Monday 12 August 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 82 - 86


ವ್ಯೋಮಶ್ಚ ನಾಮ ಮಯಸೂನುರಜಪ್ರಸಾದಾಲ್ಲಬ್ಧಾಮಿತಾಯುರಖಿಲಾನ್ ವಿದಧೇ ಬಿಲೇ ಸಃ ।
ತಂ ಶ್ರೀಪತಿಃ ಪಶುಪತಿಃ ಪಶುವದ್ ವಿಶಸ್ಯ ನಿಃಸಾರಿತಾನ್ ಬಿಲಮುಖಾದಖಿಲಾಂಶ್ಚಕಾರ ॥೧೩.೮೨ ॥
ವ್ಯೋಮನೆಂಬ ಹೆಸರಿನ ಮಯಾಸುರನ ಮಗ,
ಬ್ರಹ್ಮಾನುಗ್ರಹದಿಂದ ಪಡೆದಿದ್ದ ಅಮಿತಾಯುಸ್ಸಾಗ.
ಅವನು ಎಲ್ಲಾ ಗೊಲ್ಲರನ್ನೂ ಗುಹೆಯಲ್ಲಿ ಬಂಧಿಸಿಟ್ಟ,
ಕೃಷ್ಣ ಪಶುವಂತವನ ಕೊಂದು ಎಲ್ಲರ ಹೊರಗೆ ಬಿಟ್ಟ.

ಕುರ್ವತ್ಯನನ್ಯವಿಷಯಾಣಿ ದುರನ್ತಶಕ್ತೌ ಕರ್ಮ್ಮಾಣಿ ಗೋಕುಲಗತೇsಖಿಲಲೋಕನಾಥೇ ।
ಕಂಸಾಯ ಸರ್ವಮವದತ್ ಸುರಕಾರ್ಯ್ಯಹೇತೋರ್ಬ್ರಹ್ಮಾಙ್ಕಜೋ ಮುನಿರಕಾರಿ ಯದೀಶಪಿತ್ರಾ ॥೧೩.೮೩ ॥
ಹೀಗೆ ಗೋಕುಲದಲ್ಲಿರುವ ಸಮಸ್ತಲೋಕದ ಏಕೈಕ ಯಜಮಾನ,
ಅಪರಿಮಿತ ಕೃಷ್ಣನಿಂದಾಗುತ್ತಿತ್ತು ಯಾರಿಂದಲಾಗದ ಕಾರ್ಯಪ್ರದಾನ.
ಉದ್ದೇಶವಿಟ್ಟುಕೊಂಡು ಆಗಲೆಂದು ಶೀಘ್ರವಾಗಿ ಭಗವತ್ಕಾರ್ಯ,
ಕಂಸಗೆ ಎಲ್ಲಾ ಹೇಳಿದ ಬ್ರಹ್ಮತೊಡೆಯಿಂದ ಬಂದ ನಾರದನೆಂಬ ಆರ್ಯ.

ಶ್ರುತ್ವಾsತಿಕೋಪರಭಸೋಚ್ಚಲಿತಃ ಸ ಕಂಸೋ ಬಧ್ವಾ ಸಭಾರ್ಯ್ಯಮಥ ಶೂರಜಮುಗ್ರಕರ್ಮ್ಮಾ ।
ಅಕ್ರೂರಮಾಶ್ವದಿಶದಾನಯನಾಯ ವಿಷ್ಣೋ ರಾಮಾನ್ವಿತಸ್ಯ ಸಹ ಗೋಪಗಣೈ ರಥೇನ ॥೧೩.೮೪॥
ನಾರದರ ಮಾತನ್ನು ಕೇಳಿದ ಕಂಸನೆಂಬ ರಕ್ಕಸ,
ಪ್ರವೃತ್ತಗೊಳಿಸಿತವನ ಕೋಪವೆಂಬ ಕೆಟ್ಟ ರಭಸ.
ವಸುದೇವ ದೇವಕಿಯರ ಬಂಧನದಲ್ಲಿಟ್ಟ ಕಂಸನೆಂಬ  ಕ್ರೂರ,
ಗೊಲ್ಲರೊಂದಿಗೆ ಕೃಷ್ಣರಾಮರ ಕರೆತರಲು ಕಳಿಸಲ್ಪಟ್ಟ ಅಕ್ರೂರ.

ಸಂಸೇವನಾಯ ಸ ಹರೇರಭವತ್ ಪುರೈವ ನಾಮ್ನಾ ಕಿಶೋರ ಇತಿ ಯಃ ಸುರಗಾಯನೋsಭೂತ್ ।
ಸ್ವಾಯಮ್ಭುವಸ್ಯ ಚ ಮನೋಃ ಪರಮಾಂಶಯುಕ್ತ ಆವೇಶಯುಕ್ ಕಮಲಜಸ್ಯ ಬಭೂವ ವಿದ್ವಾ ನ್ ॥೧೩.೮೫॥
ಮೂಲತಃ ಕಿಶೋರ ಎಂಬ ಹೆಸರಿನ ದೇವತೆಗಳ ಒಬ್ಬ ಹಾಡುಗಾರ,
ಹರಿಸೇವೆಗಾಗಿ ಸ್ವಾಯಂಭುವನಂಶದೊಂದಿಗೆ ಹುಟ್ಟಿ ಬಂದಿದ್ದ ಧೀರ.
ಅವನೇ ಬ್ರಹ್ಮದೇವರ ಆವೇಶದಿಂದ ಬಂದವನಾಗಿದ್ದ ಜ್ಞಾನಿ ಅಕ್ರೂರ.

ಸೋsಕ್ರೂರ ಇತ್ಯಭವದುತ್ತಮಪೂಜ್ಯಕರ್ಮ್ಮಾ ವೃಷ್ಣಿಷ್ವಥಾsಸ ಸ ಹಿ ಭೋಜಪತೇಶ್ಚ ಮನ್ತ್ರೀ ।
ಆದಿಷ್ಟ ಏವ ಜಗದೀಶ್ವರದೃಷ್ಟಿಹೇತೋರಾನನ್ದಪೂರ್ಣ್ಣಸುಮನಾ ಅಭವತ್ ಕೃತಾರ್ತ್ಥಃ ॥೧೩.೮೬॥
ಉತ್ಕೃಷ್ಟರಿಂದಲೂ ಪೂಜ್ಯವಾದ ಕಾರ್ಯ ಉಳ್ಳವನಾದನಾತ,
ವೃಷ್ಣಿಗಳಲ್ಲಿ ಹುಟ್ಟಿ ಅಕ್ರೂರನೆಂದು ಕಂಸನ ಮಂತ್ರಿಯಾಗಿದ್ದನಾತ.
ಭಗವಂತನನ್ನು ನೋಡುವೆನಲ್ಲಾ ಎಂಬ ಆನಂದ,
ಆ ಆನಂದ ತುಂಬಿದ ಮನಸ್ಸಿನಿಂದ ಕೃತಕೃತ್ಯನಾದ.

No comments:

Post a Comment

ಗೋ-ಕುಲ Go-Kula