Friday, 22 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 44 - 45

ರಾಮಕಾರ್ಯಂ ತು ಯೈಃ ಸಮ್ಯಕ್ ಸ್ವಯೋಗ್ಯಂ ನ ಕೃತಂ ಪುರಾ ।
ತೈಃ ಪೂರಿತಂ ತತ್ ಕೃಷ್ಣಾಯ ಬೀಭತ್ಸ್ವಾದ್ಯೈಃ ಸಮನ್ತತಃ ॥೨.೪೪॥

ರಾಮಾವತಾರದಲ್ಲಿ - ಇದ್ದ ಔನ್ನತ್ಯ,
ಕೃಷ್ಣಾವತಾರದಲ್ಲಿಲ್ಲ ಎಂಬಲ್ಲಿಲ್ಲ ಔಚಿತ್ಯ,
ರಾಮಾವತಾರದಲ್ಲಿ ಯಾರಿಗಾಗಲಿಲ್ಲವೋ ರಾಮ ಸೇವ,
ಕೃಷ್ಣಾವತಾರದಲ್ಲಿ ಅದನ್ನ ಮಾಡಿದರೆಂಬುದೇ ನೈಜ ಭಾವ,
ಇತರ ಭಗವದವತಾರಗಳಲ್ಲಿ ಸಿಗದ ದೇವತೆಗಳ ಸಾಧನಾ ನಿರ್ಣಯ,
ರಾಮ ಕೃಷ್ಣಾವತಾರಗಳಲ್ಲಿ ತೋರಿಸಲ್ಪಟ್ಟಿದೆ ಸ್ಪಷ್ಟ ಮಾಡಿ ಸಮನ್ವಯ.

ಅಧಿಕಂ ಯೈಃ ಕೃತಂ ತತ್ರ ತೈರೂನಂ ಕೃತಮತ್ರ ತತ್ ।
ಕರ್ಣಾದ್ಯೈರಧಿಕಂ ಯೈಸ್ತು ಪ್ರಾದುರ್ಭಾವದ್ವಯೇ ಕೃತಮ್ ।
ವಿವಿದಾದ್ಯೈರ್ಹಿ ತೈಃ ಪಶ್ಚಾದ್ ವಿಪ್ರತೀಪಂ ಕೃತಂ ಹರೇಃ ॥೨.೪೫॥

ರಾಮಾವತಾರದಲ್ಲಿ ಯಾರ್ಯಾರಿಗಾಯ್ತೋ ಯೋಗ್ಯತೆ ಮೀರಿ ಪುಣ್ಯ ಸಂಪಾದನೆ,
ಕೃಷ್ಣಾವತಾರದಲ್ಲಿ ಕಡಿಮೆ ಪುಣ್ಯ ಸಂಪಾದನೆಯಿಂದ ಸಮತೋಲನದ ಪ್ರತಿಪಾದನೆ,
ರಾಮಾವತಾರದಲ್ಲಿ ಸುಗ್ರೀವನಾಗಿ ಮಾಡಿದ ರಾಮ ಸೇವೆ ಅಧಿಕ,

ಕೃಷ್ಣಾವತಾರದಲ್ಲಿ ಕರ್ಣನಾಗಿ ದೈವವಿರೋಧಿ ಆದದ್ದು ದ್ಯೋತಕ.
[Contributed by Shri Govind Magal]

Thursday, 21 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 42 - 43

ಬಲದೇವಸ್ತತಃ ಪಶ್ಚಾತ್ ತತಃ ಪಶ್ಚಾಚ್ಚ ಫಲ್ಗುನಃ ।
ನರಾವೇಶಾದನ್ಯಥಾ ತು ದ್ರೌಣಿಃ ಪಶ್ಚಾತ್ ತತೋsಪರೇ ॥೨.೪೨॥

ಭೂಭಾರಹರಣ ಕಾರ್ಯದಲ್ಲಿ ಮೊದಲ ಸಹಾಯಕ ಭೀಮ,
ಆನಂತರ ಕೃಷ್ಣನಣ್ಣನಾಗಿ ಅವತರಿಸಿ ಬಂದ ಬಲರಾಮ,
ತರುವಾಯ ನಿಲ್ಲುತ್ತಾನೆ ತಾನು ಅರ್ಜುನ,
ಅದಕ್ಕೆ ಶೇಷನ ಆವೇಶವಿದ್ದದ್ದೇ ಕಾರಣ,
ಅನುಸರಿಸುತ್ತಾನೆ ಶಿವನವತಾರಿ ಅಶ್ವತ್ಥಾಮ,
ಶೇಷಾವೇಶದಿಂದ ಅರ್ಜುನ ಹೆಚ್ಚೆಂಬ ನೇಮ.

ರಾಮವಜ್ಜಾಮ್ಬವತ್ಯಾದ್ಯಾಃ ಷಟ್ ತತೋ ರೇವತೀ ತಥಾ ।
ಲಕ್ಷ್ಮಣೋ ಹನುಮತ್ ಪಶ್ಚಾತ್ ತತೋ ಭರತವಾಲಿನೌ ।
ಶತ್ರುಘ್ನಸ್ತು ತತಃ ಪಶ್ಚಾತ್ ಸುಗ್ರೀವಾದ್ಯಾಸ್ತತೋsವರಾಃ ॥೨.೪೩॥

ಬಲರಾಮಗೆ ಸಮನಾಗಿ ನಿಂತವಳು ಷಣ್ಮಹಿಷಿಯರೊಂದಿಗೆ ಜಾಂಬವತಿ,
ಶೇಷ ಪತ್ನಿ ವಾರುಣಿ ಅವತರಿಸಿಸುತ್ತಾಳೆ -ಬಲರಾಮನ ಪತ್ನಿಯಾಗಿ ರೇವತಿ,
ರಾಮಾಯಣದಲ್ಲೂ ಪ್ರಮುಖನಾದವ ಹನುಮಂತ,
ರಾಮಸೇವಾ ಕಾರ್ಯದಿ ಸೇವಕನಾಗಿ ತಾನು ನಿಂತ,
ನಂತರ ಬರುವುದು ರಾಮಾನುಜ ಲಕ್ಷ್ಮಣನ ಸ್ಥಾನ,

ಭರತ,ವಾಲಿ,ಶತ್ರುಘ್ನ,ಸುಗ್ರೀವ ತಾರತಮ್ಯದ ಮಾನ.
[Contributed by Shri Govind Magal]

Wednesday, 20 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 39 - 41

ತಸ್ಮಾದ್ ರೂಪಗುಣೋದಾರಾ ಜಾನಕೀ ರುಗ್ಮಿಣೀ ತಥಾ ।
ಸತ್ಯಭಾಮೇತ್ಯಾದಿರೂಪಾ ಶ್ರೀಃ ಸರ್ವಪರಮಾ ಮತಾ ॥೨.೩೯॥

ರೂಪ ಗುಣದಲ್ಲಿ ಮಿಗಿಲಾದವರು ಸೀತೆ ,ರುಗ್ಮಿಣಿ-ಸತ್ಯಭಾಮೆ,
ಅವರೆಲ್ಲರಲ್ಲೂ ಇದ್ದವಳು ಒಬ್ಬಳೇ ಆದ ಮಾತೆ ತಾನು ರಮೆ,
ಲಕ್ಷಣಗಳು, ರೂಪ, ಗುಣಗಳು ಲಕ್ಷ್ಮಿ ಸೇರಿ ಕೆಳಗಿನವರಿಗೆಂದೇ ನಿರ್ಧಾರ,
ಮಾತೆ ಲಕ್ಷ್ಮಿಯೇ "ಸ್ತ್ರೀರತ್ನ"ಎಂದು ಭಾರತದಿಂದ ಸಾಕಾರ.

ತತಃ ಪಶ್ಚಾದ್ ದ್ರೌಪದೀ ಚ ಸರ್ವಾಭ್ಯೋ ರೂಪತೋ ವರಾ ।
ಭೂಭಾರಕ್ಷಪಣೇ ಸಾಕ್ಷಾದಙ್ಗಂ ಭೀಮವದೀಶಿತುಃ ॥೨.೪೦॥

ಆನಂತರ ಗುಣ-ರೂಪದಲ್ಲಿ ಮಿಗಿಲಾಗಿರುವುದು ದ್ರೌಪದಿ,
ಭಗವಂತನ ಪ್ರೀತಿಪಾತ್ರನಾದ ಮಗ ಭೀಮಸೇನನ  ಮಡದಿ,
ಮಹಾಭಾರತದ ಭೂಭಾರಹರಣ ಕಾರ್ಯದಲ್ಲಿ,
ತಾನೂ ಭಗವತ್ಕಾರ್ಯದಲ್ಲಿದ್ದಳು ಮುಂಚೂಣಿಯಲ್ಲಿ,
ಹೀಗಾಗಿ ವ್ಯಾಸರು ಚಿತ್ರಿಸಿದ ಸ್ತ್ರೀ ರೂಪಗಳ ಸೌಂದರ್ಯ,
ಆ ಸ್ತ್ರೀ ಪಾತ್ರಗಳ ಗುಣೋಪಾಸನೆಯ ಮುಖ್ಯ ಆಂತರ್ಯ.

ಹನ್ತಾ ಚ ವೈರಹೇತುಶ್ಚ ಭೀಮಃ ಪಾಪಜನಸ್ಯ ತು ।
ದ್ರೌಪದೀ ವೈರಹೇತುಃ ಸಾ ತಸ್ಮಾದ್ ಭೀಮಾದನನ್ತರಾ ॥೨.೪೧॥

ಭೀಮನಾಗಿದ್ದ ಪಾಪಿ ಜನರ ವೈರತ್ವಕ್ಕೆ ಕಾರಣ,
ಹಾಗೇ ಪೂರೈಸಿದ ಕೂಡಾ ದುಷ್ಟರೆಲ್ಲರ ಮಾರಣ,
ಕಾರಣಳಾಗಿ ನಿಂತ ದ್ರೌಪದಿಯಿಂದಲೇ ದುಷ್ಟರ ವೈರ-ಶತ್ರುತ್ವ,

ಭಗವದಿಚ್ಛೆಯಂತೆ ಪತಿಯ ಕಾರ್ಯದಲ್ಲಿ ನೆರವಾದಳೆಂಬ ತತ್ವ.
[Contributed by Shri Govind Magal]

Tuesday, 19 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 33 - 38

ತಸ್ಮಾದ್ ಬಲಪ್ರವೃತ್ತಸ್ಯ ರಾಮಕೃಷ್ಣಾತ್ಮನೋ ಹರೇಃ ।
ಅನ್ತರಙ್ಗಂ ಹನೂಮಾಂಶ್ಚ ಭೀಮಸ್ತತ್ಕಾರ್ಯಸಾಧಕೌ ॥೨.೩೩॥

ಬ್ರಹ್ಮಾತ್ಮಕೋ ಯತೋ ವಾಯುಃ ಪದಂ ಬ್ರಾಹ್ಮಮಗಾತ್ ಪುರಾ ।
ವಾಯೋರನ್ಯಸ್ಯ ನ ಬ್ರಾಹ್ಮಂ ಪದಂ ತಸ್ಮಾತ್ ಸ ಏವ ಸಃ ॥೨.೩೪ll

ಬಲಕಾರ್ಯದಲ್ಲಿ ರಾಮ -ಕೃಷ್ಣರು ಪ್ರವೃತ್ತರಾದಾಗ,
ಹನುಮ -ಭೀಮರು ಅವರ ಪಾಲುದಾರರಾದರಾಗ,
ಅವರೆಂದೂ ಭಗವಂತಗೆ ಆತ್ಮೀಯ ಮತ್ತು ಅತಿ ಪ್ರಿಯ,
ಸದಾ ಆಜ್ಞಾನುಸಾರಿಯಾಗಿ ಭಗವತ್ಕಾರ್ಯದಿ ಸಕ್ರಿಯ.

ವೇದ ಭಾರತ ಪುರಾಣ ಪಂಚರಾತ್ರದ ಹೂರಣ,
ಕಾರಣವಾಗಬೇಕು ತಿಳಿಯಲು ಬ್ರಹ್ಮನ ಗುಣ,
ನಂತರವೇ ತೀರ್ಮಾನವಾಗುತ್ತದೆ ವಾಯುವಿನ ಸ್ಥಾನ,
ಏಕೆಂದರೆ ಬ್ರಹ್ಮ ಮುಖ್ಯಪ್ರಾಣರಿಬ್ಬರದೂ ಒಂದೇ ಗಣ,
ಹಿಂದಿನ ಕಲ್ಪದಲ್ಲಿ ವಾಯುವಾಗಿದ್ದ ದೇವತೆ,
ಮುಂದಿನ ಕಲ್ಪದಲ್ಲಿ ಬ್ರಹ್ಮನಾಗುವ ಅರ್ಹತೆ,
ಬ್ರಹ್ಮ ವಾಯುಗಳಿಬ್ಬರೂ ಜ್ಞಾನ ಬಲದಲ್ಲಿ ಸಮ,
ಸಾರಿ ಸಾರಿ ಹೇಳಿದೆ ಇದನ್ನೇ ತಾರತಮ್ಯದ ನೇಮ.

ಯತ್ರ ರೂಪಂ ತತ್ರಗುಣಾ ಭಕ್ತ್ಯಾದ್ಯಾಃ ಸ್ತ್ರೀಷು ನಿತ್ಯಶಃ ।
ರೂಪಂ ಹಿ ಸ್ಥೂಲದೃಷ್ಟೀನಾಂ ದೃಶ್ಯಂ ವ್ಯಕ್ತಂ ತತೋ ಹಿ ತತ್ ॥೨.೩೫॥

ಎಲ್ಲೆಲ್ಲಿ ಹೇಳಿದೆಯೋ ಸ್ತ್ರೀ ಪಾತ್ರಗಳ ಸೌಂದರ್ಯ,
ಅದು ವ್ಯಾಸರು ಮಾಡಿದ ಗುಣಗಾನದ ಆಂತರ್ಯ,
ಗುಣ ಹೇಳಲಿಕ್ಕೆಂದೇ ವ್ಯಾಸರು ಮಾಡಿದ ವರ್ಣನೆ,
ಅದು ಭಗವತ್ಕಾರ್ಯ ಸಾಧಕ ಗುಣಗಳ ಬಣ್ಣನೆ.

ಪ್ರಾಯೋ ವೇತ್ತುಂ ನ ಶಕ್ಯನ್ತೇ ಭಕ್ತ್ಯಾದ್ಯಾಃ ಸ್ತ್ರೀಷು ಯತ್ ತತಃ ।
ಯಾಸಾಂ ರೂಪಂ ಗುಣಾಸ್ತಾಸಾಂ ಭಕ್ತ್ಯಾದ್ಯಾ ಇತಿ ನಿಶ್ಚಯಃ ॥೨.೩೬॥

ಸ್ತ್ರೀಯರ ಭಕ್ತ್ಯಾದಿ ಗುಣಗಳನ್ನು ಗ್ರಹಿಸುವುದು ಕಷ್ಟ,
ಅಮಿತ ರೂಪವಿರುವಲ್ಲಿ ಅಧಿಕ ಗುಣಗಳು ಸ್ಪಷ್ಟ.

ತಚ್ಚ ನೈಸರ್ಗಿಕಂ ರೂಪಂ ದ್ವಾತ್ರಿಂಶಲ್ಲಕ್ಷಣೈರ್ಯುತಮ್ ।
ನಾಲಕ್ಷಣಂ ವಪುರ್ಮಾತ್ರಂ ಗುಣಹೇತುಃ ಕಥಞ್ಚನ ॥೨.೩೭॥

ಇರಬೇಕು ಮೂವತ್ತೆರಡು ಸಲ್ಲಕ್ಷಣಭರಿತ ಸಹಜ ರೂಪ,
ಬರಿಯ ದೇಹ ಸೌಂದರ್ಯ ಆಗಲ್ಲ ಗುಣಗಳಿಗೆ ಮಾಪ.

ಆಸುರೀಣಾಂ ವರಾದೇಸ್ತು ವಪುರ್ಮಾತ್ರಂ ಭವಿಷ್ಯತಿ ।
ನ ಲಕ್ಷಣಾನ್ಯತಸ್ತಾಸಾಂ ನೈವ ಭಕ್ತಿಃ ಕಥಞ್ಚನ ॥೨.೩೮॥

ಅಸುರ ಸ್ತ್ರೀಯರಿಗೂ ವರ ಇತ್ಯಾದಿಗಳಿಂದ ರೂಪ ಇರುವುದುಂಟು,

ಸಲ್ಲಕ್ಷಣ ಭಕ್ತ್ಯಾದಿ ಗುಣಗಳು ಅಲ್ಲಿರುವುದಿಲ್ಲ ಎಂಬುದೇ ಗುಟ್ಟು.
[Contributed by Shri Govind Magal]

Monday, 18 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 23 - 32

ಕೃಷ್ಣರಾಮಾದಿರೂಪೇಷು ಬಲಕಾರ್ಯೋ ಜನಾರ್ದನಃ ।
ದತ್ತವ್ಯಾಸಾದಿರೂಪೇಷು ಜ್ಞಾನಕಾರ್ಯಸ್ತಥಾ ಪ್ರಭುಃ  ॥೨.೨೩॥

ಪರಮಾತ್ಮನ ಅವತಾರಗಳಲ್ಲಿ ಮುಖ್ಯವಾಗಿ ಎರಡು ರೀತಿ,
ಒಂದು ದುಷ್ಟನಿಗ್ರಹಕೆ ಬಲಪ್ರಧಾನ ಇನ್ನೊಂದು ಜ್ಞಾನಪ್ರದಾನಕೆ ಖ್ಯಾತಿ,
ದುಷ್ಟನಿಗ್ರಹಕೆ ಬಲಪ್ರಧಾನ ರಾಮಕೃಷ್ಣಾದಿ ರೂಪಗಳು,
ಜ್ಞಾನಕಾರ್ಯಕೆ ಜ್ಞಾನಪ್ರಧಾನ ದತ್ತ ವ್ಯಾಸಾದಿ ರೂಪಗಳು.

ಮತ್ಸ್ಯಕೂರ್ಮವರಾಹಾಶ್ಚ ಸಿಂಹವಾಮನಭಾರ್ಗವಾಃ ।
ರಾಘವಃ ಕೃಷ್ಣಬುದ್ಧೌ ಚ ಕೃಷ್ಣದ್ವೈಪಾಯನಸ್ತಥಾ ॥೨.೨೪॥
ಕಪಿಲೋ ದತ್ತವೃಷಭೌ ಶಿಂಶುಮಾರೋ ರುಚೇಃ ಸುತಃ  । 
ನಾರಾಯಣೋ ಹರಿಃ ಕೃಷ್ಣಸ್ತಾಪಸೋ ಮನುರೇವ  ಚ ॥೨.೨೫॥

ಮಹಿದಾಸಸ್ತಥಾ ಹಂಸಃ ಸ್ತ್ರೀರೋಪೋ ಹಯಶೀರ್ಷವಾನ್ ।
ತಥೈವ ಬಡಬಾವಕ್ತ್ರಃ ಕಲ್ಕೀ ಧನ್ವನ್ತರಿಃ ಪ್ರಭುಃ ॥೨.೨೬॥

ಇತ್ಯಾದ್ಯಾಃ ಕೇವಲೋ ವಿಷ್ಣುರ್ನೈಷಾಂ ಭೇದಃ ಕಥಞ್ಚನ ।
ನ ವಿಶೇಷೋ ಗುಣೈಃ ಸರ್ವೇರ್ಬಲಜ್ಞಾನಾದಿಭಿಃ ಕ್ವಚಿತ್ ॥೨.೨೭॥

ಇರಬೇಕು ಭಗವಂತನ ಅವತಾರಗಳಲ್ಲಿ ಸ್ಪಷ್ಟ ಜ್ಞಾನ,
ಮಾಡಿದ್ದಾರೆ ಆಚಾರ್ಯ ಕೆಲ ಅವತಾರಗಳ ಪಟ್ಟಿ ಪ್ರದಾನ.
ಮತ್ಸ್ಯ ,ಕೂರ್ಮ ,ವರಾಹ ,ನರಸಿಂಹ ,ವಾಮನ,
ಪರಶುರಾಮ ,ರಾಮ ,ಕೃಷ್ಣ ,ವ್ಯಾಸ ,ಕಪಿಲ-ನಾಮ,
ಅತ್ರಿ ಅನಸೂಯರಲ್ಲಿ ಹುಟ್ಟಿದ ದತ್ತನ ಅವತಾರ,
ಮೇರುದೇವಿ ನಾಭಿಯಲ್ಲಿ ಹುಟ್ಟಿದ ಋಷಭಾವತಾರ,
ಶಿಂಶುಮಾರ ,ರುಚಿ ಪ್ರಜಾಪತಿಯಲ್ಲಿ ಯಜ್ಞಾವತಾರ,
ಯಮಧರ್ಮ ಮತ್ತು ಮೂರ್ತಿ -ಇವರಲ್ಲಿ,
ಜನ್ಮತಾಳಿದ-ನಾರಾಯಣ-ಹರಿ-ಕೃಷ್ಣ ರೂಪದಲ್ಲಿ,
ತಾಪಸ ವಾಸುದೇವ-ಗಜೇಂದ್ರನ ಕಾಯ್ದ ದೇವ,
ಮಹಿದಾಸ ,ಹಂಸ ,ಹಯಗ್ರೀವ ದೇವನ ಸ್ತ್ರೀ ರೂಪ,
ಬಡಬಾವಕ್ತ್ರ ಎಂಬ ಸಮುದ್ರಮಧ್ಯದ ಬೆಂಕಿ ಅವಲಂಬಿತ ರೂಪ,
ಕಲ್ಕೀ -ಧನ್ವಂತರೀ ಇವೆಲ್ಲಾ ವಿಷ್ಣು ಅವತಾರ ರೂಪ,
ನಾರಾಯಣಗೂ ಈ ಅವತಾರಗಳಿಗೂ ಭೇದವಿಲ್ಲ ಎಂಬುದವನ ಪ್ರತಾಪ.

ವೇದವ್ಯಾಸರಿಗಿಲ್ಲ ಹೆಚ್ಚು ಶಕ್ತಿ,
ಕೃಷ್ಣನದು ರಾಜಕಾರಣದ ಯುಕ್ತಿ,
ರಾಮ ಮರ್ಯಾದಾಪುರುಷೋತ್ತಮ,
ದತ್ತ -ಕಪಿಲರದು ಬರೀ ಉಪದೇಶದ ನೇಮ,
ಮೇಲಿನಂತೆ ತಿಳಿದರದು  ಭ್ರಮೆಯ ಪರಾಕಾಷ್ಠೆ,
ಆವಶ್ಯಕ ಅವನವತಾರಗಳೆಲ್ಲ ಸಮ ಎಂಬ ನಿಷ್ಠೆ.

ಶ್ರೀರ್ಬ್ರಹ್ಮರುದ್ರೌ ಶೇಷಶ್ಚವೀನ್ದ್ರೇನ್ದ್ರೌ ಕಾಮ ಏವ ಚ ।
ಕಾಮಪುತ್ರೋsನಿರುದ್ಧಶ್ಚಸೂರ್ಯಶ್ಚನ್ದ್ರೋ ಬೃಹಸ್ಮತಿಃ ॥೨.೨೮॥

ಧರ್ಮ ಏಷಾಂ ತಥಾ ಭಾರ್ಯಾ ದಕ್ಷಾದ್ಯಾ ಮನವಸ್ತಥಾ ।
ಮನುಪುತ್ರಾಶ್ಚ ಋಷಯೋ ನಾರದಃ ಪರ್ವತಸ್ತಥಾ ॥೨.೨೯॥

ಕಶ್ಯಪಃ ಸನಕಾದ್ಯಾಶ್ಚ ಬ್ರಹ್ಮಾದ್ಯಾಶ್ಚೈವ ದೇವತಾಃ ।
ಭರತಃ ಕಾರ್ತವೀರ್ಯಶ್ಚ ವೈನ್ಯಾದ್ಯಾಶ್ಚಕ್ರವರ್ತಿನಃ ॥೨.೩೦॥

ಗಯಶ್ಚ ಲಕ್ಷ್ಮಣಾದ್ಯಾಶ್ಚ ತ್ರಯೋ ರೋಹಿಣಿನನ್ದನಃ ।
ಪ್ರದ್ಯುಮ್ನೋ ರೌಗ್ಮಿಣೇಯಶ್ಚ ತತ್ಪುತ್ರಶ್ಚಾನಿರುದ್ಧಕಃ ॥೨.೩೧॥

ನರಃ ಫಲ್ಗುನ ಇತ್ಯಾದ್ಯಾ ವಿಶೇಷಾವೇಶಿನೋ ಹರೇಃ ।
ವಾಲಿಸಾಮ್ಬಾದಯವಶ್ಚೈವ ಕಿಞ್ಚಿದಾವೇಶಿನೋ ಹರೇ’  ॥೨.೩೨॥

ಲಕ್ಷ್ಮಿಯ ನಂತರ ಬ್ರಹ್ಮ ,ರುದ್ರ ,ಶೇಷ ,ಗರುಡ ,ಇಂದ್ರ;
ಕಾಮ ,ಕಾಮಪುತ್ರ ಅನಿರುದ್ಧ ,ಸೂರ್ಯ ,ಚಂದ್ರ;
ಬೃಹಸ್ಪತಿ ,ಯಮಧರ್ಮ ಅವನ ಪತ್ನಿಯರುಗಳು,
ದಕ್ಷಾದಿಪ್ರಜಾಪತಿಗಳು ಸ್ವಾಯಂಭುವಾದಿಮನುಗಳು;
ಪ್ರಿಯವ್ರತ ,ಉತ್ಥಾನಪಾದಾದಿ ಮನುವಿನ ಮಕ್ಕಳು;
ವಸಿಷ್ಠ ,ವಿಶ್ವಾಮಿತ್ರರೇ ಮೊದಲಾದ ಋಷಿಗಳು;
ನಾರದ ,ಪರ್ವತ ಮೊದಲಾದ ದೇವತೆಗಳು;
ಕಾಶ್ಯಪ ,ಸನಕಾದಿ ಗೃಹಸ್ತ ಮತ್ತು ಸನ್ಯಾಸಿಗಳು;
ಅಗ್ನಿ ಮೊದಲಾದ ಅನೇಕ ದೇವತೆಗಳು;
ಭರತ ,ಕೃತವೀರ್ಯಪುತ್ರ ಅರ್ಜುನ ಪೃಥಾದಿ ಚಕ್ರವರ್ತಿಗಳು;
ಲಕ್ಷ್ಮಣ ,ಭರತ ,ಶತ್ರುಘ್ನ ಮತ್ತು ಹಲಾಯುಧ;
ರುಗ್ಮಿಣಿಪುತ್ರ ಪ್ರದ್ಯುಮ್ನ ,ಪ್ರದ್ಯುಮ್ನಪುತ್ರ ಅನಿರುದ್ಧ;
ಯಮಧರ್ಮನ ನಾಕನೇ ಮಗ ನರ ಅರ್ಜುನ;
ಇನ್ನು ವಾಲಿ ಸಾಂಬಾ ಮೊದಲಾದವರಲ್ಲೂ ಇತ್ತು ಭಗವದಾವೇಶ;
ಆ ಕಾರಣದಿಂದಲೇ ಸಿಕ್ಕಿತವರಿಗೆ ದೊಡ್ಡ ಕಾರ್ಯದ ಸದವಕಾಶ;
ಇವರೆಲ್ಲರಿಗೂ ವಿಶೇಷ ಹರಿ ಆವೇಶದ ಸ್ಥಾನಮಾನ;
ಪೂಜ್ಯರಾಗುತ್ತಾರೆ ಇವರೆಲ್ಲಾ ಭಗವದಾವೇಶದಿಂದ;

ಸ್ಪಷ್ಟ-ಮಧ್ವರು ತಿಳಿಸಿದ ದೇವತಾ ತಾರತಮ್ಯದಿಂದ.
[Contributed by Shri Govind Magal]

Saturday, 16 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 20 - 22

ಜ್ಞಾನಾದಯೋ ಗುಣಾ ಯಸ್ಮಾಜ್ಜ್ಞಾಯನ್ತೇ ಸೂಕ್ಷ್ಮದೃಷ್ಟಿಭಿಃ
ತಸ್ಮಾದ್ ಯತ್ರ ಬಲಂ ತತ್ರ ವಿಜ್ಞಾತವ್ಯಾ ಗುಣಾಃ ಪರೇ .೨೦

ಜ್ಞಾನ ಭಗವದ್ ಭಕ್ತಿ ಸೂಕ್ಷ್ಮದೃಷ್ಟಿಗಷ್ಟೇ ಗೋಚರ,
ಸ್ಥೂಲ ದೃಷ್ಟಿಯ ನೋಡುಗರಿಗದು -ಅಗೋಚರ,
ಎಲ್ಲಿರುತ್ತದೋ ನೈಸರ್ಗಿಕವಾದ ಅಧಿಕ ಶಕ್ತಿ,
ಅಲ್ಲಿದ್ದೇ ಇರುತ್ತದೆ ಜ್ಞಾನ ಎಂಬುದು ಸ್ಪಷ್ಟ ಉಕ್ತಿ.

ಉದಾಹರಣೆಗೆ ಮಹಾಭಾರತದ ಭೀಮಸೇನ,
ಅನೇಕರಂತೆ ಅವ ಭಾರೀ ಬಲಶಾಲಿ-ಜ್ಞಾನ ಹೀನ,
ಅರ್ಜುನಗಷ್ಟೇ ಏಕೆ ಉಪದೇಶ ಜ್ಯೇಷ್ಠ ಭೀಮಗೇಕಿಲ್ಲ?
ಕಾಯಿಲೆಯಿದ್ದವರಿಗಷ್ಟೇ  ಮದ್ದು-ಜ್ಞಾನಿ ಭೀಮಗದು ಬೇಕಿಲ್ಲ,
ಅಲ್ಲೂ ದೇವತಾವತಾರಿ ಅರ್ಜುನ ನಿಮಿತ್ತ ಮಾತ್ರ,
ಅವನೆದುರು ಹೇಳಲ್ಪಟ್ಟದ್ದು ಇಡೀ ಜೀವರಾಶಿಗೆ ಗೀತಾಸೂತ್ರ.

ದೇವೇಷ್ವೇವ ನಚಾನ್ಯೇಷು ವಾಸುದೇವಪ್ರತೀಪತಃ
ಕ್ಷತ್ರಾದನ್ಯೇಷ್ವಪಿ ಬಲಂ ಪ್ರಮಾಣಂ ಯತ್ರ ಕೇಶವಃ .೨೧

ಪ್ರವೃತ್ತೋ ದುಷ್ಟನಿಧನೇ ಜ್ಞಾನಕಾರ್ಯೇ ತದೇವ 
ಅನ್ಯತ್ರ ಬ್ರಾಹ್ಮಣಾನಾಂ ತು ಪ್ರಮಾಣಂ ಜ್ಞಾನಮೇವ ಹಿ 
ಕ್ಷತ್ರಿಯಾಣಾಂ ಬಲಂ ಚೈವ ಸರ್ವೇಷಾಂ ವಿಷ್ಣುಕಾರ್ಯತಾ .೨೨


ಎಲ್ಲೆಲ್ಲಿ ಬಲವಿದೆಯೋ ಅಲ್ಲಿ ಜ್ಞಾನಭಕ್ತಿಯಿದೆ ಎಂಬುದು ನಿಸ್ಸಂಶಯ,
ಮಾನದಂಡ ದೇವತೆಗಳು-ದೇವತಾವತಾರಿ ಕ್ಷತ್ರಿಯರಿಗೆ ಅನ್ವಯ,
ಮೇಲಿನ ಸವಲತ್ತು ಮನುಷ್ಯರಿಗೆ ಅಸುರರಿಗೆ ಇರುವುದಿಲ್ಲ,
ಹೊರತಾಗಿ ಇತರರಲ್ಲಿ-ಬ್ರಾಹ್ಮಣ-ಅಶ್ವತ್ಥಾಮರಲ್ಲಿ ಬಲ ಇಲ್ಲದಿಲ್ಲ,
ಇನ್ಯಾರಿಗೇ ಆಗಲಿ ಬಲವಿಡೋದು ದೇವನದೇ ಶಕ್ತಿ,
ಲೋಕನಿಯಮನಕ್ಕಾಗಿ ಅವನೇ ನಡೆಸುವ ಯುಕ್ತಿ,
ದುಷ್ಟ ಸಂಹಾರದಲ್ಲಿ ಬ್ರಾಹ್ಮಣರಲ್ಲೂ ಒಮ್ಮೊಮ್ಮೆ ಬಲ ಇಡುವ ರೀತಿ,
ಬೇರೆಡೆ ಜ್ಞಾನಿಬ್ರಾಹ್ಮಣ ಮಿಗಿಲು ಎಂಬ ಚಿಂತನೆ ಅವನಿಟ್ಟ ನೀತಿ,
ಸಾಮಾನ್ಯವಾಗಿ ಕ್ಷತ್ರಿಯಗೆ ಬಲವೇ ಮೇಲು,

ಬ್ರಾಹ್ಮಣನಾದವಗೆ ಜ್ಞಾನವೇ ಸಿಂಹ ಪಾಲು.
ಕೆಳಗಿನಂತೆ ಕ್ಷತ್ರಿಯರಲ್ಲಿ ಬಲಗಣನೆಯ ಮಾಪನ,
ಆಗಿದೆಯೇ ಆ ಬಲ ದೇವತಾಕಾರ್ಯದ ಸಾಧನ?
ಆಗಬೇಕದು ತಾರತಮ್ಯನೀತಿಯಿಂದ ತೀರ್ಮಾನ.

[Contributed by Shri Govind Magal]