Monday, 29 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 82 - 88

ಯಾಹ್ಯುತ್ಪಾತಾಃ ಸನ್ತಿ ತತ್ರೇತ್ಯುದೀರಿತೋ ಜಗಾಮ ಶೀಘ್ರಂ ಯಮುನಾಂ ಸ ನನ್ದಃ ।
ರಾತ್ರಾವೇವಾsಗಚ್ಛಮಾನೇ ತು ನನ್ದೇ ಕಂಸಸ್ಯ ಧಾತ್ರೀ ತು ಜಗಾಮ ಗೋಷ್ಠಮ್ ॥೧೨.೮೨॥
ನಿನ್ನ ಹೆಂಡತಿ ಇರುವ ದಿಕ್ಕಲ್ಲಿ ನಾನಾ ಬಗೆಯ ಉತ್ಪಾತಗಳ ನೋಟ,
ವಸುದೇವನಿಂದ ಹೇಳಲ್ಪಟ್ಟ ನಂದ ಯಮುನಾತೀರದತ್ತ ಹೊರಟ.
ರಾತ್ರಿಯಲ್ಲಿಯೇ ನಂದಗೋಪ ಹೀಗೆ ಶಿಬಿರದತ್ತ ಬರುತ್ತಿರಲು,
ಕಂಸನ ಸಾಕುತಾಯಿ ಪೂತನೆ ಯಶೋದೆಯೆಡೆ ತೆರಳಿದಳು.

ಸಾ ಪೂತನಾ ನಾಮ ನಿಜಸ್ವರೂಪಮಾಚ್ಛಾಧ್ಯ ರಾತ್ರೌ ಶುಭರೂಪವಚ್ಚ ।
ವಿವೇಶ ನನ್ದಸ್ಯ ಗೃಹಂ ಬೃಹದ್ವನಪ್ರಾನ್ತೇ ಹಿ ಮಾರ್ಗ್ಗೇ ರಚಿತಂ ಪ್ರಯಾಣೇ  ॥೧೨.೮೩॥
ತೀರೇ ಭಗಿನ್ಯಾಸ್ತು ಯಮಸ್ಯ ವಸ್ತ್ರಗೃಹೇ ಶಯಾನಂ ಪುರುಷೋತ್ತಮಂ ತಮ್ ।
ಜಗ್ರಾಹ ಮಾತ್ರಾ ತು ಯಶೋದಯಾ ತಯಾ ನಿದ್ರಾಯುಜಾ ಪ್ರೇಕ್ಷ್ಯಮಾಣಾ ಶುಭೇವ ॥೧೨.೮೪॥
ಆ ಪೂತನೆಯೆಂಬ ರಾಕ್ಷಸಿ ಧರಿಸಿ ಸುಂದರಿಯ ವೇಷ,
ಮಾಡಿದಳು ಆ ರಕ್ಕಸಿ ನಂದಗೋಪನ ಮನೆ ಪ್ರವೇಶ.
ಬೃಹದ್ವನ ಹಾಗೂ ಮಧುರಾ ಮಧ್ಯದ ದಾರಿಯ ಭಾಗ,
ಯಮುನಾತೀರದಿ ಮಾಡಲ್ಪಟ್ಟ ನಂದನ ಶಿಬಿರದ ಜಾಗ.
ಶಿಬಿರದಲ್ಲಿ ಯಶೋದೆಯೊಂದಿಗೆ ಮಲಗಿದ ಕೃಷ್ಣನ ಕಂಡಳು,
ಸಭ್ಯಳಂತೆ ನಟಿಸಿದ ಪೂತನೆ ಯಶೋದೆ ಮಗುವನ್ನು ಎತ್ತಿಕೊಂಡಳು.

ತನ್ಮಾಯಯಾ ಧರ್ಷಿತಾ ನಿದ್ರಯಾ ಚ ನ್ಯವಾರಯನ್ನೈವ ಹಿ ನನ್ದಜಾಯಾ ।
ತಯಾ ಪ್ರದತ್ತಂ ಸ್ತನಮೀಶಿತಾsಸುಭಿಃ ಪಪೌ ಸಹೈವಾsಶು ಜನಾರ್ದ್ದನಃ ಪ್ರಭುಃ ॥೧೨.೮೫॥
ಪೂತನೆಯ ಮಾಯೆಯ ಮೋಸದ ಜಾಲ,
ನಿದ್ದೆಯಲ್ಲಿದ್ದ ಯಶೋದೆ ರಕ್ಕಸಿಯ ತಡೆಯಲಿಲ್ಲ.
ಜಗದ್ಪಿತನಿಗೆ ಪೂತನೆಯಿಂದ ಎದೆಹಾಲುಣಿಸುವ ಆಟ,
ಮೊಲೆಹಾಲೊಂದಿಗೆ ಅವಳ ಪ್ರಾಣ ಹೀರಿದ ಜಾಣ ತುಂಟ.

ಮೃತಾ ಸ್ವರೂಪೇಣ ಸುಭೀಷಣೇನ ಪಪಾತ ಸಾ ವ್ಯಾಪ್ಯ ವನಂ ಸಮಸ್ತಮ್ ।
ತದಾssಗಮನ್ನನ್ದಗೋಪೋsಪಿ ತತ್ರ ದೃಷ್ಟ್ವಾ ಚ ಸರ್ವೇsಪ್ಯಭವನ್ ಸುವಿಸ್ಮಿತಾಃ ॥೧೨.೮೬॥
ಪೂತನೆ ಸಾಯುವಾಗ ವ್ಯಕ್ತವಾದ ಮೂಲರೂಪ,
ಇಡೀ ಕಾಡನ್ನೇ ವ್ಯಾಪಿಸಿ ಸತ್ತು ಬಿದ್ದಳವಳು ಪಾಪ.
ಆಗಲೇ ನಂದಗೋಪ ಶಿಬಿರಕ್ಕೆ ಬಂದ ಸಮಯ,
ಅಲ್ಲಿದ್ದವರಿಗೆಲ್ಲಾ ಪೂತನೆಯ ಕಂಡಾಯಿತು ಆಶ್ಚರ್ಯ.

ಸ ತಾಟಕಾ ಚೋರ್ವಶಿಸಮ್ಪ್ರವಿಷ್ಟಾ ಕೃಷ್ಣಾವದ್ಧ್ಯಾನಾನ್ನಿರಯಂ ಜಗಾಮ ।
ಸಾ ತೂರ್ವಶೀ ಕೃಷ್ಣಭುಕ್ತಸ್ತನೇನ ಪೂತಾ ಸ್ವರ್ಗ್ಗಂ ಪ್ರಯಯೌ ತತ್ಕ್ಷಣೇನ ॥೧೨.೮೭॥
ಪೂತನೆಯೇ ಊರ್ವಶಿಯಿಂದ ಆವಿಷ್ಟಳಾದ ತಾಟಕೆ,
ಕೃಷ್ಣನಲ್ಲಿ ಮಾಡಿದ ಅಪರಾಧದಿಂದ ತಮಸ್ಸು ಹೊಕ್ಕಳಾಕೆ.
ಊರ್ವಶಿಯ ಎದೆಹಾಲನ್ನು ಕೃಷ್ಣ ಉಂಡದ್ದರಿಂದ ಅವಳಾದಳು ಪವಿತ್ರ,
ಆ ಪರಿಣಾಮವಾಗಿ ಅವಳಿಗೆ ಆಯಿತು ಆ ಕ್ಷಣದಲ್ಲಿ ಸ್ವರ್ಗದೆಡೆ ಯಾತ್ರ.
ಒಂದೇ ದೇಹದಲ್ಲಿದ್ದರೂ ಎರಡು ಜೀವದ ಭಿನ್ನ ಸ್ವಭಾವ,
ಅದನ್ನ ಅನುಸರಿಸಿ ಗತಿ ಪಾಲಿಸಿದ ಕೃಷ್ಣನೆಂಬ ಹೆದ್ದೈವ.

ಸಾ ತುಮ್ಬುರೋಃ ಸಙ್ಗತ ಆವಿವೇಶ ರಕ್ಷಸ್ತನುಂ ಶಾಪತೋ ವಿತ್ತಪಸ್ಯ ।
ಕೃಷ್ಣಸ್ಪರ್ಶಾಚ್ಛುದ್ಧರೂಪಾ ಪುನರ್ದ್ದಿವಂ ಯಯೌ ತುಷ್ಟೇ ಕಿಮಲಭ್ಯಂ ರಮೇಶೇ ॥೧೨.೮೮॥
ಊರ್ವಶಿ ಬಯಸಿದ್ದಳು ತುಂಬುರು ಎನ್ನುವ ಗಂಧರ್ವನ ಸಂಗಮ,
ಕುಬೇರನ ಶಾಪಕ್ಕೊಳಗಾಗಿ ಆಯಿತು ರಾಕ್ಷಸಿ ಶರೀರದ ಸಮಾಗಮ.
ಕೃಷ್ಣಸ್ಪರ್ಶದಿಂದ ಪರಿಶುದ್ಧವಾಗಿ ಸ್ವರ್ಗ ಸೇರಿದಳು,
ಭಗವಂತ ಸಂತುಷ್ಟನಾದರೆ ಏನು ಅಸಾಧ್ಯ ಹೇಳು.
[Contributed by Shri Govind Magal]

Wednesday, 24 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 76 - 81

ಅಥ ಪ್ರಭಾತೇ ಶಯನೇ ಶಯಾನಮಪಶ್ಯತಾಮಬ್ಜದಲಾಯತಾಕ್ಷಮ್ ।
ಕೃಷ್ಣಂ ಯಶೋದಾ ಚ ತಥೈವ ನನ್ದ ಆನನ್ದಸಾನ್ದ್ರಾಕೃತಿಮಪ್ರಮೇಯಮ್ ॥೧೨.೭೬॥
ಮರುಬೆಳಿಗ್ಗೆ ನಂದ ಯಶೋದೆಯರು ತಮ್ಮ ಹಾಸಿಗೆಯಲಿ ಕಂಡ ನೋಟ,
ತಾವರೆಕಂಗಳ ಆನಂದಮೈವೆತ್ತ ಪೂರ್ಣತಿಳಿಯಲಾಗದ ಕೃಷ್ಣನಾಟ.
ಮೇನಾತ ಏತೌ ನಿಜಪುತ್ರಮೇನಂ ಸ್ರಷ್ಟಾರಮಬ್ಜಪ್ರಭವಸ್ಯ  ಚೇಶಮ್ ।
ಮಹೋತ್ಸವಾತ್ ಪೂರ್ಣ್ಣಮನಾಶ್ಚ ನನ್ದೋ ವಿಪ್ರೇಭ್ಯೋsದಾಲ್ಲಕ್ಷಮಿತಾಸ್ತದಾ ಗಾಃ ॥೧೨.೭೭॥
ಕಮಲೋದ್ಭವ ಬ್ರಹ್ಮನ ಪಿತ ಸರ್ವಸಮರ್ಥ ಹರಿ,
ನಂದಯಶೋದೆಯರು ತಮ್ಮ ಮಗನೆಂದ ಆ ಪರಿ.
ಸಂತಸದ ಹೊಳೆ ಹರಿಸಿತು ಆ ಮಗುವಿನ ಜನನ,
ನಂದ ಮಾಡಿದ ಲಕ್ಷಕ್ಕೂ ಮಿಕ್ಕಿದ ಗೋವುದಾನ.

ಸುವರ್ಣ್ಣರತ್ನಾಮ್ಬರಭೂಷಣಾನಾಂ ಬಹೂನಿ ಗೋಜೀವಿಗಣಾಧಿನಾಥಃ ।
ಪ್ರಾದಾದಥೋಪಾಯನಪಾಣಯಸ್ತಂ ಗೋಪಾ ಯಶೋದಾಂ ಚ ಮುದಾ ಸ್ತ್ರಿಯೋsಗಮನ್ ॥೧೨.೭೮॥
ಗೊಲ್ಲರ ಗುಂಪಿನ ಒಡೆಯನಾದ ಆ ನಂದಗೋಪ,
ಸುವರ್ಣರತ್ನ ಬಟ್ಟೆ ಜೊತೆ ಗೋದಾನ ಕೊಟ್ಟ ಭೂಪ.
ಉಡುಗೊರೆಯೊಂದಿಗೆ ನಂದನ ಬಳಿಗೆ ಬಂದ ಗೊಲ್ಲರ ಹಿಂಡು,
ಆನಂದದಿಂದ ಯಶೋದೆಯ ಬಳಿ ಧಾವಿಸಿತು  ಗೋಪಿಯರ ದಂಡು.

ಗತೇಷು ತತ್ರೈವ ದಿನೇಷು ಕೇಷುಚಿಜ್ಜಗಾಮ ಕಂಸಸ್ಯ ಗೃಹಂ ಸ ನನ್ದಃ ।
ಪೂರ್ವಂ ಹಿ ನನ್ದಃ ಸ ಕರಂ ಹಿ ದಾತುಂ ಬೃಹದ್ವನಾನ್ನಿಸ್ಸೃತಃ ಪ್ರಾಪ ಕೃಷ್ಣಾಮ್ ॥೧೨.೭೯॥
ಸಹಾsಗತಾ ತೇನ ತದಾ ಯಶೋದಾ ಸುಷಾವ ದುರ್ಗ್ಗಾಮಥ ತತ್ರ ಶೌರಿಃ ।
ನಿಧಾಯ ಕೃಷ್ಣಂ ಪ್ರತಿಗೃಹ್ಯ ಕನ್ಯಕಾಂ ಗೃಹಂ ಯಯೌ ನನ್ದ ಉವಾಸ ತತ್ರ ॥೧೨.೮೦॥
ನಂದಗೋಪ ಕಂಸನಿಗೆ ಕಪ್ಪ ಕಾಣಿಕೆ ಕೊಡುವುದಕ್ಕೋಸ್ಕರ,
ಬೃಹದ್ವನದಿಂದ ಮಧುರಾ ಮಾರ್ಗ  ಸೇರಿದ ಯಮುನಾತೀರ.
ಆತನೊಂದಿಗೆ ಬಂದಿದ್ದ ಪತ್ನಿ ಯಶೋದಾದೇವಿ,
ದುರ್ಗೆಯ ಹೆತ್ತು ಅವಳಿಗಾಗಿದ್ದಳು ತಾನು ತಾಯಿ.
ಆಗಲೇ ವಸುದೇವ ಕೃಷ್ಣನ ತಂದು ಯಶೋದೆಯ ಪಕ್ಕದಲ್ಲಿಟ್ಟಿದ್ದ,
ಅಲ್ಲಿದ್ದ ದುರ್ಗೆಯನ್ನು ಎತ್ತಿಕೊಂಡು ಮತ್ತೆ ತಾನು ಹಿಂತಿರುಗಿದ್ದ.

ನಿರುಷ್ಯ ತಸ್ಮಿನ್ ಯಮುನಾತಟೇ ಸ ಮಾಸಂ ಯಯೌ ದ್ರಷ್ಟುಕಾಮೋ ನರೇನ್ದ್ರಮ್ ।
ರಾಜ್ಞೇsಥ ತಂ ದತ್ತಕರಂ ದದರ್ಶ ಶೂರಾತ್ಮಜೋ ವಾಕ್ಯಮುವಾಚ ಚೈನಮ್ ॥೧೨.೮೧॥
ಯಮುನಾತೀರದಲ್ಲಿ ಒಂದು ತಿಂಗಳಕಾಲ ಮಾಡಿ ವಾಸ,
ನಂದಗೋಪ ಕೈಗೊಂಡ ಕಂಸನ ಕಾಣಲು ಮಧುರಾ ಪ್ರವಾಸ.
ಅಲ್ಲಿ ಕಂಸನಿಗೆ ದತ್ತಕರ ಕೊಟ್ಟ ನಂದ,
ವಸುದೇವನ ಕಂಡು ಹೇಳಿದ ಮಾತೊಂದ.
[Contributed by Shri Govind Magal] 

Tuesday, 23 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 73 - 75

ಶ್ರುತ್ವಾ ತಯೋಕ್ತಂ ತು ತದೈವ ಕಂಸಃ ಪಶ್ಚಾತ್ತಾಪಾದ್ ವಸುದೇವಂ ಸಭಾರ್ಯ್ಯಮ್ ।
ಪ್ರಸಾದಯಾಮಾಸ ಪುನಃಪುನಶ್ಚ ವಿಹಾಯ ಕೋಪಂ ಚ ತಮೂಚತುಸ್ತೌ ।
ಸುಖಸ್ಯ ದುಃಖಸ್ಯ ಚ ರಾಜಸಿಂಹ ನಾನ್ಯಃ ಕರ್ತ್ತಾ ವಾಸುದೇವಾದಿತಿ ಸ್ಮ ॥೧೨.೭೩ll
ದುರ್ಗೆಯ ಮಾತಿನಿಂದ ಕಂಸನಲ್ಲಿ ತೀವ್ರ ಪಶ್ಚಾತ್ತಾಪದ ಭಾವ,
ವಸುದೇವ ದೇವಕಿಯರನ್ನು ಮತ್ತೆ ಮತ್ತೆ ಸಾಂತ್ವನಗೊಳಿಸುತ್ತಾನವ.
ಅವರಿಬ್ಬರೂ ಕೂಡಾ ಕಂಸನ ಮೇಲಿನ ಕೋಪವ  ಬಿಟ್ಟು ಕೊಟ್ಟು,
ಹೇಳುತ್ತಾರೆ ಸುಖ ದುಃಖಗಳಿಗೆ ಕಾರಣ ನಾರಾಯಣ ಎಂಬ ಗುಟ್ಟು. 

ಆನೀಯ ಕಂಸೋsಥ ಗೃಹೇ ಸ್ವಮನ್ತ್ರಿಣಃ ಪ್ರೋವಾಚ ಕನ್ಯಾವಚನಂ ಸಮಸ್ತಮ್ ।
ಶ್ರುತ್ವಾ ಚ ತೇ ಪ್ರೋಚುರತ್ಯನ್ತಪಾಪಾಃ ಕಾರ್ಯ್ಯಂ ಬಾಲಾನಾಂ ನಿಧನಂ ಸರ್ವಶೋsಪಿ॥೧೨.೭೪॥
ನಂತರ ಕಂಸನ ಮನೆಯಲ್ಲಿ ನಡೆಯಿತು ವಿಷಯದ ಬಗ್ಗೆ ಮಂತ್ರಾಲೋಚನೆ,
ಪಾಪಿಮಂತ್ರಿಗಳಿಂದ ಎಲ್ಲಾ ಮಕ್ಕಳ ಕೊಲ್ಲಬೇಕೆಂಬ ದುಷ್ಟಹಿಂಸಾ ಸೂಚನೆ.

ತಥೇತಿ ತಾಂಸ್ತತ್ರ ನಿಯುಜ್ಯ ಕಂಸೋ ಗೃಹಂ ಸ್ವಕೀಯಂ ಪ್ರವಿವೇಶ ಪಾಪಃ ।
ಚೇರುಶ್ಚ ತೇ ಬಾಲವಧೇ ಸದೋಧ್ಯತಾ ಹಿಂಸಾವಿಹಾರಾಃ ಸತತಂ ಸ್ವಭಾವತಃ ॥೧೨.೭೫॥
ಅದಕ್ಕೆ ಒಪ್ಪಿಗೆ ಕೊಟ್ಟ ಕಂಸ ಮಾಡಿದ ಅಂತಃಪುರ ಪ್ರವೇಶ,
ಹಿಂಸೆಯೇ ಕ್ರೀಡೆಯಾದವರು ಪಡೆದರು ಬಾಲವಧೆಯಲ್ಲಿ ಹರುಷ.


Saturday, 20 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 69 - 72

ಗರ್ಭಂ ದೇವಕ್ಯಾಃ ಸಪ್ತಮಂ ಮೇನಿರೇ ಹಿ ಲೋಕಾಃ ಸೃತಂ ತ್ವಷ್ಟಮಂ ತಾಂ ತತಃ ಸಃ ।
ಮತ್ವಾ ಹನ್ತುಂ ಪಾದಯೋಃ ಸಮ್ಪ್ರಗೃಹ್ಯ ಸಮ್ಪೋಥಯಾಮಾಸ ಶಿಲಾತಳೇ ಚ ॥೧೨.೬೯॥
ಸಾ ತದ್ಧಸ್ತಾತ್ ಕ್ಷಿಪ್ರಮುತ್ಪತ್ಯ ದೇವೀ ಖೇsದೃಶ್ಯತೈವಾಷ್ಟಭುಜಾ ಸಮಗ್ರಾ ।
ಬ್ರಹ್ಮಾದಿಭಿಃ ಪೂಜ್ಯಮಾನಾ ಸಮಗ್ರೈರತ್ಯದ್ಭುಥಾಕಾರವತೀ ಹರಿಪ್ರಿಯಾ ॥೧೨.೭೦॥
ದೇವಕಿಯ ಏಳನೇ ಮಗುವಿನದು ಆಗಿದೆಯೆಂದು ಗರ್ಭಸ್ರಾವ,
ಕಂಸನೂ ಸೇರಿದಂತೆ ಉಳಿದೆಲ್ಲರದೂ ಹಾಗಾಗಿದೆ ಎಂದೇ ಭಾವ.
ಹೀಗೆ ಕಂಸ ದುರ್ಗೆಯನ್ನು ಎಂಟನೇ ಮಗುವೆಂದು ಬಗೆದ,
ಕಾಲುಗಳಲ್ಲಿ ಮಗುವ ಹಿಡಿದು ಬಂಡೆಗಲ್ಲಿಗಪ್ಪಳಿಸಲು ಹೋದ.
ಹಿಡಿತದಿಂದ ಬಿಡಿಸಿಕೊಂಡ ದುರ್ಗೆ ಮೇಲಕ್ಕೇರಿ ಆಕಾಶದಲ್ಲಿ,
ಎಂಟು ತೋಳ್ಗಳ ಅತ್ಯದ್ಭುತವಾದ ದೇವಿಯಾಗಿ ಕಂಡಳಲ್ಲಿ.
ಬ್ರಹ್ಮಾದಿ ಸಮಗ್ರ ದೇವತೆಗಳಿಂದ ಪೂಜೆಗೊಂಬ ಹರಿಪ್ರಿಯಳಲ್ಲಿ.

ಉವಾಚ ಚಾSರ್ಯ್ಯಾ ತವ ಮೃತ್ಯುರತ್ರ ಕ್ವಚಿತ್ ಪ್ರಜಾತೋ ಹಿ ವೃಥೈವ ಪಾಪ ।
ಅನಾಗಸೀಂ ಮಾಂ ವಿನಿಹನ್ತುಮಿಚ್ಛಸ್ಯಶಕ್ಯಕಾರ್ಯ್ಯೇ ತವ ಚೋಧ್ಯಮೋSಯಮ್ ॥೧೨.೭೧॥
ಆಕಾಶದಿ ದಿವ್ಯರೂಪದಿಂದ ಕಾಣಿಸಿಕೊಂಡ ದುರ್ಗೆ ಕಂಸನ ಕುರಿತು,
ನನ್ನ ಕೊಲ್ಲಲು ನಿನ್ನಿಂದಾಗಲ್ಲ,ಇನ್ನೆಲ್ಲೋ ಹುಟ್ಟ್ಯಾಗಿದೆ ನಿನ್ನ ಮೃತ್ಯು.
ತಪ್ಪು ಮಾಡಿರದ ನನ್ನ ಕೊಲ್ಲುವ ನಿನ್ನ ಬಯಕೆಯದು ವ್ಯರ್ಥಮಾತು.

 ಉಕ್ತ್ವೇತಿ ಕಂಸಂ ಪುನರೇವ ದೇವಕೀತಲ್ಪೇsಶಯದ್ ಬಾಲರೂಪೈವ ದುರ್ಗ್ಗಾ ।
ನಾಜ್ಞಾಸಿಷುಸ್ತಾಮಥ ಕೇಚನಾತ್ರ ಋತೇ ಹಿ ಮಾತಾಪಿತರೌ ಗುಣಾಢ್ಯಾಮ್ ॥೧೨.೭೨॥
ಈ ರೀತಿ ಕಂಸನಿಗೆ ಹೇಳಿದ ಆ ದುರ್ಗೆ,
ಶಿಶುವಾಗಿ ಮಲಗಿದಳು ದೇವಕಿಯ ಬಗಲಿಗೆ.
ಅವಳ ಆ ಇರುವಿಕೆ ತಂದೆತಾಯಿಗಳ ಬಿಟ್ಟು,
ಇನ್ಯಾರಿಗೂ ಅರಿವಾಗದಂಥ ದೈವೀ ಪಟ್ಟು.

Thursday, 18 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 64 - 68

ಪಿತೃಕ್ರಮಂ ಮೋಹನಾರ್ತ್ಥಂ ಸಮೇತಿ ನ ತಾವತಾ ಶುಕ್ಲತೋ ರಕ್ತತಶ್ಚ ।
ಜಾತೋsಸ್ಯ ದೇಹಸ್ತ್ವಿತಿ ದರ್ಶನಾಯ ಸಶಙ್ಖಚಕ್ರಾಬ್ಜಗದಃ ಸ ದೃಷ್ಟಃ ॥೧೨.೬೪॥
ಅನೇಕ ಸೂರ್ಯ್ಯಾಭಕಿರೀಟಯುಕ್ತೋ ವಿದ್ಯುತ್ಪ್ರಭೇ ಕುಣ್ಡಲೇ ಧಾರಯಂಶ್ಚ ।
ಪೀತಾಮ್ಬರೋ ವನಮಾಲೀ ಸ್ವನನ್ತಸೂರ್ಯ್ಯೋರುದೀಪ್ತಿರ್ದ್ದದೃಶೇ ಸುಖಾರ್ಣ್ಣವಃ ॥೧೨.೬೫॥
ತಂದೆ ಹಾಗು ತಾಯಿಯರಲ್ಲಿ ಪ್ರವೇಶ ಎಂಬ ಕ್ರಮ,
ದುರ್ಜನ ಮೋಹಕ್ಕಾಗಿ ಭಗವಂತ ತೋರೋ ನೇಮ.
ರೇತಸ್ಸಿನಿಂದಾಗಲೀ ರಕ್ತದಿಂದಾಗಲೀ ತಾನು ಹುಟ್ಟಿಲ್ಲ ಎಂದು ತೋರಲೋಸುಗ,
ಶಂಖ -ಚಕ್ರ -ಪದ್ಮ -ಗದೆಯನ್ನು ಹಿಡಿದವನಾಗಿ ಹರಿ ಕಾಣಿಸಿಕೊಂಡನಾಗ.
ಅನೇಕ ಸೂರ್ಯಕಾಂತಿ ಬೀರುವ ಕಿರೀಟದಿಂದ ಒಪ್ಪಿದವ,
ಮಿಂಚಿನ ಬಣ್ಣವುಳ್ಳಂಥ ಕುಂಡಲಗಳನ್ನು ತಾನು ಧರಿಸಿದವ.
ಹಳದಿಬಣ್ಣದ ಬಟ್ಟೆಯುಟ್ಟ ವನಮಾಲಾಧಾರಿ,
ಅನಂತಸೂರ್ಯಕಾಂತಿಯ ಸುಖದಕಡಲಾಗಿ ಕಂಡ ಶ್ರೀಹರಿ.

ಸ ಕಞ್ಜಯೋನಿಪ್ರಮುಖೈಃ ಸುರೈಃ ಸ್ತುತಃ ಪಿತ್ರಾ ಚ ಮಾತ್ರಾ ಚ ಜಗಾದ ಶೂರಜಮ್ ।
ನಯಸ್ವ ಮಾಂ ನನ್ದಗೃಹಾನಿತಿ ಸ್ಮ ತತೋ ಬಭೂವ ದ್ವಿಭುಜೋ ಜನಾರ್ದ್ದನಃ ॥೧೨.೬೬॥
ಹುಟ್ಟಿದ ಕೂಡಲೆ ಬ್ರಹ್ಮಾದಿದೇವತೆಗಳಿಂದ,
ಜಗತ್ತಿಗೆ ಕಾಣುವಂಥ ತಂದೆ ತಾಯಿಗಳಿಂದ,
ಸ್ತೋತ್ರ ಮಾಡಲ್ಪಟ್ಟವನಾದ ಅವ ಗೋವಿಂದ.
ವಸುದೇವಗೆ ಹೇಳಿದ ನನ್ನ ನಂದಗೋಪನ ಮನೆಗೆ ಕೊಂಡೊಯ್ಯಿ,
ಇಂತೆಂದ ಜನಾರ್ದನ ಕಾಣಿಸಿಕೊಂಡ ಉಳ್ಳವನಾಗಿ ಎರಡೇ ಕೈಯ್ಯಿ.
 
ತದೈವ ಜಾತಾ ಚ ಹರೇರನುಜ್ಞಯಾ ದುರ್ಗ್ಗಾಭಿಧಾ ಶ್ರೀರನು ನನ್ದಪತ್ನ್ಯಾಮ್ ।
ತತಸ್ತಮಾದಾಯ ಹರಿಂ ಯಯೌ ಸ ಶೂರಾತ್ಮಜೋ ನನ್ದಗೃಹಾನ್ ನಿಶೀಥೇ ॥೧೨.೬೭॥
ಇದೇ ಸಮಯದಲ್ಲಿ ಹರಿಯಾಜ್ಞೆಯಂತೆ ಲಕ್ಷ್ಮೀದೇವಿ,
ದುರ್ಗೆಯಾಗಿ ನಂದಗೋಪಪತ್ನಿ ಯಶೋದೆಯಲ್ಲಿ ಹುಟ್ಟಿದಳಾ ತಾಯಿ.
ಇತ್ತ ಶಿಶುರೂಪದ ಶ್ರೀಹರಿಯನ್ನು ಹೊತ್ತು,
ವಸುದೇವ ಹೊರಟ ನಂದಗೋಪನ ಮನೆಕುರಿತು.

ಸಂಸ್ಥಾಪ್ಯ ತಂ ತತ್ರ ತಥೈವ ಕನ್ಯಕಾಮಾದಾಯ ತಸ್ಮಾತ್ ಸ್ವಗೃಹಂ ಪುನರ್ಯ್ಯಯೌ ।
ಹತ್ವಾ ಸ್ವಸುರ್ಗ್ಗರ್ಭಷಟ್ಕಂ ಕ್ರಮೇಣ ಮತ್ವಾsಷ್ಟಮಂ ತತ್ರ ಜಗಾಮ ಕಂಸಃ ॥೧೨.೬೮॥
ಶ್ರೀಕೃಷ್ಣನನ್ನು ನಂದಗೋಪನ ಮನೆಯಲ್ಲಿಟ್ಟ ವಸುದೇವನು,
ಅಲ್ಲಿದ್ದ ಶಿಶುರೂಪಿ ದುರ್ಗೆಯ ಕೊಂಡು ಹಿಂತಿರುಗಿದ ತಾನು.
ಇತ್ತ ದೇವಕಿಯ ಆರು ಮಕ್ಕಳನ್ನು ಕಂಸ ಕ್ರಮವಾಗಿ ಕೊಂದಿದ್ದ,
ಎಂಟನೇದು ಹುಟ್ಟಿದೆ ಎಂದು ತಿಳಿದು ದೇವಕಿಯೆಡೆಗೆ ಬಂದಿದ್ದ.
[Contributed by Shri Govind Magal]

Wednesday, 17 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 59 - 63

ಸ ನಾಮತೋ ಬಲದೇವೋ ಬಲಾಢ್ಯೋ ಬಭೂವ ತಸ್ಯಾನು ಜನಾರ್ದ್ದನಃ ಪ್ರಭುಃ ।
ಆವಿರ್ಬಭೂವಾಖಿಲಸದ್ಗುಣೈಕಪೂರ್ಣ್ಣಃ ಸುತಾಯಾಮಿಹ ದೇವಕಸ್ಯ ॥೧೨.೫೯॥
ಹಾಗೆ ರೋಹಿಣಿಯ ಗರ್ಭದಲ್ಲಿ ಜನಿಸಿದ ಶೇಷ,
ಬಲಾಢ್ಯನಾಗಿದ್ದು ಬಲದೇವನೆಂದಾದದ್ದು ವಿಶೇಷ.
ಸಕಲಸದ್ಗುಣಪೂರ್ಣ ಪ್ರಭು ಜನಾರ್ದನ,
ದೇವಕಿಯ ಉದರದಲ್ಲಾಯಿತವನ ಜನನ.

ಯಃ ಸತ್ಸುಖಜ್ಞಾನಬಲೈಕದೇಹಃ ಸಮಸ್ತದೋಷಸ್ಪರ್ಶೋಜ್ಝಿತಃ ಸದಾ ।
ಅವ್ಯಕ್ತತತ್ಕಾರ್ಯ್ಯಮಯೋ ನ ಯಸ್ಯ ದೇಹಃ ಕುತಶ್ಚಿತ್ ಕ್ವಚ ಸ ಹ್ಯಜೋ ಹರಿಃ ॥೧೨.೬೦॥
ಯಾರು ಜ್ಞಾನ ಬಲಗಳೇ ಮೈವೆತ್ತು ಬಂದವನೋ,
ಯಾರು ಎಲ್ಲಾ ದೋಷಗಳ ಸ್ಪರ್ಶದಿಂದ ರಹಿತನೋ,
ಯಾರ ದೇಹ ಜಡ ಅಥವಾ ಜಡಸಂಬಂಧಿ ಪದಾರ್ಥದಿಂದ ಹುಟ್ಟಿಲ್ಲ,
ಅಂತಹಾ ನಾರಾಯಣಗೆ ಪ್ರಾಕೃತವಾದ ಹುಟ್ಟು ಎಂಬುದೊಂದು ಇಲ್ಲ.

ನ ಶುಕ್ಲರಕ್ತಪ್ರಭವೋsಸ್ಯ ಕಾಯಸ್ತಥಾsಪಿ ತತ್ಪುತ್ರತಯೋಚ್ಯತೇ ಮೃಷಾ ।
ಜನಸ್ಯ ಮೋಹಾಯ ಶರೀರತೋsಸ್ಯಾ ಯದಾವಿರಾಸೀದಮಲಸ್ವರೂಪಃ ॥೧೨.೬೧॥
ನಾರಾಯಣನ ಶರೀರ ರೇತಸ್ಸು ಹಾಗೂ ರಕ್ತ ಸಂಪರ್ಕದಿಂದಾದದ್ದಲ್ಲ,
ಆದರೂ ಹಾಗೇ ತೋರಿಸಿಕೊಳ್ಳುವ ಅವ ದುರ್ಜನಮೋಹಕ್ಕಾಗಿ ಎಲ್ಲ.
ಅಮಲಸ್ವರೂಪನಾಗಿ ಆಗಿದ್ದರೂ ಆವಿರ್ಭಾವ,
ದೇವಕೀಪುತ್ರನೆಂದು ಕರೆಸಿಕೊಳ್ಳುವ ಮೋಹಭಾವ.

ಆವಿಶ್ಯ ಪೂರ್ವಂ ವಸುದೇವಮೇವ ವಿವೇಶ ತಸ್ಮಾದೃತುಕಾಲ ಏವ ।
ದೇವೀಮುವಾಸಾತ್ರ ಚ ಸಪ್ತ ಮಾಸಾನ್  ಸಾರ್ದ್ಧಾಂಸ್ತತಶ್ಚಾsವಿರಭೂದಜೋsಪಿ ॥೧೨.೬೨॥
ಮೊದಲು ವಸುದೇವನನ್ನು ಪ್ರವೇಶಮಾಡಿ,
ಅವನ ಮೂಲಕ ಋತುಕಾಲದಿ ದೇವಕಿಯಲ್ಲಿ ಕೂಡಿ,
ಅಲ್ಲಿ ಮಾಡಿದಂತೆ ಏಳೂವರೆ ತಿಂಗಳುಗಳ ಕಾಲ ವಾಸ,
ಹುಟ್ಟಿಲ್ಲದವನಾದರೂ ಹುಟ್ಟಿದವನಂತೆ ತೋರಿದ ವೇಷ.

ಯಥಾ ಪುರಾ ಸ್ತಮ್ಭತ ಆವಿರಾಸೀದಶುಕ್ಲರಕ್ತೋsಪಿ ನೃಸಿಂಹರೂಪಃ ।
ತಥೈವ ಕೃಷ್ಣೋsಪಿ ತಥಾsಪಿ ಮಾತಾಪಿತೃಕ್ರಮಾದೇವ ವಿಮೋಹಯತ್ಯಜಃ ॥೧೨.೬೩॥
ಹೇಗೆ ಹಿಂದೆ ರೇತಸ್ಸು ರಕ್ತ ಸಂಪರ್ಕವಿಲ್ಲದೇ ನೃಸಿಂಹನಾಗಿ ಕಂಬದಿ ಬಂದ,
ಹಾಗೆಯೇ ಕೃಷ್ಣನಾಗಿ ನಾರಾಯಣ ಎಲ್ಲರ ಬಿಗಿದ ಮೋಹದಾನಂದದಿಂದ.
[Contributed by Shri Govind Magal] 

Monday, 15 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 55 - 58


ತಜ್ಜನ್ಮಮಾತ್ರೇಣ ಧರಾ ವಿದಾರಿತಾ ಶಾರ್ದೂಲಭೀತಾಜ್ಜನನೀಕರಾದ್ ಯದಾ ।
ಪಪಾತ ಸಞ್ಚೂರ್ಣ್ಣಿತ ಏವ ಪರ್ವತಸ್ತೇನಾಖಿಲೋsಸೌ ಶತಶೃಙ್ಗನಾಮಾ ॥೧೨.೫೫॥
ಭೀಮಸೇನ ಹುಟ್ಟಿದ ಮಾತ್ರಕ್ಕೆ ಭೂಮಿ ಬಿರಿಯಿತು,
ಹುಲಿಯನ್ನು ಕಂಡ ಕುಂತಿದೇವಿಯ ಕೈ ನಡುಗಿತು.
ಕುಂತೀಕೈಯಲ್ಲಿದ್ದ ಭೀಮ ಕೆಳಗೆ ಬಿದ್ದಾಗ,
ಪುಡಿಪುಡಿಯಾದ ಪರ್ವತವದು ಶತಶೃಂಗ.
ತಸ್ಮಿನ್ ಪ್ರಜಾತೇ ರುಧಿರಂ ಪ್ರಸುಸ್ರುವುರ್ಮ್ಮಹಾಸುರಾ ವಾಹನಸೈನ್ಯಸಂಯುತಾಃ ।
ನೃಪಾಶ್ಚ ತತ್ ಪಕ್ಷಭವಾಃ ಸಮಸ್ತಾಸ್ತದಾ ಭೀತಾ ಅಸುರಾ ರಾಕ್ಷಸಾಶ್ಚ ॥೧೨.೫೬॥
ಪ್ರಾಣದೇವ ಭೀಮಸೇನನಾಗಿ ಹುಟ್ಟಿಬಂದಾಗ,
ಸ್ವಭಾವತಃ ಮಹಾಸುರರೆಲ್ಲ ಭಯಭೀತರಾದರಾಗ.
ವಾಹನ ಸೈನ್ಯಯುಕ್ತರಾದ ಅಸುರ-ರಾಜ-ರಕ್ಕಸರು,
ವಿಪರೀತ ಹೆದರಿದವರಾಗಿ ರಕ್ತವನ್ನೇ ಸುರಿಸಿದರು.

ಅವರ್ದ್ಧತಾತ್ರೈವ ವೃಕೋದರೋ ವನೇ ಮುದಂ ಸುರಾಣಾಮಭಿತಃ ಪ್ರವರ್ದ್ಧಯನ್ ।
ತದೈವ ಶೇಷೋ ಹರಿಣೋದಿತೋsವಿಷದ್ ಗರ್ಭಂ ಸುತಾಯಾ ಅಪಿ ದೇವಕಸ್ಯ ॥೧೨.೫೭॥
ವೃಕೋದರ ದೇವತೆಗಳಿಗೆ ಪಡಿಸುತ್ತಾ ಆನಂದ,
ಆನಂದ ವೃದ್ಧಿಸುತ್ತಾ ಆ ಕಾಡಿನಲ್ಲೇ ತಾನು ಬೆಳೆದ.
ಆಗ ಹರಿಯಾಜ್ಞೆಯಿಂದ ಕೂಡಿದ ಶೇಷ,
ಮಾಡಿದ ದೇವಕಿದೇವಿಯ ಗರ್ಭಪ್ರವೇಶ.

ಸ ತತ್ರ ಮಾಸತ್ರಯಮುಷ್ಯ ದುರ್ಗ್ಗಯಾsಪವಾಹಿತೋ ರೋಹಿಣೀಗರ್ಭಮಾಶು ।
ನಿಯುಕ್ತಯಾ ಕೇಶವೇನಾಥ ತತ್ರ ಸ್ಥಿತ್ವಾ ಮಾಸಾನ್ ಸಪ್ತ ಜಾತಃ ಪೃಥಿವ್ಯಾಮ್ ॥೧೨.೫೮॥
ಶೇಷ ದೇವಕಿದೇವಿಯ ಗರ್ಭದಲ್ಲಿದ್ದದ್ದು ಮೂರು ತಿಂಗಳು,
ಹರಿಯಾಜ್ಞೆಯಂತೆ ದುರ್ಗೆ ಅವನ ರೋಹಿಣಿಗರ್ಭಕೆ ಸಾಗಿಸಿದಳು.
ಏಳು ತಿಂಗಳು ಶೇಷ ರೋಹಿಣಿಗರ್ಭದಲ್ಲಿದ್ದ,
ನಂತರ ಭೂಮಿಯಲ್ಲಿ ತಾನು ಜನಿಸಿ ಬಂದ.

Saturday, 13 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 48 - 54

ತಥಾssಸ ನಿರ್ಋಥಾಭಿಧೋsನುಜಃ ಸ ನಿರ್ಋತೇರಭೂತ್ ।
ಸ ನಾಸಿಕಾಮರುಧ್ಯುತೋ ಯುಯುತ್ಸುನಾಮಕಃ ಕೃತೀ ॥೧೨.೪೮॥
ಸ ಚಾsಮ್ಬಿಕೇಯವೀರ್ಯ್ಯಜಃ ಸುಯೋಧನಾದನನ್ತರಃ ।
ಬಭೂವ ವೈಶ್ಯಕನ್ಯಕೋದರೋದ್ಭವೋ ಹರಿಪ್ರಿಯಃ ॥೧೨.೪೯॥
ದುರ್ಯೋಧನನ ಜನನವಾದಮೇಲೆ,
ನಿರ್ಋಥಿಯ ತಮ್ಮ ನಿರ್ಋಥ ಬಂದ ಲೀಲೆ.
ಅವನು ಪ್ರವಹವಾಯುವಿನಿಂದ ಯುಕ್ತ,
ನಿಪುಣನವ- ಸತ್ಕರ್ಮದಲ್ಲಿಯೇ ನಿರತ.
ಯುಯುತ್ಸು ಎಂಬ ಹೆಸರಿಂದ ಭುವಿಯಲ್ಲಿ ಹುಟ್ಟಿದ,
ಧೃತರಾಷ್ಟ್ರ ವೈಶ್ಯಸ್ತ್ರೀಯಲ್ಲಿ ಹುಟ್ಟಿ ಹರಿಪ್ರಿಯನಾಗಿದ್ದ.



ಯುಧಿಷ್ಠಿರೇ ಜಾತ ಉವಾಚ ಪಾಣ್ಡುರ್ಬಾಹ್ವೋರ್ಬಲಾಜ್ಜ್ಞಾನಬಲಾಚ್ಚ ಧರ್ಮ್ಮಃ ।
ರಕ್ಷ್ಯೋsನ್ಯಥಾ ನಾಶಮುಪೈತಿ ತಸ್ಮಾದ್ ಬಲದ್ವಯಾಢ್ಯಂ ಪ್ರಸುವಾsಶು ಪುತ್ರಮ್ ॥೧೨.೫೦॥
ಪಾಂಡು ಕುಂತಿಗೆ ಹೇಳಿದ-ಯುಧಿಷ್ಠಿರನದಾದಮೇಲೆ ಹುಟ್ಟು,
ಧರ್ಮರಕ್ಷಣೆಗೆ ಬೇಕು ಬಾಹು ಜ್ಞಾನ ಬಲಗಳ ವಿಶಿಷ್ಟ ಪಟ್ಟು.
ಇಲ್ಲವಾದರೆ ಧರ್ಮ ಹೊರಡುತ್ತದೆ ನಾಶದ ಕಡೆ,
ಶೀಘ್ರವೇ ಬಾಹು ಜ್ಞಾನಬಲದ ಮಗನನ್ನು ಪಡೆ.


ಯಜ್ಞಾಧಿಕೋ ಹ್ಯಶ್ವಮೇಧೋ ಮನುಷ್ಯದೃಶ್ಯೇಷು ತೇಜಸ್ಸ್ವಧಿಕೋ ಹಿ ಭಾಸ್ಕರಃ ।
ವರ್ಣ್ಣೇಷು ವಿಪ್ರಃ ಸಕಲೈರ್ಗ್ಗುಣೈರ್ವರೋ ದೇವೇಷು ವಾಯುಃ ಪುರುಷೋತ್ತಮಾದೃತೇ ॥೧೨.೫೧॥
ಅಶ್ವಮೇಧಯಾಗವದು ಯಜ್ಞಗಳಲ್ಲಿ ಮೇಲು,
ಕಾಣುವ ತೇಜಸ್ಸುಗಳಲ್ಲಿ ಸೂರ್ಯನೇ ಮಿಗಿಲು.
ಸಕಲಗುಣಶ್ರೇಷ್ಠನಾದ ಬ್ರಾಹ್ಮಣ ಮನುಜರಲ್ಲಿ ಶೇಷ್ಠ,
ಸರ್ವೋತ್ತಮನ ಬಿಟ್ಟರೆ ಗುಣಗಳಲ್ಲಿ ಪ್ರಾಣದೇವ ವಿಶಿಷ್ಟ. 

ವಿಶೇಷತೋsಪ್ಯೇಷ ಪಿತೈವ ಮೇ ಪ್ರಭುರ್ವ್ಯಾಸಾತ್ಮನಾ ವಿಷ್ಣುರನನ್ತಪೌರುಷಃ ।
ಅತಶ್ಚ ತೇ ಶ್ವಶುರೋ ನೈವ ಯೋಗ್ಯೋ ದಾತುಂ ಪುತ್ರಂ ವಾಯುಮುಪೈಹಿ ತತ್ ಪ್ರಭುಮ್॥೧೨.೫೨॥
ವೇದವ್ಯಾಸರೂಪದ ಅನಂತನಾದ ಭಗವಂತನಾಗಿದ್ದಾನೆ ನನ್ನ ಪಿತ,
ನಿನಗೆ ಮಾವನಾದವನಿಂದ ಮಗನ ಪಡೆಯುವುದದು ಅಸಮ್ಮತ.
ನಂತರದ ಪ್ರಭುತ್ವದವನು ಮುಖ್ಯಪ್ರಾಣ ನೋಡು,
ಅವನಲ್ಲೇ ಕುಂತಿ ನೀನು ಪುತ್ರಭಿಕ್ಷೆಯನ್ನು ಬೇಡು.

ಇತೀರಿತೇ ಪೃಥಯಾssಹೂತವಾಯುಸಂಸ್ಪರ್ಶಮಾತ್ರಾದಭವದ್ ಬಲದ್ವಯೇ ।
ಸಮೋ ಜಗತ್ಯಸ್ತಿ ನ ಯಸ್ಯ ಕಶ್ಚಿದ್ ಭಕ್ತೌ ಚ ವಿಷ್ಣೋರ್ಭಗವದ್ವಶಃ ಸುತಃ ॥೧೨.೫೩॥
ಈ ತೀರ್ಮಾನದ ನಂತರ ಕುಂತಿಯಿಂದ ಕರೆಯಲ್ಪಟ್ಟ ಮುಖ್ಯಪ್ರಾಣ,
ತನ್ನ ಸ್ಪರ್ಶ ಮಾತ್ರದಿಂದಲೇ ಕುಂತಿಗೆ ಮಗನಾಗಿ ಬಂದ ತಾ ಜಾಣ.
ಜಗತ್ತಿನಲ್ಲಿ ಜ್ಞಾನಕರ್ಮಗಳಲ್ಲಿ ಸಮನಿಲ್ಲದವ,
ವಿಷ್ಣು ಭಕ್ತಿಯಲ್ಲಿಯೂ ತಾನು ಮೊದಲಿಗ ಇವ.
ಭಕ್ತಿಯಿಂದ ಭಗವಂತನ ವಶಮಾಡಿಕೊಂಡವ,
ಕುಂತಿಯಲ್ಲಿ ಮಗನಾಗಿ ಹುಟ್ಟಿಬಂದ ಪ್ರಾಣನವ.


ಸ ವಾಯುರೇವಾಭವದತ್ರ ಭೀಮನಾಮಾ ಭೃತಾ ಮಾಃ ಸಕಲಾ ಹಿ ಯಸ್ಮಿನ್ ।
ಸ ವಿಷ್ಣುನೇಶೇನ ಯುತಃ ಸದೈವ ನಾಮ್ನಾ ಸೇನೋ ಭೀಮಸೇನಸ್ತತೋsಸೌ॥೧೨.೫೪॥
ಈರೀತಿ ಕುಂತೀಪುತ್ರನಾಗಿ ಹುಟ್ಟಿದ ಪ್ರಧಾನವಾಯು,
ಭೀಮನಾಮಕನಾಗಿ ಭಕ್ತಿ ಜ್ಞಾನದ ಅಮೂಲ್ಯ ಠಾವು.
ಭೀಮನೆಂದರೆ ಸಕಲ ವಿದ್ಯೆಗಳ ಹೊತ್ತವ,
ಸೇನನೆಂದರೆ ಭಗವಂತನಿಂದ ಕೂಡಿದವ.
ಭೀಮಸೇನ ಎಂದರೆ ಎಲ್ಲಾ ವಿದ್ಯೆಗಳ ಮೂಲಗಣಿ,
ಅವನೊಡೆಯನೊಂದಿಗಿರುವ ಅವನ ಪ್ರೀತಿಯ ಗಿಣಿ.