Friday, 15 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 16 - 19

ಯೋಯ ಏವ ಬಲಜ್ಯೇಷ್ಠಃ ಕ್ಷತ್ರಿಯೇಷು ಸ ಉತ್ತಮಃ ।
ಅಙ್ಗಂ ಚೇದ್ ವಿಷ್ಣುಕಾರ್ಯೇಷು ತದ್ಬಕ್ತ್ಯೈವ ನಚಾನ್ಯಥಾ ॥೨.೧೬॥

ಭಗವದ್ ಭಕ್ತನಾದ ಬಲಶಾಲಿ ಕ್ಷತ್ರಿಯ,
ದೇವಕಾರ್ಯದಲ್ಲಿ ಅಂಗಭೂತನಾಗಿ ಸಕ್ರಿಯ,
ಸಾಕ್ಷಿಯಾಗಿ ನಿಲ್ಲುತ್ತಾನೆ ಭಾರತದ ಬಲಭೀಮ,
ತದ್ವಿರುದ್ಧವಾದ ವಿಷ್ಣುದ್ವೇಷ ಜರಾಸಂಧನ ನೇಮ .

ಬಲಂ ನೈಸರ್ಗಿಕಂ ತಚ್ಚೇದ್ ವರಾಸ್ತ್ರಾದೇಸ್ತದನ್ಯಥಾ ।
ಅನ್ಯಾವೇಶನಿಮಿತ್ತಂ ಚೇದ್ ಬಲಮನ್ಯಾತ್ಮಕಂ ಹಿ ತತ್ ॥೨.೧೭॥

ಶ್ರೇಷ್ಠತೆಗೆ ನಿರ್ಣಾಯಕವಾಗುವುದಿಲ್ಲ ಕೇವಲ ಬಲ,
ನೈಸರ್ಗಿಕವಾಗಿ ಸ್ವಭಾವಜನ್ಯವಾಗಿರಬೇಕದರ ಮೂಲ,
ಶ್ರೇಷ್ಠತೆ ಸಹಜವಾಗಿ ಹಾಸುಹೊಕ್ಕಾಗಿರಬೇಕಾದ ಗುಣ,
ಹೊರಗಿಂದ ಬಂದ ತಾತ್ಕಾಲಿಕ ಬಲವಾಗಲ್ಲ ಯೋಗ್ಯತಾ ಕಾರಣ.

ದೇವೇಷು ಬಲಿನಾಮೇವ ಭಕ್ತಿಜ್ಞಾನೇ ನಚಾನ್ಯಥಾ ।
ಸ ಏವ ಚ ಪ್ರಿಯೋ ವಿಷ್ಣೋರ್ನಾನ್ಯಥಾ ತು ಕಥಞ್ಚನ ॥೨.೧೮॥

ತಸ್ಮಾದ್ ಯೋಯೋ ಬಲಜ್ಯೇಷ್ಠಃ  ಸ ಗುಣಜ್ಯೇಷ್ಠ ಏವ ಚ ।
ಬಲಂ ಹಿ ಕ್ಷತ್ರಿಯೇ ವ್ಯಕ್ತಂ ಜ್ಞಾಯತೇ ಸ್ಥೂಲದೃಷ್ಟಿಭಿಃ ॥೨.೧೯॥

ದೇವತೆಗಳಲ್ಲಿ ಬಲ ಜ್ಞಾನಗಳು ಸ್ವಭಾವಜನ್ಯ,
ಹಾಗೆಂದೇ ಆಗುತ್ತಾರವರು ವಿಷ್ಣುಪ್ರೀತಿಗೆ ಮಾನ್ಯ,
ಲೋಕದೊಳಿರುವ ಬಲಿಷ್ಠರೆಲ್ಲಾ ಜ್ಞಾನಿಗಳಲ್ಲ,
ದೇಹಬಲವಿರುವ ಜ್ಞಾನಮಾಂದ್ಯರೇ ಎಲ್ಲಾ,
ಅದು ಹಾಗಿರುವುದಿಲ್ಲ ದೇವತಾಗಣದಲ್ಲಿ,
ಬಲ ಜ್ಞಾನಗಳು ಅವರ ಗುಣವಾಗಿರುತ್ತದಲ್ಲಿ,
ಗುಣ ಸ್ವಭಾವ ಭಗವಂತ ಬಳಸುವ ಮಾಪನ,
ಸಹಜ ಬಲಜ್ಞಾನಗಳ ಪ್ರೀತಿಸುವ ಜನಾರ್ದನ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula