Tuesday 5 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 109 - 113

ಅನಾದಿದ್ವೇಷಿಣೋ ದೈತ್ಯಾ ವಿಷ್ಣೌ ದ್ವೇಷೋ ವಿವರ್ಧಿತಃ ।
ತಮಸ್ಯನ್ಧೇ ಪಾತಯತಿ ದೈತ್ಯಾನನ್ತೇ ವಿನಿಶ್ಚಯಾತ್ ॥೧.೧೦೯॥

ದೈತ್ಯರ ಅನಾದಿ ಕಾಲದ ಭಗವದ್ ದ್ವೇಷ,
ಕಾರಣವಾಗುತ್ತದವರಿಗೆ ಅಂಧಂತಮಸ್ಸಿನ ವಾಸ .

ಪೂರ್ಣದುಃಖಾತ್ಮಕೋ ದ್ವೇಷಃ ಸೋsನನ್ತೋ ಹ್ಯವತಿಷ್ಠತೇ ।
ಪತಿತಾನಾಂ ತಮಸ್ಯನ್ಧೇ ನಿಃಶೇಷಸುಖವರ್ಜಿತೇ ॥೧.೧೧೦ll

ದ್ವೇಷ ಎನ್ನುವುದು ಸಂಪೂರ್ಣ ದುಃಖದ ಸಂಕೇತ,
ಅಂಧಂತಮಸ್ಸಿನಲ್ಲಿ ಬಿದ್ದವರಿಗೆ ದುಃಖವದು ಅನಂತ.


ಜೀವಭೇದೋ ನಿರ್ಗುಣತ್ವಮಪೂರ್ಣಗುಣತಾ ತಥಾ ।
ಸಾಮ್ಯಾಧಿಕ್ಯೇ ತದನ್ಯೇಷಾಂ ಭೇದಸ್ತದ್ಗತ ಏವ ಚ ॥೧.೧೧೧॥

ಪ್ರಾದುರ್ಭಾವವಿಪರ್ಯಾಸಸ್ತದ್ಭಕ್ತದ್ವೇಷ ಏವ ಚ ।
ತತ್ಪ್ರಮಾಣಸ್ಯ ನಿನ್ದಾ ಚ ದ್ವೇಷಾ ಏತೇsಖಿಲಾ ಮತಾಃ ॥೧.೧೧೨॥

ಕಣ್ಣಿಗೆ ಕಾಣುವುದಿಲ್ಲ ಭಗವಂತನ ವಿಚಿತ್ರ ವೇಷ,
ಏನದು ಕೆಲವರು ಅವನಲ್ಲಿ ಮಾಡುವ ದ್ವೇಷ?

ಜೀವ ಪರಮಾತ್ಮರಲ್ಲಿ ಹೇಳುವ ಅಭೇದ,
ಅವನಲ್ಲಿ ಗುಣವಿಲ್ಲ ಎನ್ನುವ ಹೀನ ವಾದ,
ದೇವರ ಗುಣದಲ್ಲಿ ಹೇಳುವ ಅಪೂರ್ಣತೆ,
ಸಮ-ಮಿಗಿಲಿಲ್ಲದವಗೆ ಅದನ್ನ ಹೇಳುವ ವಕ್ರತೆ,
ದೇವರಿಗೂ ಅವನ ದೇಹಕ್ಕೂ ಹೇಳುವ ಭೇದ,
ಅವನ ಅವತಾರಗಳ ತಪ್ಪಾಗಿ ಗ್ರಹಿಸಿದ ವಾದ,
ಭಗವದ್ ಭಕ್ತರಲ್ಲಿ ಮಾಡುವ ದ್ವೇಷ,
ಶಾಸ್ತ್ರಗಳನ್ನೇ ಒಪ್ಪದ ಅಸುರಾವೇಶ.

ಏತೈರ್ವಿಹೀನಾ ಯಾ ಭಕ್ತಿಃ ಸಾ ಭಕ್ತಿರಿತಿ ನಿಶ್ಚಿತಾ ।
ಅನಾದಿಭಕ್ತಿರ್ದೇವಾನಾಂ ಕ್ರಮಾದ್ ವೃದ್ಧಿಂ ಗತೈವ ಸಾ ॥೧.೧೧೩॥

ಮೇಲಿನ ಅಂಶಗಳಿರದ ಭಕ್ತಿಯೇ ನೈಜ ಭಕ್ತಿ,
ದೇವತೆಗಳಿಗದು ಅನಾದಿ ಕಾಲದಿಂದ ಪ್ರಾಪ್ತಿ,
ಕ್ರಮೇಣ ಅದಾಗುತ್ತದೆ ವೃದ್ಧಿ,

ಮೋಕ್ಷಕಾರಕ ಪರಮ ಸಿದ್ಧಿ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula