‘ಮಾನುಷೇಷ್ವಧಮಾಃ ಕಿಞ್ಚಿದ್
ದ್ವೇಷಯುಕ್ತಾಃ ಸದಾ ಹರೌ ।
‘ದುಃಖನಿಷ್ಠಾಸ್ತತಸ್ತೇsಪಿ ನಿತ್ಯಮೇವ ನ ಸಂಶಯಃ ॥೧.೧೧೮॥
ಮನುಷ್ಯಾಧಮ ಎಂದೂ ಭಗವದ್ವೇಷದಲ್ಲಿ ಮುಂದು,
ಆ ಕಾರಣದಿಂದಲೇ ಪರಮದುಃಖಿಯವ ಎಂದೆಂದೂ,
ಇದರಲ್ಲಿ ಎಂದೂ ಯಾವುದೇ ಸಂಶಯವಿಲ್ಲ,
ತಾರತಮ್ಯೋಕ್ತ ಸ್ವಭಾವದಂತೇ ಫಲವೆಲ್ಲಾ!
‘ಮಧ್ಯಮಾ ಮಿಶ್ರಭೂತತ್ವಾನ್ನಿತ್ಯಂ
ಮಿಶ್ರಫಲಾಃ ಸ್ಮೃತಾಃ ।
‘ಕಿಞ್ಚಿದ್ ಭಕ್ತಿಯುತಾ
ನಿತ್ಯಮುತ್ತಮಾಸ್ತೇನ ಮೋಕ್ಷಿಣಃ ॥೧.೧೧೯॥
ಮಧ್ಯಮ ಮಾನವರಿಗೆ ಎಂದೂ ತಪ್ಪದ ದ್ವಂದ್ವ,
ಒಮ್ಮೆ ಭಕ್ತಿಯಾದರೆ ಮತ್ತೊಮ್ಮೆ ದ್ವೇಷದ ಭಾವ,
ಅದಕ್ಕನುಗುಣವಾಗಿ ಅವರಿಗೆ ಸುಖದುಃಖದ ಮಿಶ್ರಣ,
ಉತ್ತಮ ಭಕ್ತರಿಗೆ ಸಹಜವಾಗೇ ಮುಕುತಿಯ ತೋರಣ.
‘ಬ್ರಹ್ಮಣಃ
ಪರಮಾ ಭಕ್ತಿಃ ಸರ್ವೇಭ್ಯಃ ಪರಮಸ್ತತಃ’ ।
ಇತ್ಯಾದೀನಿ ಚ ವಾಕ್ಯಾನಿ ಪುರಾಣೇಷು ಪೃಥಕ್ ಪೃಥಕ್ ॥೧.೧೨೦॥
ಬ್ರಹ್ಮದೇವನಿಗೆ ಭಗವದ್ ಭಕ್ತಿ ಹೆಚ್ಚು,
ಉತ್ಕೃಷ್ಟನವ ತಂದೆಗೆ ಅಚ್ಚು ಮೆಚ್ಚು,
ಬೇರೆ ಬೇರೆ ಪುರಾಣಗಳಲ್ಲುಂಟು ಇದರ ಉಲ್ಲೇಖ,
ಗುಣೋಪಾಸನೆಯ ಭಕ್ತರಲ್ಲಿ ಅಗ್ರಗಣ್ಯ ಚತುರ್ಮುಖ.[Contributed by Shri Govind Magal]
No comments:
Post a Comment
ಗೋ-ಕುಲ Go-Kula