Monday 18 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 23 - 32

ಕೃಷ್ಣರಾಮಾದಿರೂಪೇಷು ಬಲಕಾರ್ಯೋ ಜನಾರ್ದನಃ ।
ದತ್ತವ್ಯಾಸಾದಿರೂಪೇಷು ಜ್ಞಾನಕಾರ್ಯಸ್ತಥಾ ಪ್ರಭುಃ  ॥೨.೨೩॥

ಪರಮಾತ್ಮನ ಅವತಾರಗಳಲ್ಲಿ ಮುಖ್ಯವಾಗಿ ಎರಡು ರೀತಿ,
ಒಂದು ದುಷ್ಟನಿಗ್ರಹಕೆ ಬಲಪ್ರಧಾನ ಇನ್ನೊಂದು ಜ್ಞಾನಪ್ರದಾನಕೆ ಖ್ಯಾತಿ,
ದುಷ್ಟನಿಗ್ರಹಕೆ ಬಲಪ್ರಧಾನ ರಾಮಕೃಷ್ಣಾದಿ ರೂಪಗಳು,
ಜ್ಞಾನಕಾರ್ಯಕೆ ಜ್ಞಾನಪ್ರಧಾನ ದತ್ತ ವ್ಯಾಸಾದಿ ರೂಪಗಳು.

ಮತ್ಸ್ಯಕೂರ್ಮವರಾಹಾಶ್ಚ ಸಿಂಹವಾಮನಭಾರ್ಗವಾಃ ।
ರಾಘವಃ ಕೃಷ್ಣಬುದ್ಧೌ ಚ ಕೃಷ್ಣದ್ವೈಪಾಯನಸ್ತಥಾ ॥೨.೨೪॥
ಕಪಿಲೋ ದತ್ತವೃಷಭೌ ಶಿಂಶುಮಾರೋ ರುಚೇಃ ಸುತಃ  । 
ನಾರಾಯಣೋ ಹರಿಃ ಕೃಷ್ಣಸ್ತಾಪಸೋ ಮನುರೇವ  ಚ ॥೨.೨೫॥

ಮಹಿದಾಸಸ್ತಥಾ ಹಂಸಃ ಸ್ತ್ರೀರೋಪೋ ಹಯಶೀರ್ಷವಾನ್ ।
ತಥೈವ ಬಡಬಾವಕ್ತ್ರಃ ಕಲ್ಕೀ ಧನ್ವನ್ತರಿಃ ಪ್ರಭುಃ ॥೨.೨೬॥

ಇತ್ಯಾದ್ಯಾಃ ಕೇವಲೋ ವಿಷ್ಣುರ್ನೈಷಾಂ ಭೇದಃ ಕಥಞ್ಚನ ।
ನ ವಿಶೇಷೋ ಗುಣೈಃ ಸರ್ವೇರ್ಬಲಜ್ಞಾನಾದಿಭಿಃ ಕ್ವಚಿತ್ ॥೨.೨೭॥

ಇರಬೇಕು ಭಗವಂತನ ಅವತಾರಗಳಲ್ಲಿ ಸ್ಪಷ್ಟ ಜ್ಞಾನ,
ಮಾಡಿದ್ದಾರೆ ಆಚಾರ್ಯ ಕೆಲ ಅವತಾರಗಳ ಪಟ್ಟಿ ಪ್ರದಾನ.
ಮತ್ಸ್ಯ ,ಕೂರ್ಮ ,ವರಾಹ ,ನರಸಿಂಹ ,ವಾಮನ,
ಪರಶುರಾಮ ,ರಾಮ ,ಕೃಷ್ಣ ,ವ್ಯಾಸ ,ಕಪಿಲ-ನಾಮ,
ಅತ್ರಿ ಅನಸೂಯರಲ್ಲಿ ಹುಟ್ಟಿದ ದತ್ತನ ಅವತಾರ,
ಮೇರುದೇವಿ ನಾಭಿಯಲ್ಲಿ ಹುಟ್ಟಿದ ಋಷಭಾವತಾರ,
ಶಿಂಶುಮಾರ ,ರುಚಿ ಪ್ರಜಾಪತಿಯಲ್ಲಿ ಯಜ್ಞಾವತಾರ,
ಯಮಧರ್ಮ ಮತ್ತು ಮೂರ್ತಿ -ಇವರಲ್ಲಿ,
ಜನ್ಮತಾಳಿದ-ನಾರಾಯಣ-ಹರಿ-ಕೃಷ್ಣ ರೂಪದಲ್ಲಿ,
ತಾಪಸ ವಾಸುದೇವ-ಗಜೇಂದ್ರನ ಕಾಯ್ದ ದೇವ,
ಮಹಿದಾಸ ,ಹಂಸ ,ಹಯಗ್ರೀವ ದೇವನ ಸ್ತ್ರೀ ರೂಪ,
ಬಡಬಾವಕ್ತ್ರ ಎಂಬ ಸಮುದ್ರಮಧ್ಯದ ಬೆಂಕಿ ಅವಲಂಬಿತ ರೂಪ,
ಕಲ್ಕೀ -ಧನ್ವಂತರೀ ಇವೆಲ್ಲಾ ವಿಷ್ಣು ಅವತಾರ ರೂಪ,
ನಾರಾಯಣಗೂ ಈ ಅವತಾರಗಳಿಗೂ ಭೇದವಿಲ್ಲ ಎಂಬುದವನ ಪ್ರತಾಪ.

ವೇದವ್ಯಾಸರಿಗಿಲ್ಲ ಹೆಚ್ಚು ಶಕ್ತಿ,
ಕೃಷ್ಣನದು ರಾಜಕಾರಣದ ಯುಕ್ತಿ,
ರಾಮ ಮರ್ಯಾದಾಪುರುಷೋತ್ತಮ,
ದತ್ತ -ಕಪಿಲರದು ಬರೀ ಉಪದೇಶದ ನೇಮ,
ಮೇಲಿನಂತೆ ತಿಳಿದರದು  ಭ್ರಮೆಯ ಪರಾಕಾಷ್ಠೆ,
ಆವಶ್ಯಕ ಅವನವತಾರಗಳೆಲ್ಲ ಸಮ ಎಂಬ ನಿಷ್ಠೆ.

ಶ್ರೀರ್ಬ್ರಹ್ಮರುದ್ರೌ ಶೇಷಶ್ಚವೀನ್ದ್ರೇನ್ದ್ರೌ ಕಾಮ ಏವ ಚ ।
ಕಾಮಪುತ್ರೋsನಿರುದ್ಧಶ್ಚಸೂರ್ಯಶ್ಚನ್ದ್ರೋ ಬೃಹಸ್ಮತಿಃ ॥೨.೨೮॥

ಧರ್ಮ ಏಷಾಂ ತಥಾ ಭಾರ್ಯಾ ದಕ್ಷಾದ್ಯಾ ಮನವಸ್ತಥಾ ।
ಮನುಪುತ್ರಾಶ್ಚ ಋಷಯೋ ನಾರದಃ ಪರ್ವತಸ್ತಥಾ ॥೨.೨೯॥

ಕಶ್ಯಪಃ ಸನಕಾದ್ಯಾಶ್ಚ ಬ್ರಹ್ಮಾದ್ಯಾಶ್ಚೈವ ದೇವತಾಃ ।
ಭರತಃ ಕಾರ್ತವೀರ್ಯಶ್ಚ ವೈನ್ಯಾದ್ಯಾಶ್ಚಕ್ರವರ್ತಿನಃ ॥೨.೩೦॥

ಗಯಶ್ಚ ಲಕ್ಷ್ಮಣಾದ್ಯಾಶ್ಚ ತ್ರಯೋ ರೋಹಿಣಿನನ್ದನಃ ।
ಪ್ರದ್ಯುಮ್ನೋ ರೌಗ್ಮಿಣೇಯಶ್ಚ ತತ್ಪುತ್ರಶ್ಚಾನಿರುದ್ಧಕಃ ॥೨.೩೧॥

ನರಃ ಫಲ್ಗುನ ಇತ್ಯಾದ್ಯಾ ವಿಶೇಷಾವೇಶಿನೋ ಹರೇಃ ।
ವಾಲಿಸಾಮ್ಬಾದಯವಶ್ಚೈವ ಕಿಞ್ಚಿದಾವೇಶಿನೋ ಹರೇ’  ॥೨.೩೨॥

ಲಕ್ಷ್ಮಿಯ ನಂತರ ಬ್ರಹ್ಮ ,ರುದ್ರ ,ಶೇಷ ,ಗರುಡ ,ಇಂದ್ರ;
ಕಾಮ ,ಕಾಮಪುತ್ರ ಅನಿರುದ್ಧ ,ಸೂರ್ಯ ,ಚಂದ್ರ;
ಬೃಹಸ್ಪತಿ ,ಯಮಧರ್ಮ ಅವನ ಪತ್ನಿಯರುಗಳು,
ದಕ್ಷಾದಿಪ್ರಜಾಪತಿಗಳು ಸ್ವಾಯಂಭುವಾದಿಮನುಗಳು;
ಪ್ರಿಯವ್ರತ ,ಉತ್ಥಾನಪಾದಾದಿ ಮನುವಿನ ಮಕ್ಕಳು;
ವಸಿಷ್ಠ ,ವಿಶ್ವಾಮಿತ್ರರೇ ಮೊದಲಾದ ಋಷಿಗಳು;
ನಾರದ ,ಪರ್ವತ ಮೊದಲಾದ ದೇವತೆಗಳು;
ಕಾಶ್ಯಪ ,ಸನಕಾದಿ ಗೃಹಸ್ತ ಮತ್ತು ಸನ್ಯಾಸಿಗಳು;
ಅಗ್ನಿ ಮೊದಲಾದ ಅನೇಕ ದೇವತೆಗಳು;
ಭರತ ,ಕೃತವೀರ್ಯಪುತ್ರ ಅರ್ಜುನ ಪೃಥಾದಿ ಚಕ್ರವರ್ತಿಗಳು;
ಲಕ್ಷ್ಮಣ ,ಭರತ ,ಶತ್ರುಘ್ನ ಮತ್ತು ಹಲಾಯುಧ;
ರುಗ್ಮಿಣಿಪುತ್ರ ಪ್ರದ್ಯುಮ್ನ ,ಪ್ರದ್ಯುಮ್ನಪುತ್ರ ಅನಿರುದ್ಧ;
ಯಮಧರ್ಮನ ನಾಕನೇ ಮಗ ನರ ಅರ್ಜುನ;
ಇನ್ನು ವಾಲಿ ಸಾಂಬಾ ಮೊದಲಾದವರಲ್ಲೂ ಇತ್ತು ಭಗವದಾವೇಶ;
ಆ ಕಾರಣದಿಂದಲೇ ಸಿಕ್ಕಿತವರಿಗೆ ದೊಡ್ಡ ಕಾರ್ಯದ ಸದವಕಾಶ;
ಇವರೆಲ್ಲರಿಗೂ ವಿಶೇಷ ಹರಿ ಆವೇಶದ ಸ್ಥಾನಮಾನ;
ಪೂಜ್ಯರಾಗುತ್ತಾರೆ ಇವರೆಲ್ಲಾ ಭಗವದಾವೇಶದಿಂದ;

ಸ್ಪಷ್ಟ-ಮಧ್ವರು ತಿಳಿಸಿದ ದೇವತಾ ತಾರತಮ್ಯದಿಂದ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula