Wednesday, 30 March 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 133-138

 

ಇತೀರಿತೋsಸೌ ಮಗಧಾಧಿಪೋ ರುಷಾ ಜಗಾದ ನಾಹಂ ಶಿವಯಾಗಯುಕ್ತಾನ್ ।

ಮೋಕ್ಷ್ಯೇ ಪಶೂನ್ ಯುಗಪದ್ ವಾ ಕ್ರಮೇಣ ಯೋತ್ಸ್ಯೇ ಚ ವೋsಥಾಪಿ ಚಮೂಸಹಾಯಾನ್ ॥೨೧.೧೩೩॥

ಶ್ರೀಕೃಷ್ಣ ಹೀಗೆ ಹೇಳಿದಾಗ ಜರಾಸಂಧ ಕೋಪದಿಂದ ನುಡಿದ,

ನಾನು ಶಿವಯಾಗಕ್ಕೆ ಮೀಸಲಿಟ್ಟ ಪಶುಗಳ ಬಿಡುವುದಸಾಧ್ಯ.

ಏಕಕಾಲದಲ್ಲಿ ನೀವು ಮೂರೂ ಜನರ ವಿರುದ್ಧ,

ಒಬ್ಬೊಬ್ಬರಂತೆ ಬಂದರೂ ನಾನು ಯುದ್ಧಕೆ ಸಿದ್ಧ,

ಸೇನಾಸಮೇತ ಬಂದರೂ ನಾನು ಯುದ್ಧಕೆ ಬದ್ಧ.

 

ನಿರಾಯುಧಃ ಸಾಯುಧೋ ವಾ ಯುಷ್ಮದಿಷ್ಟಾಯುಧೇನ ವಾ ।

ಏಕೋsಪಿ ಸಕಲೈರ್ಯ್ಯೋತ್ಸ್ಯೇ ಸಸೇನೋ ವಾ ಸಸೈನಿಕಾನ್   ॥೨೧.೧೩೪॥

ನಿರಾಯುಧನಾಗಿ ಅಥವಾ ಆಯುಧಸಮೇತನಾಗಿ,

ನಿಮಗ್ಯಾವ ಆಯುಧ ಸಮ್ಮತವೋ ಅದರ ಸಮೇತವಾಗಿ,

ನೀವು ಸೈನ್ಯದೊಡನೆ ಬಂದರೂ ನಾನೊಬ್ಬನೇ ಮಾಡುವೆ ಯುದ್ಧ,

ಅಥವಾ ನನ್ನ ಸೈನ್ಯದೊಡಗೂಡಿ ಕಾದಾಡಲೂ ನಾನದಕೆ ಬದ್ಧ.

 

ಇತ್ಯುಕ್ತವನ್ತಮವದದಜಿತೋರುಬಲೋ ಹರಿಃ ।

ಏಹ್ಯೇಕಮೇಕೋ ವಾsಸ್ಮಾಸು ಸಸೈನ್ಯೋ ವಾ ರಣೇ ನೃಪ             ॥೨೧.೧೩೫॥

ಹೀಗೆ ಹೇಳುತ್ತಿರುವ ಆ ಜರಾಸಂಧನಿಗೆ,

ಯಾರೂ ಸೋಲಿಸಲಾಗದ ಕೃಷ್ಣ ಹೇಳಿದ ಹೀಗೆ.

ಎಲೋ ರಾಜ,ನಮ್ಮಲ್ಲಿ ಒಬ್ಬನನ್ನು ನೀನು ಆರಿಸು,

ಸೈನ್ಯದೊಡನೆ ಅಥವಾ ನೀನೊಬ್ಬನೇ ನಮ್ಮ ಎದುರಿಸು.

 

ಯೇನ ಕಾಮಯಸೇ ಯೋದ್ಧುಂ ತಂ ನ ಆಸಾದಯ ದ್ರುತಮ್ ।

ನಿರಾಯುಧಃ ಸಾಯುಧೋ ವಾ ತ್ವದಭೀಷ್ಟಾಯುಧೇನ ವಾ ॥೨೧.೧೩೬॥

ನಾವು ಮೂರು ಜನರಲ್ಲಿ ನೀನು ಒಬ್ಬನನ್ನ ಆರಿಸು,

ನಿರಾಯುಧನಾಗಿ ಅಥವಾ ಸಾಯುಧನಾಗಿ ಎದುರಿಸು.

ನಿನಗಿಷ್ಟವಾದ ಆಯುಧಸಮೇತವಾಗಿ ಸೆಣಸು.

 

ಇತ್ಯಾsಹ ಭಗವಾಞ್ಛತ್ರುಂ ಯಶೋ ಭೀಮೇ ವಿವರ್ದ್ದಯನ್ ।

ಘಾತಯಿತ್ವಾ ಸ್ವಶತ್ರುಂ ಚ ಭೀಮೇನಾನುಗ್ರಹಂ ಪರಮ್      ॥೨೧.೧೩೭॥

 

ಭೀಮಸ್ಯ ಕರ್ತ್ತುಮಿಚ್ಛಂಶ್ಚ ಭಕ್ತಿಜ್ಞಾನಾದಿವರ್ದ್ಧನಮ್ ।

ತೃಣೀಕರ್ತ್ತುಂ ರಿಪುಂ ಚೈವ ನಿರಾಯುಧತಯಾsಗಮತ್             ॥೨೧.೧೩೮॥

ಹೀಗೆ ತನ್ನ ಶತ್ರು ಜರಾಸಂಧನನ್ನು ಭೀಮನಿಂದ ಕೊಲ್ಲಿಸುವ ಉದ್ದೇಶ,

ಅವನನನುಗ್ರಹಿಸಿ ಅವನ ಜ್ಞಾನ ಭಕ್ತಿಗಳ ಅನಾವರಣಕ್ಕೆ ಅವಕಾಶ,

ಶತ್ರುವನ್ನು ತೃಣವಾಗಿ ತೋರಲೆಂದೇ ತೊಟ್ಟದ್ದು ನಿರಾಯುಧ ವಿಪ್ರವೇಷ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula