ದೇಶೇದೇಶೇ ತಥಾ ಗ್ರನ್ಥಾನ್ ದೃಷ್ಟ್ವಾ ಚೈವ ಪೃಥಗ್ವಿಧಾನ್ ।
ಯಥಾ ಸ ಭಗವಾನ್ ವ್ಯಾಸಃ ಸಾಕ್ಷಾನ್ನಾರಾಯಣಃ ಪ್ರಭುಃ ॥೨.೦೭॥
ಜಗಾದ ಭಾರತಾದ್ಯೇಷು ತಥಾ ವಕ್ಷ್ಯೇ ತದೀಕ್ಷಯಾ ।
ಸಙ್ಕ್ಷೇಪಾತ್ ಸರ್ವಶಾಸ್ತ್ರಾರ್ಥಂ ಭಾರತಾರ್ಥಾನುಸಾರತಃ ।
ನಿರ್ಣಯಃ ಸರ್ವಶಾಸ್ತ್ರಾಣಾಂ ಭಾರತಂ ಪರಿಕೀರ್ತಿತಮ್ ॥೨.೦೮॥
ನಿರ್ಣಯಃ ಸರ್ವಶಾಸ್ತ್ರಾಣಾಂ ಭಾರತಂ ಪರಿಕೀರ್ತಿತಮ್ ॥೨.೦೮॥
ಕೈಗೊಂಡು ಬೇರೆ
ಬೇರೆ ದೇಶಗಳ ಪ್ರವಾಸ,
ಸಂಗ್ರಹಿಸಿ
ಮಾಡಿಕೊಂಡ ವಿಷಯಗಳ ನ್ಯಾಸ,
ಮೇಲಿನದು ನಾವು
ಅನುಸರಿಸುವ ರೀತಿ,
ಆಚಾರ್ಯರು
ಮಾಡಿದ್ದು ಕೆಳಗೆ ಹೇಳಿದ ನೀತಿ,
ಅನುಸರಿಸಿ
ವೇದವ್ಯಾಸರನುಗ್ರಹ - ಬ್ರಹ್ಮಸೂತ್ರ,
ಹೇಳ ಹೊರಟಿದ್ದೇನೆ
-ಮಹಾಭಾರತದ ಶಾಸ್ತ್ರ,
ಇದು ಕೇವಲ
ಮಹಾಭಾರತದ್ದಷ್ಟೇ ಅಲ್ಲ,
ಅನುಸರಿಸಿ ಹೇಳುತ್ತಿರುವ
ಸರ್ವಶಾಸ್ತ್ರದ ಬೆಲ್ಲ.
ಸರ್ವಶಾಸ್ತ್ರಗಳ ನಿರ್ಣಯ ಅದೇ ಏಕೆ ಮಹಾಭಾರತ?
ಹೇಗೆಂದು ಆಚಾರ್ಯರ ವಿವರಣೆ ಹೊರಡುತ್ತದೆ ವಿಸ್ತೃತ,
‘ಭಾರತಂ ಸರ್ವವೇದಾಶ್ಚ ತುಲಾಮಾರೋಪಿತಾಃ ಪುರಾ ।
‘ದೇವೈರ್ಬ್ರಹ್ಮಾದಿಭಿಃ ಸರ್ವೈರ್ ಋಷಿಭಿಶ್ಚ ಸಮನ್ವಿತೈಃ ।
‘ವ್ಯಾಸಸ್ಯೈವಾsಜ್ಞಯಾ ತತ್ರ ತ್ವತ್ಯರಿಚ್ಯತ ಭಾರತಮ್ ॥೨.೦೯॥
ಭಗವಾನ್ ವೇದವ್ಯಾಸರ
ಆಜ್ಞಾನುಸಾರ,
ಬ್ರಹ್ಮಾದಿಗಳು
ಮಥಿಸಿದರು ಶಾಸ್ತ್ರಗಳ ಸಾರ,
ನಡೆಸಿದರು ಮಹಾಭಾರತ
-ವೇದಗಳ ಅಧ್ಯಯನ,
ಆಯಿತಲ್ಲಿ
ಮಹಾಭಾರತವೇ ಮಿಗಿಲೆಂಬ ತೀರ್ಮಾನ,
ತೂಕದಲ್ಲಿ
ಮಹಾಭಾರತವೇ ಆಯಿತಂತೆ ಭಾರ,
ಜ್ಞಾನತುಲನೆಯಲ್ಲಿ
ಮಹಾಭಾರತ ಶ್ರೇಷ್ಠವೆಂಬ ಸಾರ.
‘ಮಹತ್ತ್ವಾದ್
ಭಾರವತ್ತ್ವಾಚ್ಚ ಮಹಾಭಾರತಮುಚ್ಯತೇ ।
‘ನಿರುಕ್ತಮಸ್ಯ ಯೋ ವೇದ ಸರ್ವಪಾಪೈಃ ಪ್ರಮುಚ್ಯತೇ ॥೨.೧೦॥
ಮಹತ್ವದಿಂದಲೂ
ಆಗಿದೆ ಭಾರ,
ಭಗವತ್
ಪ್ರತಿಪಾದನೆಯ ಸಾರ,
ಪ್ರತಿ ಶ್ಲೋಕಕ್ಕೂ
ಕಡಿಮೆಯೆಂದರೆ ಹತ್ತರ್ಥ,
ಎಲ್ಲವೂ ಹೇಳುವುದು
ಮಥಿಸಿದ ಶಾಸ್ತ್ರಾರ್ಥ,
ಈ ಎಲ್ಲಾ
ಕಾರಣಗಳಿಂದ ಇದು ಮಹಾ-ಭಾರತ,
ನಿಜವಾಗಿ
ತಿಳಿದವನಾಗುತ್ತಾನೆ ಪಾಪಗಳಿಂದ ಮುಕ್ತ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula