ಪ್ರಯಾಹಿ ಚ ತ್ವಂ ಧನದಪ್ರಪಾಲಿತಾಂ ದಿಶಂ ದ್ವೀಪಾನ್ ಸಪ್ತ ಚಾಶೇಷದಿಕ್ಷು ।
ನಾಗಾಂಶ್ಚ ದೈತ್ಯಾಂಶ್ಚ ತಥಾsಧರಸ್ಥಾನ್ ವಿಜಿತ್ಯ ಶೀಘ್ರಂ ಪುನರೇಹಿ
ಚಾತ್ರ ॥೨೧.೧೯೧॥
ಕುಬೇರ ಪಾಲಿಸುತ್ತಿರುವ
ಉತ್ತರ ದಿಕ್ಕನ್ನು,
ಏಳು ದ್ವೀಪಗಳು ವ್ಯಾಪಿಸಿರುವ
ಎಲ್ಲ ದಿಕ್ಕನ್ನು,
ನಾಗ, ದೈತ್ಯ, ಪಾತಾಳಲೋಕದವರನ್ನು,
ಬೇಗನೇ ನೀನು ಗೆದ್ದು
ಬರಬೇಕಿದೆಯಿನ್ನು.
ರಥೋ ಹಿ ದಿವ್ಯೋsಮ್ಬರಗಸ್ತವಾಸ್ತಿ ದಿವ್ಯಾನಿ ಚಾಸ್ತ್ರಾಣಿ ಧನುಶ್ಚ ದಿವ್ಯಮ್ ।
ಯೇsನ್ಯೇ ಚ ಬಾಣಪ್ರಮುಖಾ ಅಜೇಯಾಃ ಶರ್ವಾಶ್ರಯಾಸ್ತಾನಪಿ ಭೀಮ ಏತು ॥೨೧.೧೯೨॥
ನಿನ್ನಲ್ಲಿದೆ ಅಲೌಕಿಕ, ಆಕಾಶದಿ ಓಡುವ ರಥ,
ಉಂಟು ದಿವ್ಯಾಸ್ತ್ರ, ಅಲೌಕಿಕ ಬಿಲ್ಲಿನ
ಸಾಮರ್ಥ್ಯ.
ಬಾಣನಾಗಿದ್ದಾನೆ ಅವಧ್ಯ
ರುದ್ರದೇವರ ವರಬಲದಿಂದ,
ಅತ್ತ ನೀನು ಹೋಗುವುದು ಬೇಡ
ಅದಾಗಲಿ ಭೀಮನಿಂದ.
ತಥಾ ಸುರಾಶ್ಚಾಪಿ ಸಮಸ್ತತೋsಸ್ಯ ಬಲಿಂ ಪ್ರಯಚ್ಛನ್ತಿ ಮದಾಜ್ಞಯೇತರೇ ।
ದಿಶಂ ಪ್ರತೀಚೀಮಥ ದಕ್ಷಿಣಾಂ ಚ ಯಾತಾಂ ಯಮೌ ಕ್ರಮಶೋ ಹ್ಯಧ್ವರಾರ್ತ್ಥೇ ॥೨೧.೧೯೩॥
ದೇವತೆಗಳು ನನ್ನಾಜ್ಞೆಯಿಂದ
ಭೀಮಗೊಪ್ಪಿಸುತ್ತಾರೆ ಕರ,
ಉಳಿದ ಗಂಧರ್ವ ಯಕ್ಷಾದಿಗಳದೂ
ಕೂಡಾ ಅದೇ ತೆರ.
ಕ್ರಮವಾಗಿ ಪಶ್ಚಿಮ ಮತ್ತು
ದಕ್ಷಿಣ ದಿಕ್ಕುಗಳ ಕಡೆ,
ನಕುಲ ಸಹದೇವರದಿರಲಿ
ದಿಗ್ವಿಜಯದ ನಡೆ.
ಯಶಶ್ಚ ಧರ್ಮ್ಮಶ್ಚ ತಯೋರಪಿ ಸ್ಯಾದಿತಿ ಸ್ಮ ಕೃಷ್ಣೇನ ಸುತೇನ ಕಾಳ್ಯಾಃ ।
ಉಕ್ತೇ ಯಯುಸ್ತೇ ತಮಭಿಪ್ರಣಮ್ಯ ದಿಶೋ ಯಥೋಕ್ತಾಃ ಪರಮೋರುಸದ್ಗುಣಾಃ ॥೨೧.೧೯೪॥
ನಕುಲ ಸಹದೇವರಿಗೂ ಸಿಗಲಿ
ಕೀರ್ತಿ ಪುಣ್ಯ,
ಹೀಗಿತ್ತು ಸತ್ಯವತೀಪುತ್ರ
ವೇದವ್ಯಾಸರ ಆಜ್ಞ.
ಎಲ್ಲರೂ ಮಾಡುತ್ತಾರೆ
ವೇದವ್ಯಾಸರಿಗೆ ನಮಸ್ಕಾರ,
ತಮಗೆ ಸೂಚಿತವಾದ ದಿಕ್ಕಿಗೆ
ಹೊರಡುವ ವ್ಯಾಪಾರ.
ವೃಕೋದರೋ ಜಯನ್ನೃಪಾನ್ ವಿರಾಟಮಾಸಸಾದ ಹ ।
ಜಿತೇsತ್ರ ಕೀಚಕೇ ರಣೇ ಸಮಾದದೇ ಕರಂ ತತಃ ॥೨೧.೧೯೫॥
ಭೀಮ ರಾಜರುಗಳ ಗೆಲ್ಲುತ್ತಾ
ವಿರಾಟನಲ್ಲಿಗೆ ಬಂದ,
ಕೀಚಕ ತನ್ನಿಂದ ಸೋಲಲು ಕಪ್ಪವನ್ನು
ಸ್ವೀಕರಿಸಿದ.
ತತಃ ಕ್ರಮಾನ್ನೃಪಾನ್ ಜಿತ್ವಾ ಚೇದೀನಾಂ ವಿಷಯಂ ಗತಃ ।
ಮಾತೃವಾಕ್ಯಾದ್ ಭಯಾಚ್ಚೈವ ಶಿಶುಪಾಲೇನ ಪೂಜಿತಃ ॥೨೧.೧೯೬॥
ಆನಂತರ ಕ್ರಮವಾಗಿ ರಾಜರುಗಳ
ಗೆಲ್ಲುತ್ತಾ ಭೀಮ ಚೇದಿ ದೇಶಕ್ಕೆ ಬಂದ,
ತಾಯಿಯ ನುಡಿಯಿಂದ, ಭಯದಿಂದ ಶಿಶುಪಾಲ
ಭೀಮನನ್ನು ಪೂಜಿಸಿದ.
ಮಾತೃಷ್ವಸುರ್ಗ್ಗೃಹೇ ಚೋಷ್ಯ ದಿವಸಾನ್ ಕತಿಚಿತ್ ಸುಖಮ್ ।
ಕರಂ ಸುಮಹದಾದಾಯ ತತಃ ಪೂರ್ವಾಂ ದಿಶಂ ಯಯೌ ॥೨೧.೧೯೭॥
ಭೀಮ ಮಾಡಿದ ದೊಡ್ಡಮ್ಮನ
ಮನೆಯಲ್ಲಿ ಕೆಲದಿನದ ಸುಖವಾಸ,
ಅಧಿಕ ಕಪ್ಪವ ಸ್ವೀಕರಿಸಿ
ಹೊರಟ ಅಲ್ಲಿಂದ ಪೂರ್ವಕ್ಕೆ ಪ್ರವಾಸ.
No comments:
Post a Comment
ಗೋ-ಕುಲ Go-Kula