ಸಮಸ್ತಮಾಧುರಾನ್ ಪ್ರಭುಃ
ಕುಶಸ್ಥಲೀಸ್ಥಿತಾನ್ ಕ್ಷಣಾತ್ ।
ವಿಧಾಯ ಬಾಹುಯೋಧಕಃ ಸ
ಯಾವನಂ ಸಮಭ್ಯಯಾತ್ ॥೧೭.೧೧೭॥
ಸರ್ವಶಕ್ತ ಕೃಷ್ಣ ಮಧುರೆಯ ಎಲ್ಲ ನಾಗರೀಕರನ್ನು ದ್ವಾರಕೆಯಲ್ಲಿರಿಸಿದ ,
ಬಾಹುಯುದ್ಧ ಮಾಡಲು ಶ್ರೀಕೃಷ್ಣ ಕಾಲಯವನಗೆ ಎದುರಾಗಿ ಹೋದ .
ಅನನ್ತಶಕ್ತಿರಪ್ಯಜಃ
ಸುನೀತಿದೃಷ್ಟಯೇ ನೃಣಾಮ್ ।
ವ್ಯವಾಸಯನ್ನಿಜಾನ್
ಜನಾನ್ ಸ ಲೀಲಯೈವ ಕೇವಲಮ್ ॥೧೭.೧೧೮॥
ಹುಟ್ಟೇ ಇರದ ಅಪರಿಮಿತ ಬಲದ ಭಗವಂತ ,
ಆಪತ್ಕಾಲದ ಯುದ್ಧ ರಾಜನೀತಿ ತೋರಿದನಾತ ,
ಲೀಲೆಯಿಂದಲೇ ಪ್ರಜಾಸ್ಥಳಾಂತರ ಮಾಡಿದನಾತ .
ಅನಾದ್ಯನನ್ತಕಾಲಕಂ
ಸಮಸ್ತಲೋಕಮಣ್ಡಲಮ್ ।
ಯದೀಕ್ಷಯೈವ ರಕ್ಷ್ಯತೇ
ಕಿಮಸ್ಯ ವೃಷ್ಣಿರಕ್ಷಣಮ್ ॥೧೭.೧೧೯॥
ಅನಾದಿಯಿಂದ ಅನಂತಕಾಲದವರೆಗೆ ಲೋಕ ರಕ್ಷಿಸಬಲ್ಲ ಆ ನೋಟ ,
ಅಂಥಾ ಸರ್ವಶಕ್ತಗೆ ಯಾದವರ ರಕ್ಷಣೆ ಯಾವ ಲೆಕ್ಕದ ಮೋಜಿನಾಟ .
ನಿರಾಯುಧಂ ಚ ಮಾಮಯಂ
ವರಾಚ್ಛಿವಸ್ಯ ನ ಕ್ಷಮಃ ।
ಸಮಸ್ತಸೇನಯಾ ಯುತೋsಪಿ ಯೋದ್ಧುಮಿತ್ಯದರ್ಶಯತ್ ॥೧೭.೧೨೦॥
ಕಾಲಯವನನಾಗಿದ್ದರೂ ಅಪಾರ ಸೇನೆ ಶಿವವರಬಲಯುಕ್ತ ,
ತೋರಿದ ಕೃಷ್ಣ-ನಿರಾಯುಧ ತನ್ನೊಡನೆ ಕಾದಾಡಲಸಮರ್ಥ .
ಸ ಕೃಷ್ಣಪನ್ನಗಂ ಘಟೇ
ನಿಧಾಯ ಕೇಶವೋsರ್ಪ್ಪಯತ್
।
ನಿರಾಯುಧೋsಪ್ಯಹಂ ಕ್ಷಮೋ ನಿಹನ್ತುಮಪ್ರಿಯಾನಿತಿ ॥೧೭.೧೨೧॥
ಕೃಷ್ಣ ಕಾಲಯವನಗೆ ಕಳಿಸಿದ ಮಡಕೆಯಲಿಟ್ಟ ಕರಿಹಾವು ,
ನಿರಾಯುಧ ಏಕಾಂಗಿ ಶತ್ರುಗಳ ಕೊಲ್ಲಲು ಶಕ್ತ ಎಂಬ ಸುಳಿವು .
ಘಟಂ ಪಿಪೀಲಿಕಾಗಣೈಃ ಪ್ರಪೂರ್ಯ್ಯ
ಯಾವನೋsಸ್ಯ ಚ ।
ಬಹುತ್ವತೋ
ವಿಜೇಷ್ಯ ಇತ್ಯಹಿಂ ಮೃತಂ ವ್ಯದರ್ಶಯತ್ ॥೧೭.೧೨೨॥
ಕಾಲಯವನ ಕಳಿಸಿದ ಇರುವೆಗಳ ತುಂಬಿದ ಸತ್ತ ಹಾವಿನ ಗಡಿಗೆ ,
ಅಪಾರ ಸೈನ್ಯವಿರುವ ತಾನೇ ಗೆಲ್ಲುವವನೆಂದು ತೋರಿಸಿದ ಬಗೆ .
ಕಿಮತ್ರ ಸತ್ಯಮಿತ್ಯಹಂ
ಪ್ರದರ್ಶಯಿಷ್ಯ ಇತ್ಯಜಃ ।
ಉದೀರ್ಯ ದೂತಮಭ್ಯಯಾತ್ ಸ
ಯಾವನಂ ಪ್ರಬಾಧಿತುಮ್ ॥೧೭.೧೨೩॥
ಯಾವುದು ನಿಜವಾಗುವುದು ಮಾಡಿ ತೋರಿಸುವೆ ಎಂದ ,
ದೂತಗೆ ಹೇಳಿದ ಕೃಷ್ಣ ಕಾಲಯವನ ಹಣಿಯಲು ಹೋದ .