‘ತಸ್ಮಾದ್ ರೂಪಗುಣೋದಾರಾ ಜಾನಕೀ ರುಗ್ಮಿಣೀ ತಥಾ ।
‘ಸತ್ಯಭಾಮೇತ್ಯಾದಿರೂಪಾ ಶ್ರೀಃ ಸರ್ವಪರಮಾ ಮತಾ ॥೨.೩೯॥
ರೂಪ ಗುಣದಲ್ಲಿ
ಮಿಗಿಲಾದವರು ಸೀತೆ ,ರುಗ್ಮಿಣಿ-ಸತ್ಯಭಾಮೆ,
ಅವರೆಲ್ಲರಲ್ಲೂ
ಇದ್ದವಳು ಒಬ್ಬಳೇ ಆದ ಮಾತೆ ತಾನು ರಮೆ,
ಲಕ್ಷಣಗಳು, ರೂಪ, ಗುಣಗಳು ಲಕ್ಷ್ಮಿ
ಸೇರಿ ಕೆಳಗಿನವರಿಗೆಂದೇ ನಿರ್ಧಾರ,
ಮಾತೆ ಲಕ್ಷ್ಮಿಯೇ "ಸ್ತ್ರೀರತ್ನ"ಎಂದು ಭಾರತದಿಂದ
ಸಾಕಾರ.
‘ತತಃ ಪಶ್ಚಾದ್ ದ್ರೌಪದೀ ಚ ಸರ್ವಾಭ್ಯೋ ರೂಪತೋ ವರಾ ।
‘ಭೂಭಾರಕ್ಷಪಣೇ ಸಾಕ್ಷಾದಙ್ಗಂ ಭೀಮವದೀಶಿತುಃ ॥೨.೪೦॥
ಆನಂತರ ಗುಣ-ರೂಪದಲ್ಲಿ ಮಿಗಿಲಾಗಿರುವುದು ದ್ರೌಪದಿ,
ಭಗವಂತನ ಪ್ರೀತಿಪಾತ್ರನಾದ ಮಗ ಭೀಮಸೇನನ
ಮಡದಿ,
ಮಹಾಭಾರತದ ಭೂಭಾರಹರಣ ಕಾರ್ಯದಲ್ಲಿ,
ತಾನೂ ಭಗವತ್ಕಾರ್ಯದಲ್ಲಿದ್ದಳು ಮುಂಚೂಣಿಯಲ್ಲಿ,
ಹೀಗಾಗಿ ವ್ಯಾಸರು ಚಿತ್ರಿಸಿದ ಸ್ತ್ರೀ ರೂಪಗಳ ಸೌಂದರ್ಯ,
ಆ ಸ್ತ್ರೀ ಪಾತ್ರಗಳ ಗುಣೋಪಾಸನೆಯ ಮುಖ್ಯ ಆಂತರ್ಯ.
‘ಹನ್ತಾ ಚ ವೈರಹೇತುಶ್ಚ ಭೀಮಃ ಪಾಪಜನಸ್ಯ ತು ।
‘ದ್ರೌಪದೀ ವೈರಹೇತುಃ ಸಾ ತಸ್ಮಾದ್ ಭೀಮಾದನನ್ತರಾ ॥೨.೪೧॥
ಭೀಮನಾಗಿದ್ದ ಪಾಪಿ ಜನರ ವೈರತ್ವಕ್ಕೆ ಕಾರಣ,
ಹಾಗೇ ಪೂರೈಸಿದ ಕೂಡಾ ದುಷ್ಟರೆಲ್ಲರ ಮಾರಣ,
ಕಾರಣಳಾಗಿ ನಿಂತ ದ್ರೌಪದಿಯಿಂದಲೇ ದುಷ್ಟರ ವೈರ-ಶತ್ರುತ್ವ,
ಭಗವದಿಚ್ಛೆಯಂತೆ ಪತಿಯ ಕಾರ್ಯದಲ್ಲಿ ನೆರವಾದಳೆಂಬ ತತ್ವ.
[Contributed by Shri Govind
Magal]
No comments:
Post a Comment
ಗೋ-ಕುಲ Go-Kula