Thursday 14 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 13 - 15

ಯಸ್ಮಾದ್ ವ್ಯಾಸಾತ್ಮನಾ ತೇಷಾಂ ಭಾರತೇ ಯಶ ಊಚಿವಾನ್ ।
ಜ್ಞಾನದಶ್ಚಶುಕಾದೀನಾಂ ಬ್ರಹ್ಮರುದ್ರಾದಿರೂಪಿಣಾಮ್ ॥೨.೧೩॥

ಯಶಸ್ಸು ಅಂದರೆ ಅದು ಕೀರ್ತಿ,
ಕೊಡುವವ ದೇವನೇ ಎಂಬ ನೀತಿ,
ಬ್ರಹ್ಮ ರುದ್ರಾದಿಗಳು ; ಶುಕಾಚಾರ್ಯ,
ಜ್ಞಾನೋಪದೇಶ ಕೊಟ್ಟವ ಗೀತಾಚಾರ್ಯ.

ಬ್ರಹ್ಮಾsಧಿಕಶ್ಚ ದೇವೇಭ್ಯಃ ಶೇಷಾದ್ ರುದ್ರಾದಪೀರಿತಃ ।
ಪ್ರಿಯಶ್ಚ ವಿಷ್ಣೋಃ ಸರ್ವೇಭ್ಯ ಇತಿ ಭೀಮನಿದರ್ಶನಾತ್ ॥೨.೧೪॥

ದೇವತಾ ತಾರತಮ್ಯದಲ್ಲಿ ಬ್ರಹ್ಮದೇವ ಮಿಗಿಲು,
ಭೀಮಾವತಾರಿಗೆ ಕೃಷ್ಣಪ್ರೀತಿಯ ಸಿಂಹ ಪಾಲು,
ಮೂಲದಲ್ಲಿ ನಾರಾಯಣಗೆ ಅತಿಪ್ರಿಯ ಮುಖ್ಯಪ್ರಾಣ,
ಅವತಾರದಲ್ಲೂ ಕೃಷ್ಣಗೆ ಅತಿಪ್ರಿಯ ಅವ ಭೀಮಸೇನ.

ಭೂಭಾರಹಾರಿಣೋ ವಿಷ್ಣೋಃ ಪ್ರಧಾನಾಙ್ಗಮ್ ಹಿ ಮಾರುತಿಃ ।
ಮಾಗಧಾದಿವಧಾದೇವ ದುರ್ಯೋಧನವಧಾದಪಿ  ॥೨.೧೫॥

ನಡೆದಾಗ ಭೂಭಾರಹರಣದ ಕಾಯಕ,
ಕೃಷ್ಣಗೆ ಭೀಮನೇ ಪ್ರಧಾನ ಸಹಾಯಕ,
ಆದಾಗ ಜರಾಸಂಧ ದುರ್ಯೋಧನಾದಿಗಳ ಸಂಹಾರ,
ಪ್ರಾಣ ತತ್ವವಾದ ಭೀಮಸೇನನದೇ ಪ್ರಮುಖ ವ್ಯಾಪಾರ,
ಭಗವಂತಗೆ ಬೇಕೇ ಇಲ್ಲ ಯಾರದೂ ಸಹಾಯ,
ಭಕ್ತರಿಂದ ಮಾಡಿಸಿ ಕೀರ್ತಿ ಯಶ ಕೊಡುವ ಧ್ಯೇಯ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula