Saturday, 17 August 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 87 - 91

ಆರುಹ್ಯತದ್ರಥವರಂ ಭಗವತ್ಪದಾಬ್ಜಮಬ್ಜೋದ್ಭವಪ್ರಣತಮನ್ತರಮನ್ತರೇಣ ।
ಸಞ್ಚಿನ್ತಯನ್ ಪಥಿ ಜಗಾಮ ಸ ಗೋಷ್ಠಮಾರಾದ್ ದೃಷ್ಟ್ವಾ ಪದಾಙ್ಕಿತಭುವಂ ಮುಮುದೇ ಪರಸ್ಯ॥೮೭॥
ಶ್ರೀಕೃಷ್ಣನ ಕರೆತರಲೆಂದು ಕಂಸ ನೀಡಿದ ರಥವನ್ನೇರಿದ ಭೃತ್ಯನಾದ ಅಕ್ರೂರ,
ಬ್ರಹ್ಮನಿಂದಲೂ ವಂದ್ಯವಾದ ಕೃಷ್ಣಪಾದವ ಧ್ಯಾನಿಸುತ್ತಿತ್ತವನ ಒಳಮನ ಅಪಾರ.
ನಂದಗೋಕುಲದ ಬಳಿ ಕೃಷ್ಣನ ಹೆಜ್ಜೆಗುರುತನ್ನು ನೋಡಿದ,
ಕೃಷ್ಣಪಾದಾಂಕಿತವ ಕಂಡು ಅತ್ಯಂತ ಆನಂದವ ಹೊಂದಿದ.

ಸೋsವೇಷ್ಟತಾತ್ರ ಜಗದೀಶಿತುರಙ್ಗಸಙ್ಗಲಭ್ದೋಚ್ಚಯೇನ ನಿಖಿಲಾಘವಿದಾರಣೇಷು ।
ಪಾಂಸುಷ್ವಜೇಶಪುರೂಹೂತಮುಖೋಚ್ಚವಿದ್ಯುದ್ಭ್ರಾಜದ್ಕಿರೀಟಮಣಿಲೋಚನಗೋಚರೇಷು ॥೧೩.೮೮॥

ಭಗವಂತನ ಅಂಗಸಂಗದಿಂದ ಎಲ್ಲಾ ಪಾಪಗಳ ನಾಶಮಾಡಬಲ್ಲಂಥ ಧೂಳು,
ಬ್ರಹ್ಮ ರುದ್ರ ಇಂದ್ರಾದಿ ದೇವತೆಗಳು ತಮ್ಮ ಕಿರೀಟ ಕಂಗಳಲ್ಲಿ ಧರಿಸಿದ ಆ ಧೂಳು,
ಕಂಡದರಲ್ಲಿ ಆನಂದದಿಂದ ಅಕ್ರೂರ ಹೊರಳಾಡಿದ ಕೃಷ್ಣಪಾದಾಂಕಿತದ ಪವಿತ್ರ ಧೂಳು.

ಸೋsಪಶ್ಯತಾಥ ಜಗದೇಕಗುರುಂ ಸಮೇತಮಗ್ರೋದ್ಭವೇನ ಭುವಿ ಗಾ ಅಪಿ ದೋಹಯನ್ತಮ್ ।
ಆನನ್ದಸಾನ್ದ್ರತನುಮಕ್ಷಯಮೇನಮೀಕ್ಷ್ಯ ಹೃಷ್ಟಃ ಪಪಾತ ಪದಯೋಃ ಪುರುಷೋತ್ತಮಸ್ಯ ॥೧೩.೮೯॥
ಆನಂತರ ಆ ಅಕ್ರೂರ ಬಲರಾಮನಿಂದ ಕೂಡಿದ ಕೃಷ್ಣ,
ಭೂಮಿಯಲ್ಲಿ ಹಸುಗಳ ಪಾಲಿಸಿ ಕರೆಯುತ್ತಿರುವ ಕೃಷ್ಣ,
ಆನಂದವೇ ಮೈದಾಳಿದ,ಜಗತ್ತಿಗೆ ಮುಖ್ಯಗುರುವಾದ ಕೃಷ್ಣ,
ನಾಶವಿರದ ಶ್ರೀಕೃಷ್ಣನ ಅಕ್ರೂರ ನೋಡಿದ,
ಆನಂದದಿಂದ ಶ್ರೀಕೃಷ್ಣನ ಪಾದಕ್ಕೆ ಎರಗಿದ.

ಉತ್ಥಾಪ್ಯತಂ ಯದುಪತಿಃ ಸಬಲೋ ಗೃಹಂ ಸ್ವಂ ನೀತ್ವೋಪಚಾರಮಖಿಲಂ ಪ್ರವಿಧಾಯ ತಸ್ಮಿನ್ ।
ನಿತ್ಯೋದಿತಾಕ್ಷಯಚಿದಪ್ಯಖಿಲಂ ಚ ತಸ್ಮಾಚ್ಛುಶ್ರಾವ ಲೋಕಚರಿತಾನುವಿಡಮ್ಬನೇನ ॥೧೩.೯೦॥
ಯದುಪತಿ ಶ್ರೀಕೃಷ್ಣ ಬಲರಾಮನೊಂದಿಗೆ ಕೂಡಿದವನಾಗಿ ,
ನಮಸ್ಕರಿಸಿದ ಅಕ್ರೂರನೆತ್ತಿ ಮನೆಗೆ ಕರೆದುಕೊಂಡುಹೋಗಿ,
ಅಕ್ರೂರಗೆ ಮಾಡಿದ ಸಕಲ ರೀತಿಯ ಆದರ ಉಪಚಾರ,
ಸರ್ವಜ್ಞನಾದರೂ ನೀತಿಯಂತೆ ವಿಚಾರಿಸಿದ ವ್ಯಾಪಾರ.

ಶ್ರುತ್ವಾ ಸ ಕಂಸಹೃದಿ ಸಂಸ್ಥಿತಮಬ್ಜನಾಭಃ ಪ್ರಾತಸ್ತು ಗೋಪಸಹಿತೋ ರಥಮಾರುರೋಹ ।
ರಾಮಶ್ವಫಲ್ಕತನಯಾಭಿಯುತೋ ಜಗಾಮಯಾನೇನ ತೇನ ಯಮುನಾತಟಮವ್ಯಯಾತ್ಮಾ॥೧೩.೯೧॥
ಪದ್ಮನಾಭನಾದ ಕೃಷ್ಣ , ಕಂಸನ ಅಂತರಂಗವನ್ನು  ಅಕ್ರೂರನಿಂದ ಕೇಳಿದ ಸ್ವಾಮಿ,
ಮರುಮುಂಜಾನೆ ಗೋಪರೊಡನೆ ಅಕ್ರೂರ ತಂದ ರಥವೇರಿದ ಅಂತರ್ಯಾಮಿ.
ರಥದಲ್ಲಿ ಕೂಡಿಕೊಂಡವನಾಗಿ ಬಲರಾಮ ಅಕ್ರೂರ,
ಕೃಷ್ಣ ಹೊರಟುನಿಂತ ತಾಣವಾಗಿತ್ತು ಯಮುನಾತೀರ. 
[Contributed by Shri Govind Magal]

No comments:

Post a Comment

ಗೋ-ಕುಲ Go-Kula