Wednesday, 7 August 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 78 - 81

ನಾಮ್ನಾsಪ್ಯರಿಷ್ಟ ಉರುಗಾಯವಿಲೋಮಚೇಷ್ಟೋ ಗೋಷ್ಠಂ ಜಗಾಮ ವೃಷಭಾಕೃತಿರಪ್ಯವದ್ಧ್ಯಃ
ಶಮ್ಭೋರ್ವರಾದನುಗತಶ್ಚ ಸದೈವ ಕಂಸಂ ಗಾ ಭೀಷಯನ್ತಮಮುಮಾಹ್ವಯದಾಶು ಕೃಷ್ಣಃ ॥೧೩.೭೮॥

ಕಂಸನ ಸೇವಕನಾಗಿ ಭಗವಂತಗೆ ವಿರುದ್ಧವಾದ ಕ್ರಿಯೆಗಳಲ್ಲೇ ನಿರತ,
ಎತ್ತಿನ ವೇಷವನ್ನು ಧರಿಸಿಕೊಂಡು ರುದ್ರವರದಿಂದ ಅವಧ್ಯನಾಗಿದ್ದನಾತ.
ಅರಿಷ್ಟನೆಂಬುವ ಹೆಸರಿನ ಅವನು ಹಸುಗಳ ಹೆದರಿಸುತ್ತಿದ್ದ,
ಎಲ್ಲ ಬಲ್ಲ ಎಲ್ಲ ಗಮನಿಸುತ್ತಿದ್ದ ಗೊಲ್ಲ ಕೃಷ್ಣ ಅವನನ್ನು ಕರೆದ.

ಸೋsಪ್ಯಾಸಸಾದ ಹರಿಮುಗ್ರವಿಷಾಣಕೋಟಿಮಗ್ರೇ ನಿಧಾಯ ಜಗೃಹೇsಸ್ಯ ವಿಷಾಣಮೀಶಃ ।
ಭೂಮೌ ನಿಪಾತ್ಯ ಚ ವೃಷಾಸುರಮುಗ್ರವೀರ್ಯ್ಯಂ ಯಜ್ಞೇ ಯಥಾ ಪಶುಮಮಾರಯದಗ್ರ್ಯಶಕ್ತಿಃ॥೧೩.೭೯॥

ಅರಿಷ್ಟ ಗಟ್ಟಿಯಾದ ಚೂಪಾದ ತನ್ನ ಕೊಂಬುಗಳ  ಮುಂದೆ ಮಾಡಿಕೊಂಡು ಬಂದ,
ಸರ್ವಸಮರ್ಥ ಕೃಷ್ಣ ಅವನ ಕೊಂಬುಗಳ ಹಿಡಿದು ಕೆಡವಿ ಯಜ್ಞಪಶುವಂತವನ ಕೊಂದ.

ಕೇಶೀ ಚ ಕಂಸವಿಹಿತಸ್ತುರಗಸ್ವರೂಪೋ ಗಿರ್ಯ್ಯಾತ್ಮಜಾವರಮವಾಪ್ಯ ಸದಾ ವಿಮೃತ್ಯುಃ ।
ಪಾಪಃ ಸ ಕೇಶವಮವಾಪ ಮುಖೇsಸ್ಯ ಬಾಹುಂ ಪ್ರಾವೇಶಯತ್ ಸ ಭಗವಾನ್  ವವೃಧೇsಥ ದೇಹೇ ॥೧೩.೮೦॥

ತತ್ಖಾದನಾಯ ಕುಮತಿಃ ಸ ಕೃತಪ್ರಯಾಸಃ ಶೀರ್ಣ್ಣಾಸ್ಯದನ್ತದಶನಚ್ಚದರುದ್ಧವಾಯುಃ ।
ದೀರ್ಣ್ಣ  ಪಪಾತ ಚ ಮೃತೋ ಹರಿರಪ್ಯಶೇಷೈರ್ಬ್ರಹ್ಮೇಶಶಕ್ರದಿನಕೃತ್ಪ್ರಮುಖೈಃ ಸ್ತುತೋsಭೂತ್ ॥೧೩.೮೧॥

ಕಂಸನಿಂದ ಕಳುಹಿಸಲ್ಪಟ್ಟ ಕುದುರೆಯ ರೂಪದ ಮತ್ತೊಬ್ಬ ಭೃತ್ಯ,
ಪರ್ವತಪುತ್ರಿ ಪಾರ್ವತಿಯಿಂದ ಸಾವಿಲ್ಲದ ವರವ ಪಡೆದಿದ್ದನಾತ.
ಪಾಪಿಷ್ಟ ಕೇಶೀ ಹೆಸರಿನ ರಕ್ಕಸ ಕೇಶವನೆಡೆಗೆ ಬಂದ, ಆಗ ಕೃಷ್ಣ ಅವನ ಬಾಯೊಳಗೆ ತನ್ನ ಕೈಯ್ಯ ತೂರಿದ.
ತೂರಿದಾ ಕೈಯ್ಯನ್ನು ರಕ್ಕಸನ ಬಾಯಲ್ಲಿ ಬೆಳೆಸಿದ.

ಕೃಷ್ಣನ ತೋಳನ್ನು ತಿನ್ನಲು ದುರ್ಬುದ್ಧಿಯ ರಕ್ಕಸನ ಪ್ರಯಾಸ,
ಮುಖಸೀಳಿ ಹಲ್ಲುದುರಿ ಉಸಿರಾಡಲಾಗದೆ ಆಯಿತವಗೆ ಆಯಾಸ.
ಮೈಸೀಳಿ ನೆಲಕ್ಕೆ ಬಿದ್ದು ಪುಡಿಪುಡಿಯಾದ ಆ ಕೇಶೀ ಎಂಬ ರಕ್ಕಸ ಮೃತನಾದ,
ಬ್ರಹ್ಮ ರುದ್ರ ಇಂದ್ರ ಸೂರ್ಯಾದಿ ದೇವತೆಗಳಿಂದ ಕೃಷ್ಣ ಕೇಶವನೆಂದು ಸ್ತುತನಾದ.

No comments:

Post a Comment

ಗೋ-ಕುಲ Go-Kula