ಇತೀರಿತೇsಮುನಾ ಹರಿಃ ಸಮುದ್ಯಮಾತ್ ಪ್ರಧಾನತಃ ।
ಸ್ಥಿತೇ ಹಿ ಯಜ್ಞಕಾರಣೇ ವೃಕೋದರೇ ಜಗಾದ ಹ
॥೨೧.೯೯॥
ಈ ರೀತಿಯಾಗಿ ಭೀಮಸೇನ
ಹೇಳುತ್ತಿರಲು,
ಯಾಗಕ್ಕೆ ಮುಖ್ಯಪ್ರಯತ್ನ
ಭೀಮನದೇ ಇರಲು,
ಕೃಷ್ಣನೆಂದ -ಈ ಯಾಗ
ನಡೆಸುವುದು ಮೇಲು.
ಸ ಏಕ ಏವ ಪೂರುಷೋ ಜರಾಸುತೋsದ್ಯ ವರ್ತ್ತತೇ ।
ಸಮಸ್ತಸದ್ವರೋಧಿನಾಂ ಬಲಂ ಕಲೇರನನ್ತರಃ ॥೨೧.೧೦೦॥
ಈ ಯಾಗಕ್ಕೆ ಒಬ್ಬನೇ ಒಬ್ಬ
ಪುರುಷನಿಂದಿದೆ ಪ್ರತಿರೋಧ,
ದುಷ್ಟರಾಶ್ರಯದಾತ, ಕಲಿಯ ನಂತರದಾತ
ಜರಾಸಂಧನಿಂದ.
ತಥಾ ಸತಾಂ ಸಮಾಶ್ರಯೋ ಯದುದ್ಭವಾಃ ಸತಾಂ ಗುಣಾಃ ।
ಸ ಏಕ ಏವ ತಾದೃಶಸ್ತ್ವಯಾ ವಿಚಿನ್ತ್ಯ ಯಾತ್ಯತಾಮ್
॥೨೧.೧೦೧॥
ಅದರಂತೆಯೇ
ಸಜ್ಜನರಿಗೆಲ್ಲರಿಗೂ ಆಶ್ರಯದಾತನಾಗಿರುವವನು ಇಲ್ಲಿರುವ,
ನೀನದನ್ನು ಪರಾಮರ್ಶಸಿ
ಮಾಡಬೇಕು ಯುದ್ಧಕ್ಕವನ ಕಳಿಸೋ ನಿರ್ಧಾರವ.
ಯದಿ ಸ್ಮ ತೇನ ಮಾಗಧೋ ನಿಹನ್ಯತೇ ಸತಾಂ ಜಯಃ ।
ವಿಪರ್ಯ್ಯಯೇಣ ಚಾಸತಾಮಿತಿ ಸ್ಮ ವಿದ್ಧಿ ನಾನ್ಯಥಾ ॥೨೧.೧೦೨॥
ಭೀಮನಿಂದ ಜರಾಸಂಧ ಹತನಾದರೆ
ಸಜ್ಜನರ ಜಯ,
ಹಾಗೊಂದುವೇಳೆ ಆಗದಿದ್ದರೆ
ಅದು ದುರ್ಜನರ ಜಯ,
ಇದು ಹೀಗಾಗಬೇಕು, ಅನ್ಯರೀತಿಯಾಗಲ್ಲ
ಅದೇ ನಿಶ್ಚಯ.
(ವೇದ ಧರ್ಮಕ್ಕೆ ಜಯ, ಮಿಥ್ಯಾಜ್ಞಾನ
ರಕ್ಕಸತ್ವಕ್ಕೆ ಪರಾಜಯ).
ಸ ಪಾರಮೇಷ್ಠ್ಯಸತ್ಪದಂ ಪ್ರಯಾತ್ಯಸಂಶಯಂ ಯುಧಿ ।
ಯ ಏವ ಹನ್ತಿ ಮಾಗಧಂ ಸ ವೇದಧರ್ಮ್ಮಪಾಲಕಃ
॥೨೧.೧೦೩॥
ಯಾರು ಈ ಸಮರದಲ್ಲಿ ಜರಾಸಂಧನ
ಕೊಲ್ಲುತ್ತಾನೆ,
ಅವನು ವೇದ ಧರ್ಮದ
ಪಾಲನೆಯನ್ನು ಮಾಡುತ್ತಾನೆ.
ಅವನೇ ನಿಸ್ಸಂಶಯವಾಗಿ
ಬ್ರಹ್ಮಲೋಕ ಸೇರುವ,
ಹಾಗೆಯೇ ಅರ್ಹವಾದ
ಬ್ರಹ್ಮಪದವಿ ಹೊಂದುವ.
ನಿಹನ್ತಿ ಮಾಗಧೇಶ್ವರಂ ಯ ಏಷ ವೈಷ್ಣವಂ ಜಗತ್ ।
ಕರೋತಿ ಶರ್ವಪಾಲಿತೋ ಯತಃ ಸ ಬಾರ್ಹದ್ರಥಃ
॥೨೧.೧೦೪॥
ಯಾವ ಕಾರಣಕ್ಕೆ ಜರಾಸಂಧ
ಶೈವಜಗತ್ತಿನ ಪ್ರತಿನಿಧಿಯಾಗಿ ಶಿವನಿಂದ ಪಾಲಿತ,
ಅಂಥವನನ್ನು ಕೊಂದವನು
ಮಾಡುತ್ತಾನೆ ಇಡೀ ಜಗತ್ತನ್ನೇ ವಿಷ್ಣುಭಕ್ತಿಭರಿತ.
ನಿಹನ್ತಿ ಶೈವನಾಯಕಂ ಯ ಏಷ ವೈಷ್ಣವಾಗ್ರಣೀಃ ।
ಇತಿ ಸ್ಮ ಭಾವಸಂಯುತೇ ವದತ್ಯಜೇsಬಿಭೇನ್ನೃಪಃ ॥೨೧.೧೦೫ ॥
ಯಾರು ಶೈವನಾಯಕ ಜರಾಸಂಧನ
ಕೊಲ್ಲುವ,
ಅವನು ವೈಷ್ಣವಾಗ್ರೇಸರನಾಗಿ
ಮೆರೆಯುವ,
ಹೀಗೆ ಕೃಷ್ಣ ಹೇಳಲು
ಧರ್ಮಜಗಾಯಿತು ಭಯ.
No comments:
Post a Comment
ಗೋ-ಕುಲ Go-Kula