Tuesday 19 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 33 - 38

ತಸ್ಮಾದ್ ಬಲಪ್ರವೃತ್ತಸ್ಯ ರಾಮಕೃಷ್ಣಾತ್ಮನೋ ಹರೇಃ ।
ಅನ್ತರಙ್ಗಂ ಹನೂಮಾಂಶ್ಚ ಭೀಮಸ್ತತ್ಕಾರ್ಯಸಾಧಕೌ ॥೨.೩೩॥

ಬ್ರಹ್ಮಾತ್ಮಕೋ ಯತೋ ವಾಯುಃ ಪದಂ ಬ್ರಾಹ್ಮಮಗಾತ್ ಪುರಾ ।
ವಾಯೋರನ್ಯಸ್ಯ ನ ಬ್ರಾಹ್ಮಂ ಪದಂ ತಸ್ಮಾತ್ ಸ ಏವ ಸಃ ॥೨.೩೪ll

ಬಲಕಾರ್ಯದಲ್ಲಿ ರಾಮ -ಕೃಷ್ಣರು ಪ್ರವೃತ್ತರಾದಾಗ,
ಹನುಮ -ಭೀಮರು ಅವರ ಪಾಲುದಾರರಾದರಾಗ,
ಅವರೆಂದೂ ಭಗವಂತಗೆ ಆತ್ಮೀಯ ಮತ್ತು ಅತಿ ಪ್ರಿಯ,
ಸದಾ ಆಜ್ಞಾನುಸಾರಿಯಾಗಿ ಭಗವತ್ಕಾರ್ಯದಿ ಸಕ್ರಿಯ.

ವೇದ ಭಾರತ ಪುರಾಣ ಪಂಚರಾತ್ರದ ಹೂರಣ,
ಕಾರಣವಾಗಬೇಕು ತಿಳಿಯಲು ಬ್ರಹ್ಮನ ಗುಣ,
ನಂತರವೇ ತೀರ್ಮಾನವಾಗುತ್ತದೆ ವಾಯುವಿನ ಸ್ಥಾನ,
ಏಕೆಂದರೆ ಬ್ರಹ್ಮ ಮುಖ್ಯಪ್ರಾಣರಿಬ್ಬರದೂ ಒಂದೇ ಗಣ,
ಹಿಂದಿನ ಕಲ್ಪದಲ್ಲಿ ವಾಯುವಾಗಿದ್ದ ದೇವತೆ,
ಮುಂದಿನ ಕಲ್ಪದಲ್ಲಿ ಬ್ರಹ್ಮನಾಗುವ ಅರ್ಹತೆ,
ಬ್ರಹ್ಮ ವಾಯುಗಳಿಬ್ಬರೂ ಜ್ಞಾನ ಬಲದಲ್ಲಿ ಸಮ,
ಸಾರಿ ಸಾರಿ ಹೇಳಿದೆ ಇದನ್ನೇ ತಾರತಮ್ಯದ ನೇಮ.

ಯತ್ರ ರೂಪಂ ತತ್ರಗುಣಾ ಭಕ್ತ್ಯಾದ್ಯಾಃ ಸ್ತ್ರೀಷು ನಿತ್ಯಶಃ ।
ರೂಪಂ ಹಿ ಸ್ಥೂಲದೃಷ್ಟೀನಾಂ ದೃಶ್ಯಂ ವ್ಯಕ್ತಂ ತತೋ ಹಿ ತತ್ ॥೨.೩೫॥

ಎಲ್ಲೆಲ್ಲಿ ಹೇಳಿದೆಯೋ ಸ್ತ್ರೀ ಪಾತ್ರಗಳ ಸೌಂದರ್ಯ,
ಅದು ವ್ಯಾಸರು ಮಾಡಿದ ಗುಣಗಾನದ ಆಂತರ್ಯ,
ಗುಣ ಹೇಳಲಿಕ್ಕೆಂದೇ ವ್ಯಾಸರು ಮಾಡಿದ ವರ್ಣನೆ,
ಅದು ಭಗವತ್ಕಾರ್ಯ ಸಾಧಕ ಗುಣಗಳ ಬಣ್ಣನೆ.

ಪ್ರಾಯೋ ವೇತ್ತುಂ ನ ಶಕ್ಯನ್ತೇ ಭಕ್ತ್ಯಾದ್ಯಾಃ ಸ್ತ್ರೀಷು ಯತ್ ತತಃ ।
ಯಾಸಾಂ ರೂಪಂ ಗುಣಾಸ್ತಾಸಾಂ ಭಕ್ತ್ಯಾದ್ಯಾ ಇತಿ ನಿಶ್ಚಯಃ ॥೨.೩೬॥

ಸ್ತ್ರೀಯರ ಭಕ್ತ್ಯಾದಿ ಗುಣಗಳನ್ನು ಗ್ರಹಿಸುವುದು ಕಷ್ಟ,
ಅಮಿತ ರೂಪವಿರುವಲ್ಲಿ ಅಧಿಕ ಗುಣಗಳು ಸ್ಪಷ್ಟ.

ತಚ್ಚ ನೈಸರ್ಗಿಕಂ ರೂಪಂ ದ್ವಾತ್ರಿಂಶಲ್ಲಕ್ಷಣೈರ್ಯುತಮ್ ।
ನಾಲಕ್ಷಣಂ ವಪುರ್ಮಾತ್ರಂ ಗುಣಹೇತುಃ ಕಥಞ್ಚನ ॥೨.೩೭॥

ಇರಬೇಕು ಮೂವತ್ತೆರಡು ಸಲ್ಲಕ್ಷಣಭರಿತ ಸಹಜ ರೂಪ,
ಬರಿಯ ದೇಹ ಸೌಂದರ್ಯ ಆಗಲ್ಲ ಗುಣಗಳಿಗೆ ಮಾಪ.

ಆಸುರೀಣಾಂ ವರಾದೇಸ್ತು ವಪುರ್ಮಾತ್ರಂ ಭವಿಷ್ಯತಿ ।
ನ ಲಕ್ಷಣಾನ್ಯತಸ್ತಾಸಾಂ ನೈವ ಭಕ್ತಿಃ ಕಥಞ್ಚನ ॥೨.೩೮॥

ಅಸುರ ಸ್ತ್ರೀಯರಿಗೂ ವರ ಇತ್ಯಾದಿಗಳಿಂದ ರೂಪ ಇರುವುದುಂಟು,

ಸಲ್ಲಕ್ಷಣ ಭಕ್ತ್ಯಾದಿ ಗುಣಗಳು ಅಲ್ಲಿರುವುದಿಲ್ಲ ಎಂಬುದೇ ಗುಟ್ಟು.
[Contributed by Shri Govind Magal]

No comments:

Post a Comment

ಗೋ-ಕುಲ Go-Kula