‘ಸಮ್ಯಗ್ ಲಕ್ಷಣಸಮ್ಪನ್ನೋ ಯದ್ ದದ್ಯಾತ್
ಸುಪ್ರಸನ್ನಧೀಃ ।
‘ಶಿಷ್ಯಾಯ ಸತ್ಯಂ ಭವತಿ ತತ್ ಸರ್ವಂ ನಾತ್ರ
ಸಂಶಯಃ ॥೧.೧೨೪॥
‘ಅಗಮ್ಯತ್ವಾದ್ಧರಿಸ್ತಸ್ಮಿನ್ನಾವಿಷ್ಟೋ
ಮುಕ್ತಿದೋ ಭವೇತ್’ ।
‘ನಾತಿಪ್ರಸನ್ನಹೃದಯೋ ಯದ್ ದದ್ಯಾದ್
ಗುರುರಪ್ಯಸೌ ।
‘ನ ತತ್ ಸತ್ಯಂ ಭವೇತ್ ತಸ್ಮಾದರ್ಚನೀಯೋ
ಗುರುಃ ಸದಾ ॥೧.೧೨೫॥
ಸಲ್ಲಕ್ಷಣದಿಂದ ಕೂಡಿದ ಗುರು ಕೊಡುವ ಪ್ರಸಾದ,
ಅದಾಗುತ್ತದೆ ಎಂದೂ ಶಿಷ್ಯನಾದವಗೆ ಫಲಪ್ರದ,
ಗುರುಗಳ ಮುಖೇನವೇ ದೇವರ ಅರಿವ ರೀತಿ,
ಅದೇ ಮೋಕ್ಷವನ್ನು ಪಡೆಯುವ ಏಕೈಕ ನೀತಿ,
ಗುರುವಿನಲ್ಲಿ ಆ ಸಲ್ಲಕ್ಷಣ ಇದ್ದೇ ಇರುವುದೆಂಬ ಸತ್ಯ,
ಇನ್ಯಾವುದೇ ಒತ್ತಡದಿಂದ ಬಂದ ವಿದ್ಯೆ ಆಗಲ್ಲ ನಿತ್ಯ,
ಗುರುವಿನಲ್ಲಿ ಶಿಷ್ಯಗಿದ್ದೇ ಇರಬೇಕದು ಅತ್ಯಾದರ,
ಶಿಷ್ಯ ಕರ್ತವ್ಯಪೂರ್ವಕ ಗುರುವಿಗೆ ಹಾಕುವ ಹಾರ.
‘ಸ್ವಾವರಾಣಾಂ ಗುರುತ್ವಂ ತು ಭವೇತ್
ಕಾರಣತಃ ಕ್ವಚಿತ್ ।
‘ಮರ್ಯಾದಾರ್ಥಂ ತೇsಪಿ ಪೂಜ್ಯಾ ನತು ಯದ್ವತ್ ಪರೋ ಗುರುಃ’ ।
ಇತ್ಯೇತತ್
ಪಞ್ಚರಾತ್ರೋಕ್ತಂ ಪುರಾಣೇಷ್ವನುಮೋದಿತಮ್ ॥೧.೧೨೬॥
ಕೆಲವೊಮ್ಮೆ ಶಿಷ್ಯಗಿಂತ ಸ್ವಭಾವ ಯೋಗ್ಯತೆಯಲ್ಲಿ ಕಿರಿಯಗೆ
ಗುರುಸ್ಥಾನ ಲಭ್ಯ,
ಕಾಲಕ್ರಮೇಣ ಈ ಸತ್ಯ ಶಿಷ್ಯಗರಿವಾದಾಗ ಅವನು ಆಗಿರಲೇ ಬೇಕು
ಸಭ್ಯ,
ಶಿಷ್ಯ ಹೋಗಬಾರದು ಗುರುವಿಗೆ ಮಾಡಿ ಧಿಕ್ಕಾರ,
ಇದು ಪಂಚರಾತ್ರ ಪುರಾಣಗಳಲ್ಲಿ ಹೇಳಿದ ಸಾರ,
ಬೇಕೇಬೇಕು ಮೇಲಿನ ಎಲ್ಲಾ ಅಂಶಗಳ ಮನನ,
ಸಾಧ್ಯವಾಗುವುದಾಗ ಮಹಾಭಾರತದ ಅಧ್ಯಯನ.
‘ಯದಾ ಮುಕ್ತಿಪ್ರದಾನಸ್ಯ ಸ್ವಯೋಗ್ಯಂ
ಪಶ್ಯತಿ ಧ್ರುವಮ್ ।
‘ರೂಪಂ ಹರೇಸ್ತದಾ ತಸ್ಯ ಸರ್ವಪಾಪಾನಿ
ಭಸ್ಮಸಾತ್ ॥೧.೧೨೭॥
‘ಯಾನ್ತಿ ಪೂರ್ವಾಣ್ಯುತ್ತರಾಣಿ ನ ಶ್ಲೇಷಂ
ಯಾನ್ತಿ ಕಾನಿಚಿತ್ ।
‘ಮೋಕ್ಷಶ್ಚ ನಿಯತಸ್ತಸ್ಮಾತ್
ಸ್ವಯೋಗ್ಯಹರಿದರ್ಶನೇ’ ॥೧.೧೨೮॥
ಭವಿಷ್ಯತ್ಪರ್ವವಚನಮಿತ್ಯೇತತ್
ಸೂತ್ರಗಂ ತಥಾ ।
ಶ್ರುತಿಶ್ಚ
ತತ್ಪರಾ ತದ್ವತ್ ‘ತದ್ಯಥೇ’ ತ್ಯವದತ್ ಸ್ಪುಟಮ್ ॥೧.೧೨೯॥
ಯಾವಾಗಾಗುತ್ತದೋ ನಮ್ಮ ಯೋಗ್ಯ ಬಿಂಬ ದರ್ಶನ,
ಆಗ ಆಗುತ್ತವೆ ನಮ್ಮ ಸಕಲ ಪಾಪಗಳೂ ನಾಶನ,
ಸುಟ್ಟು ಹೋಗುತ್ತವೆ ಹಳೆಯ ಪಾಪ,
ಆಗುವುದಿಲ್ಲ ಆಗಾಮಿ ಪಾಪಗಳ ಲೇಪ,
ಪ್ರಾರಬ್ಧಕರ್ಮ ಎಲ್ಲರಿಗೂ ಅನಿವಾರ್ಯ,
ಅದಾದ ನಂತರವೇ ಖಚಿತ ಬಿಡುಗಡೆಯ ಕಾರ್ಯ,
ಜೀವಗ್ಯಾವಾಗಾಗುತ್ತದೋ ಬಿಂಬ ಸಾಕ್ಷಾತ್ಕಾರ,
ಅನುಸರಿಸಿ ಆಗುತ್ತದೆ ಮೋಕ್ಷದ ಸಾಕಾರ,
ಈ ಮಾತನ್ನೇ ಹೇಳಿದೆ -ಭವಿಷ್ಯತ್ ಪರ್ವದಲ್ಲಿ,
ಸ್ಪಷ್ಟಪಡಿಸಲ್ಪಟ್ಟಿದೆ ಬ್ರಹ್ಮಸೂತ್ರ ,ಛಾಂದೋಗ್ಯದಲ್ಲಿ.
[Contributed by
Shri Govind Magal]
No comments:
Post a Comment
ಗೋ-ಕುಲ Go-Kula