Wednesday 30 March 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 123-126

 

ಸಮೇತ್ಯ ಮಾಗಧಾಂಸ್ತು ತೇ ಶಿವೋರುಲಿಙ್ಗಮಿತ್ಯಲಮ್ ।

ಸುಮಾಲ್ಯವಸ್ತ್ರಭೂಷಣೈಃ ಸಮರ್ಚ್ಚಿತಂ ಗಿರಿಂ ಯಯುಃ           ॥೨೧.೧೨೩॥

ಶ್ರೀಕೃಷ್ಣ ಭೀಮಾರ್ಜುನರು ಜರಾಸಂಧನ ಮಗಧದೇಶವನ್ನು ಸೇರಿದರು,

ನಿತ್ಯವೂ ಹೂಹಾರ ವಸ್ತ್ರಾಭರಣಗಳಿಂದ ಪೂಜೆಗೊಳ್ಳುತ್ತಿದ್ದ ಲಿಂಗಬೆಟ್ಟವ ಸಾರಿದರು.

 

ಸ್ವಶೀರ್ಷತೋsಪಿ ಚಾsದೃತಂ ಜರಾಸುತೇನ ತೇ ಗಿರಿಮ್ ।

ನ್ಯಪಾತಯನ್ತ ಬಾಹುಭಿಸ್ತಮಸ್ಯ ಚೋತ್ತಮಾಙ್ಗವತ್                  ॥೨೧.೧೨೪॥

ಜರಾಸಂಧ ತನ್ನ ತಲೆಗಿಂತಲೂ ಆ ಗಿರಿಯನ್ನು ಪ್ರೀತಿಸಿ ಮಣಿಯುತ್ತಿದ್ದ,

ಕೈಗಳಿಂದ ಕೆಡವಿದರು ಲಿಂಗಾಕಾರದ ಬೆಟ್ಟವ ಮಾಡಿದಂತವನ ಶಿರಚ್ಛೇದ.

 

ಅದ್ವಾರತಸ್ತೇ ನಗರಂ ಪ್ರವಿಶ್ಯ ಮಾಷಸ್ಯ ನಾಳೇನ ಕೃತಾಸ್ತ್ರಿಭೇರೀಃ ।

ಪುಷ್ಟಿಪ್ರದಾ ಬಿಭಿದುಸ್ತಸ್ಯ ಕೀರ್ತ್ತಿಶಾಸ್ತ್ರೋಪಮಾ ನ್ಯಕ್ಕೃತಮಾಗಧೇಶಾಃ             ॥೨೧.೧೨೫॥

ಕೃಷ್ಣ ಭೀಮಾರ್ಜುನರು ನಗರದ ಮುಖ್ಯದ್ವಾರದಿಂದ ಮಾಡಲಿಲ್ಲ ಪ್ರವೇಶ,

ಮಾಡಿದರು ಮಾಷರಕ್ಕಸನ ಕಂಠನಾಳಗಳಿಂದ ತಯಾರಿಸಿದ ಭೇರಿಗಳ ನಾಶ.

ಅದರ ಹಿಂದಿತ್ತು-ಜರಾಸಂಧನ ಕೀರ್ತಿನಾದದ ಹುಟ್ಟಡಗಿಸುವ ಉದ್ದೇಶ.

 

ತಥಾsಪಣೇಭ್ಯೋ ಬಹುಮಾಲ್ಯಗನ್ಧಾನ್ ಪ್ರಸ̐ಹ್ಯ ಸಙ್ಗೃಹ್ಯ ಶುಭಾಂಶ್ಚ ದಧ್ರುಃ ।

ಅದ್ವಾರತಸ್ತಸ್ಯ ಗೃಹಂ ಚ ಸಸ್ರುರ್ಭೋಶಬ್ದತಸ್ತಂ  ಚ ನೃಪಂ ಪ್ರಸಸ್ರುಃ  ॥೨೧.೧೨೬॥

ಅಂಗಡಿಗಳಿಂದ ಮಾಲೆಗಳನ್ನೂ ಗಂಧವನ್ನೂ ಬಲವಂತವಾಗಿ ಪಡೆದವರು,

ಗಂಧವನ್ನು ಚೆನ್ನಾಗಿ ಹಚ್ಚಿಕೊಂಡು ಹಾರಗಳನ್ನು ತಾವೇ ಧರಿಸಿಕೊಂಡರು,

ಅವನ ಹಿತ್ತಿಲಬಾಗಿಲಿಂದ ಪ್ರವೇಶಿಸಿ 'ಎಲೋ ಜರಾಸಂಧ'ಎನ್ನುತ್ತಾ ಬಂದರು.


[Contributed by Shri Govind Magal]

No comments:

Post a Comment

ಗೋ-ಕುಲ Go-Kula