Thursday 14 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 11 - 12

‘ನಿರ್ಣಯಃ ಸರ್ವಶಾಸ್ತ್ರಾಣಾಂ ಸದೃಷ್ಟಾನ್ತೋ ಹಿ ಭಾರತೇ ।
‘ಕೃತೋ ವಿಷ್ಣುವಶತ್ವಂ ಹಿ ಬ್ರಹ್ಮಾದೀನಾಂ ಪ್ರಕಾಶಿತಮ್ ॥೨.೧೧॥

ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆ ತತ್ವದ ಸಿದ್ಧಾಂತ,
ಮಹಾಭಾರತವಾಗುತ್ತದೆ ಅದರ ದೃಷ್ಟಾಂತ,
ಅನುಗುಣವಾಗಿ ಮಹಾಭಾರತ ಕಥಾಸಾರ,
ಕೊಡಲ್ಪಟ್ಟಿದೆ ಇತರ ಶಾಸ್ತ್ರಗಳ ತತ್ವದ ಧಾರ,
ಮಹಾಭಾರತದಲ್ಲಿದೆ ಜೀವನಗಾಥೆಯ ಚಿತ್ರಣ,
ಅದರಲ್ಲಿದೆ ಶಾಸ್ತ್ರಸಮ್ಮತವಾದ ತತ್ವ ಹೂರಣ,
ಬ್ರಹ್ಮಾದಿ ದೇವತೆಗಳೆಲ್ಲಾ ನಾರಾಯಣನ ವಶ , ಅದನ್ನೇ ಉಣಿಸುತ್ತದೆ ಮಹಾಭಾರತದ ಪೀಯೂಷ.




‘ಯತಃ ಕೃಷ್ಣವಶೇ ಸರ್ವೇ ಭೀಮಾದ್ಯಾಃ ಸಮ್ಯಗೀರಿತಾಃ ।
‘ಸರ್ವೇಷಾಂ ಜ್ಞಾನದೋ ವಿಷ್ಣುರ್ಯಶೋದಾತೇತಿ ಚೋದಿತಮ್ ॥೨.೧೨॥

ಅವತಾರದಲ್ಲಿದ್ದ ದೇವತೆಗಳೂ ಅವತಾರಿ ಕೃಷ್ಣನ ಅಧೀನ,
ವಾಯುಯಾದಿಯಾಗಿ ಎಲ್ಲ ದೇವತೆಗಳೂ ಶ್ರೀಹರಿ ಸ್ವಾಧೀನ,
ಎತ್ತಿ ತೋರುತ್ತದೆ ಇದನ್ನು ಮಹಾಭಾರತದ ಕಥೆಯ ರೀತಿ,
ಎಲ್ಲೂ ಬದಲಾಗದ  ದೇವತಾ ತಾರತಮ್ಯದ ದಿವ್ಯ ನೀತಿ,
ಅವತಾರವಿರಲಿ ಮೂಲವಿರಲಿ ಅವನೇ ಎಲ್ಲರ ಅಂತರ್ಯಾಮಿ,
ಜ್ಞಾನ ಯಶದ ಧಣಿಯಾದ-ದಾತನಾದ ಸರ್ವ ಸ್ವತಂತ್ರನೇಮಿ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula