Wednesday 30 March 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 106-112

 

ಯುಧಿಷ್ಠಿರೇ ಬ್ರುವತ್ಯಜಂ ಮಖೇನ ಮೇ ತ್ವಲಂ ತ್ವಿತಿ ।

ತಮಾಹ ಮಾರುತಾತ್ಮಜೋ ನಿಹನ್ಮಿ ಮಾಗಧಂ ರಣೇ             ॥೨೧.೧೦೬॥

ಯುಧಿಷ್ಠಿರ ಕೃಷ್ಣನ ಕುರಿತು ನನಗೆ ಈ ಯಾಗವೇ ಬೇಕಿಲ್ಲ ಎಂದ,

ಆಗ ಭೀಮನೆಂದ-ಯುದ್ಧದಿ ಹತನಾಗುತ್ತಾನೆ ಜರಾಸಂಧ ನನ್ನಿಂದ.

 

ಇತೀರಿತೇsವದದ್ಧರಿರ್ವ್ರಜಾಮಹೇ ವಯಂ ತ್ರಯಃ ।

ಅಹಂ ಚ ಭೀಮಫಲ್ಗುನೌ ನಿಹನ್ತುಮೇವ ಮಾಗಧಮ್     ॥೨೧.೧೦೭॥

ಈ ರೀತಿಯಾಗಿ ಹೇಳುತ್ತಿರಲು ಭೀಮಸೇನ,

ಕೃಷ್ಣನೆಂದ-ನಾನು ಭೀಮ ಮತ್ತು ಅರ್ಜುನ,

ಹೊರಡುತ್ತಿದ್ದೇವೆ ಕೊಲ್ಲಲು ಜರಾಸಂಧನನ್ನ.

 

ವೃಕೋದರೇಣ ಹನ್ಯತೇ ಯದಿ ಸ್ಮ ಮಾಗಧಾಧಿಪಃ ।

ಮಖಶ್ಚ ಸೇತ್ಸ್ಯತೇ ದ್ಧ್ರುವಂ ಜಗಚ್ಚ ತೇ ವಶೇ ಭವೇತ್   ॥೨೧.೧೦೮॥

ಒಂದೊಮ್ಮೆ ಜರಾಸಂಧ ಭೀಮನಿಂದ ಸಂಹಾರವಾದರೆ,

ಅದಾಗುತ್ತದೆ ರಾಜಸೂಯ ಸಿದ್ಧಿಯಾಗಲು ಮುಖ್ಯ ಆಸರೆ,

ಆಗ ಸಹಜವಾಗೇ ವಶವಾಗಿಬಿಡುತ್ತದೆ ನಿನಗೆ ಈ ಧರೆ.

 

[ಈಗಾಗಲೇ ೨೨,೮೦೦ ಮಂದಿ ರಾಜರು ಜರಾಸಂಧನ ಸೆರೆಯಲ್ಲಿದ್ದಾರೆ. ಜರಾಸಂಧನನ್ನು ಕೊಂದಾಗ ಎಲ್ಲರೂ ನಿರಾಯಾಸವಾಗಿ ಯುಧಿಷ್ಠಿರನಿಗೆ ಕಪ್ಪ ಕೊಡುತ್ತಾರೆ].

 

ಇತೀರಿತೇ ತು ಶೌರಿಣಾ ಜಗಾದ ಧರ್ಮ್ಮನನ್ದನಃ।

ಸ ಶೂರಸೇನಮಣ್ಡಲಪ್ರಹಾಣತೋ ಹರೇಸ್ತ್ರಸನ್          ॥೨೧.೧೦೯॥

ಕೃಷ್ಣ ಹೀಗೆ ಹೇಳಲು, ಯಾದವರು ಮಧುರೆಯ ಬಿಟ್ಟಿದ್ದರಿಂದ,

ಕೃಷ್ಣನ ಮೇಲಿನ ಕಾಳಜಿಯಿಂದ ಧರ್ಮರಾಜ ಮಾತನಾಡಿದ.

(ಯಾದವರು ಊರು ಬಿಟ್ಟದ್ದು ಜರಾಸಂಧನ ಭಯದಿಂದೆಂಬ ತಪ್ಪು ಗ್ರಹಿಕೆಯಿಂದ.)

 

ಭಯಾದ್ಧಿ ಯಸ್ಯ ಮಾಧುರಂ ವಿಹಾಯ ಮಣ್ಡಲಂ ಗತಾಃ ।

ಭವನ್ತ ಏವ ಸಾಗರಂ ತತೋ ಬಿಭೇಮ್ಯಹಂ ರಿಪೋಃ     ॥೨೧.೧೧೦॥

ನೀವು ಮಧುರೆ ಬಿಟ್ಟು ಸಮುದ್ರ ಸೇರಿದಿರೋ ಯಾರ ಭಯದಿಂದ,

ನಾನೂ ಕೂಡಾ ಹೆದರಿದ್ದೇನೆ ಅದಕೆ ಕಾರಣನಾದ ಜರಾಸಂಧನಿಂದ.

 

ಇಮೌ ಹಿ ಭೀಮಫಲ್ಗುನೌ ಮಮಾಕ್ಷಿಣೀ ಸದಾ ಪ್ರಭೋ ।

ಮನೋನಿಭೋ ಭವಾನ್ ಸದಾ ನ ವೋ ವಿನಾsಸ್ಮ್ಯತಃ ಪುಮಾನ್             ॥೨೧.೧೧೧॥

ಭೀಮಾರ್ಜುನರು ನನ್ನೆರಡು ನಯನ,

ಸ್ವಾಮೀ ಶ್ರೀಕೃಷ್ಣಾ ನೀನು ನನ್ನ ಮನ,

ನೀವೆಲ್ಲಾ ಇರದಿರಲು ನಾನು ಅಪೂರ್ಣ.

 

ಅತೋ ನ ಜೀವಿತಾತ್ ಪ್ರಿಯಾನಹಂ ರಿಪೋರ್ಬಲೀಯಸಃ ।

ಸಕಾಶಮಾತ್ಮಹೇತುತಃ ಪ್ರಯಾತಯಾಮಿ ವೋ ವಿಭೋ             ॥೨೧.೧೧೨॥

ಹೀಗಾಗಿ, ನೀವುಗಳು ನನ್ನ ಪ್ರಾಣಕ್ಕಿಂತಲೂ ಮಿಗಿಲು,

ಬೇಕಿಲ್ಲವೆನಗೆ ನೀವು ಬಲಿಯಾಗಿ ಬರುವ ಕೀರ್ತಿಪಾಲು,

ಬಿಡಲಾರೆ ನಿಮ್ಮನ್ನು ಬಲಿಷ್ಠ ಶತ್ರುವಿನ ಬಳಿಗೆ ಹೋಗಲು.


[Contributed by Shri Govind Magal]

No comments:

Post a Comment

ಗೋ-ಕುಲ Go-Kula