರ್ಷಣ,
ಆಗುತ್ತಿತ್ತವನಿಗೆ ಯಾವಾಗಲೂ ಶೇಷನ ದರ್ಶನ.
ನದಿಯೊಳಗೇ ಭಗವಂತನ ಶ್ರೀಕೃಷ್ಣರೂಪದ ದರ್ಶನ ಪಡೆದ,
ರಥದಲ್ಲಿರುವನೋ ಇಲ್ಲವೋ ಎಂದು ರಥದತ್ತಲೂ ಅವ ನೋಡಿದ.


ತತ್ರಾಪಿ ಕೃಷ್ಣಮಭಿವೀಕ್ಷ್ಯ ಪುನರ್ನ್ನಿಮಜ್ಜ್ಯ ಶೇಷೋರುಭೋಗಶಯನಂ ಪರಮಂ ದದರ್ಶ ।
ಬ್ರಹ್ಮೇಶಶಕ್ರಮುಖದೇವಮುನೀನ್ದ್ರವೃನ್ದಸಂವನ್ದಿತಾಙ್ಘ್ರಿಯುಗಮಿನ್ದಿರಯಾ ಸಮೇತಮ್ ॥೧೩.೯೪॥
ರಥದಲ್ಲೂ ಕೂಡಾ ಶ್ರೀಕೃಷ್ಣನ ಕಂಡ ಅಕ್ರೂರ,
ಯಮುನಾ ನದಿಯಲ್ಲಿ ಶೇಷಶಾಯಿಯ ಅವತಾರ.
ಬ್ರಹ್ಮ ರುದ್ರ ಇಂದ್ರಾದಿ ಮೊದಲಾದ ದೇವತೆಗಳು,
ಮುನಿಶ್ರೇಷ್ಠ, ಇವರೆಲ್ಲರಿಂದ ವಂದಿತ ಪಾದಗಳು.
ಹೀಗೆ ಸರ್ವೋತ್ಕೃಷ್ಟನಾದ ಭಗವಂತ,
ಅಕ್ರೂರಗೆ ಕಂಡವನಾದ ಲಕ್ಷ್ಮೀಸಮೇತ.

ಸ್ತುತ್ವಾ ವರಸ್ತುತಿಭಿರವ್ಯಯಮಬ್ಜನಾಭಂ ಸೋsನ್ತರ್ಹಿತೇ ಭಗವತಿ ಸ್ವಕಮಾರುರೋಹ ।
ಯಾನಂ ಚ ತೇನ ಸಹಿತೋ ಭಗವಾನ್ ಜಗಾಮ ಸಾಯಂ ಪುರೀಂ ಸಹಬಲೋ ಮಧುರಾಮನನ್ತಃ ॥೧೩.೯೫॥
ಉತ್ಕೃಷ್ಟವಾದ ಸ್ತೋತ್ರಗಳಿಂದ ಆ ಅಕ್ರೂರ,
ನಾಶವಿಲ್ಲದ ಪದ್ಮನಾಭನ ಸ್ತುತಿಸಿದ ಅಪಾರ.
ಪರಮಾತ್ಮ ನೀರಲ್ಲಿ ಕಾಣದಂತಾದ,
ಅಕ್ರೂರ ಎದ್ದುಬಂದು ರಥವೇರಿದ.
ಹೀಗೆ ಶ್ರೀಕೃಷ್ಣ , ಅಕ್ರೂರ ಬಲರಾಮನೊಂದಿಗೆ ಸೇರಿ,
ಸಂಜೆಹೊತ್ತಿಗೆ ಬಂದು ತಲುಪಿದ ಮಥುರಾಪುರಿ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula