‘ಜ್ಞಾನಾದಯೋ ಗುಣಾ ಯಸ್ಮಾಜ್ಜ್ಞಾಯನ್ತೇ ಸೂಕ್ಷ್ಮದೃಷ್ಟಿಭಿಃ ।
‘ತಸ್ಮಾದ್ ಯತ್ರ ಬಲಂ ತತ್ರ ವಿಜ್ಞಾತವ್ಯಾ ಗುಣಾಃ ಪರೇ ॥೨.೨೦॥
ಜ್ಞಾನ ಭಗವದ್ ಭಕ್ತಿ ಸೂಕ್ಷ್ಮದೃಷ್ಟಿಗಷ್ಟೇ ಗೋಚರ,
ಸ್ಥೂಲ ದೃಷ್ಟಿಯ ನೋಡುಗರಿಗದು -ಅಗೋಚರ,
ಎಲ್ಲಿರುತ್ತದೋ ನೈಸರ್ಗಿಕವಾದ ಅಧಿಕ ಶಕ್ತಿ,
ಅಲ್ಲಿದ್ದೇ ಇರುತ್ತದೆ ಜ್ಞಾನ ಎಂಬುದು ಸ್ಪಷ್ಟ ಉಕ್ತಿ.
ಉದಾಹರಣೆಗೆ ಮಹಾಭಾರತದ ಭೀಮಸೇನ,
ಅನೇಕರಂತೆ ಅವ ಭಾರೀ ಬಲಶಾಲಿ-ಜ್ಞಾನ ಹೀನ,
ಅರ್ಜುನಗಷ್ಟೇ ಏಕೆ ಉಪದೇಶ ಜ್ಯೇಷ್ಠ ಭೀಮಗೇಕಿಲ್ಲ?
ಕಾಯಿಲೆಯಿದ್ದವರಿಗಷ್ಟೇ ಮದ್ದು-ಜ್ಞಾನಿ ಭೀಮಗದು ಬೇಕಿಲ್ಲ,
ಅಲ್ಲೂ ದೇವತಾವತಾರಿ ಅರ್ಜುನ ನಿಮಿತ್ತ ಮಾತ್ರ,
ಅವನೆದುರು ಹೇಳಲ್ಪಟ್ಟದ್ದು ಇಡೀ ಜೀವರಾಶಿಗೆ ಗೀತಾಸೂತ್ರ.
‘ದೇವೇಷ್ವೇವ ನಚಾನ್ಯೇಷು ವಾಸುದೇವಪ್ರತೀಪತಃ ।
‘ಕ್ಷತ್ರಾದನ್ಯೇಷ್ವಪಿ ಬಲಂ ಪ್ರಮಾಣಂ ಯತ್ರ ಕೇಶವಃ ॥೨.೨೧॥
‘ಪ್ರವೃತ್ತೋ ದುಷ್ಟನಿಧನೇ ಜ್ಞಾನಕಾರ್ಯೇ ತದೇವ ಚ ।
‘ಅನ್ಯತ್ರ ಬ್ರಾಹ್ಮಣಾನಾಂ ತು ಪ್ರಮಾಣಂ ಜ್ಞಾನಮೇವ ಹಿ ।
ಕ್ಷತ್ರಿಯಾಣಾಂ ಬಲಂ ಚೈವ ಸರ್ವೇಷಾಂ ವಿಷ್ಣುಕಾರ್ಯತಾ ॥೨.೨೨॥
ಕ್ಷತ್ರಿಯಾಣಾಂ ಬಲಂ ಚೈವ ಸರ್ವೇಷಾಂ ವಿಷ್ಣುಕಾರ್ಯತಾ ॥೨.೨೨॥
ಎಲ್ಲೆಲ್ಲಿ ಬಲವಿದೆಯೋ ಅಲ್ಲಿ ಜ್ಞಾನಭಕ್ತಿಯಿದೆ ಎಂಬುದು ನಿಸ್ಸಂಶಯ,
ಈ ಮಾನದಂಡ ದೇವತೆಗಳು-ದೇವತಾವತಾರಿ ಕ್ಷತ್ರಿಯರಿಗೆ ಅನ್ವಯ,
ಮೇಲಿನ ಸವಲತ್ತು ಮನುಷ್ಯರಿಗೆ ಅಸುರರಿಗೆ ಇರುವುದಿಲ್ಲ,
ಹೊರತಾಗಿ ಇತರರಲ್ಲಿ-ಬ್ರಾಹ್ಮಣ-ಅಶ್ವತ್ಥಾಮರಲ್ಲಿ ಬಲ ಇಲ್ಲದಿಲ್ಲ,
ಇನ್ಯಾರಿಗೇ ಆಗಲಿ ಬಲವಿಡೋದು ದೇವನದೇ ಶಕ್ತಿ,
ಲೋಕನಿಯಮನಕ್ಕಾಗಿ ಅವನೇ ನಡೆಸುವ ಯುಕ್ತಿ,
ದುಷ್ಟ ಸಂಹಾರದಲ್ಲಿ ಬ್ರಾಹ್ಮಣರಲ್ಲೂ ಒಮ್ಮೊಮ್ಮೆ ಬಲ ಇಡುವ ರೀತಿ,
ಬೇರೆಡೆ ಜ್ಞಾನಿಬ್ರಾಹ್ಮಣ ಮಿಗಿಲು ಎಂಬ ಚಿಂತನೆ ಅವನಿಟ್ಟ ನೀತಿ,
ಸಾಮಾನ್ಯವಾಗಿ ಕ್ಷತ್ರಿಯಗೆ ಬಲವೇ ಮೇಲು,
ಬ್ರಾಹ್ಮಣನಾದವಗೆ ಜ್ಞಾನವೇ ಸಿಂಹ ಪಾಲು.
ಕೆಳಗಿನಂತೆ ಕ್ಷತ್ರಿಯರಲ್ಲಿ ಬಲಗಣನೆಯ ಮಾಪನ,
ಆಗಿದೆಯೇ ಆ ಬಲ ದೇವತಾಕಾರ್ಯದ ಸಾಧನ?
ಆಗಬೇಕದು ತಾರತಮ್ಯನೀತಿಯಿಂದ ತೀರ್ಮಾನ.
ಕೆಳಗಿನಂತೆ ಕ್ಷತ್ರಿಯರಲ್ಲಿ ಬಲಗಣನೆಯ ಮಾಪನ,
ಆಗಿದೆಯೇ ಆ ಬಲ ದೇವತಾಕಾರ್ಯದ ಸಾಧನ?
ಆಗಬೇಕದು ತಾರತಮ್ಯನೀತಿಯಿಂದ ತೀರ್ಮಾನ.
[Contributed by Shri Govind
Magal]
No comments:
Post a Comment
ಗೋ-ಕುಲ Go-Kula