ತಾನ್ ವಿಪ್ರವೇಷಾನ್ ಸ ನಿಶಾಮ್ಯ ರಾಜಾ ಮಹಾಭುಜಾನ್ ಸ್ನಾತಕವೇಷಯುಕ್ತಾನ್ ।
ದ್ವಿತೀಯವರ್ಣ್ಣಾನ್ ಪ್ರವಿಚಿನ್ತ್ಯ ಬಾಹೂನ್ ಜ್ಯಾಕರ್ಕ್ಕಶಾನ್ ವೀಕ್ಷ್ಯ ಬಭಾಷ ಏತಾನ್ ॥೨೧.೧೨೭॥
ದಪ್ಪ ತೋಳುಗಳುಳ್ಳ
ವಿಪ್ರವೇಷದಲ್ಲಿದ್ದ ಅವರನ್ನು ಕಂಡ ಜರಾಸಂಧ,
ಬಿಲ್ಲ ಹೆದೆಯಿಂದ ಒರಟಾದ
ಕೈಗಳವರನ್ನು ಕ್ಷತ್ರಿಯರೆಂದು ಭಾವಿಸಿದ.
ಹಾಗೆ ತಿಳಿದುಕೊಳ್ಳುತ್ತಾ
ಅವರನ್ನು ಉದ್ದೇಶಿಸಿ ಹೀಗೆ ಹೇಳಿದ.
ಕೇ ಷ್ಠಾಥ ಕಿಂಹೇತುತ ಆಗತಾಶ್ಚ ಕುತಶ್ಚ ಮೇ ಪರ್ವತಲಿಙ್ಗಭೇದನಮ್ ।
ಕೃತಂ ಭವದ್ಭಿಃ ಕುತ ಏವ ದುರ್ನ್ನಯಾಃ
ಕೃತಾಸ್ತಥಾsನ್ಯೇ ದ್ವಿಜವರ್ಯ್ಯವೇಷೈಃ ॥೨೧.೧೨೮॥
ನೀವ್ಯಾರು? ಇಲ್ಲಿಗೆ ಬಂದಿದ್ದು
ಯಾಕೆ?
ನನ್ನ ಪರ್ವತಲಿಂಗವ
ಒಡೆದಿದ್ದು ಯಾಕೆ?
ವಿಪ್ರರಂತಿದ್ದು ಕೆಟ್ಟದಾಗಿ
ನಡೆದುಕೊಂಡಿದ್ಯಾಕೆ?
ಇತಿ ಬ್ರುವಾಣಂ ಭಗವಾನುವಾಚ ಕಾರ್ಯ್ಯಂ ಹಿ ಶತ್ರೋರಖಿಲಂ ಪ್ರತೀಪಮ್ ।
ಇತ್ಯುಕ್ತ ಊಚೇ ನಹಿ ವಿಪ್ರಶತ್ರುರಹಂ ಕುತೋ ವೋ ಮಮ ಶತ್ರುತಾ ಭವೇತ್ ॥೨೧.೧೨೯॥
ಕೃಷ್ಣನೆಂದ -ಶತ್ರುವಿನೊಡನೆ
ಎಲ್ಲವನ್ನೂ ಮಾಡಬೇಕು ವಿರುದ್ಧ,
ಬ್ರಾಹ್ಮಣ ಶತ್ರುವಲ್ಲದ ನನಗೆ
ನೀವ್ಹೇಗೆ ಶತ್ರುಗಳೆಂದ ಜರಾಸಂಧ.
ಇತ್ಯುಕ್ತವಾಕ್ಯಂ ನೃಪತಿಂ ಜಗಾದ ಜನಾರ್ದ್ದನೋ ನೈವ ಹಿ ತಾದೃಶಾ ದ್ವಿಜಾಃ ।
ವಯಂ ರಿಪುಸ್ತೇsಸ್ಮಿ ಹಿ ವಾಸುದೇವ ಇಮೌ ಚ ಭೀಮಾರ್ಜ್ಜುನನಾಮಧೇಯೌ ॥೨೧.೧೩೦॥
ಶ್ರೀಕೃಷ್ಣನೆನ್ನುತ್ತಾನೆ
-ನಾವು ನೀವಂದುಕೊಂಡಂಥಾ ಬ್ರಾಹ್ಮಣರಲ್ಲ,
ಭೀಮಾರ್ಜುನರೊಡನಿರುವ ನಾನು
ನಿನ್ನ ದ್ವೇಷಿ ವಾಸುದೇವ ಗೊಲ್ಲ.
ಯದ್ ಬಾನ್ಧವಾನ್ ನಃ ಪಿಶಿತಾಶಿಧರ್ಮ್ಮತೋ ರೌದ್ರೇ ಮಖೇ ಕಲ್ಪಯಿತುಂ ಪಶುತ್ವೇ ।
ಇಚ್ಛಸ್ಯರೇ ವೇದಪಥಂ ವಿಹಾಯ ತಂ ತ್ವಾಂ ಬಲಾಚ್ಛಾಸ್ತುಮಿಹಾsಗತಾ
ವಯಮ್ ॥೨೧.೧೩೧॥
ಯಾಕಾಗಿ ನಮ್ಮ ಬಂಧು
ರಾಜರನ್ನು ಮಾಡಿರುವೆಯೋ ಬಂಧನ,
ರುದ್ರಯಾಗದಲ್ಲಿ ಅವರ
ಬಲಿಕೊಡುವುದದು ರಾಕ್ಷಸ ಗುಣ.
ವೇದಮಾರ್ಗವ ಬಿಟ್ಟು ನೀನು
ಹಿಡಿದಿರುವುದು ನರಮೇಧದ ದಾರಿ,
ಹಾಗೆ ಮಾಡದಂತೆ ಬಲದಿಂದ
ನಿನ್ನ ನಿಗ್ರಹಿಸುವುದೇ ನಮ್ಮ ಗುರಿ.
ವಿಮೋಕ್ಷಯಾಮಃ ಸ್ವಜನಾನ್ ಯದಿ ತ್ವಂ ನ ಮೋಚಯಸ್ಯದ್ಯ ನಿಗೃಹ್ಯ ಚ ತ್ವಾಮ್ ।
ಮುಞ್ಚಾಥ ವಾ ತಾನಭಿಯಾಹಿ ವಾsಸ್ಮಾನ್ ರಣಾಯ ಮರ್ತ್ತುಂ ಕೃತನಿಶ್ಚಯೋsತ್ರ ॥೨೧.೧೩೨॥
ಒಂದೊಮ್ಮೆ ನೀನು ನಮ್ಮ
ಬಂಧುರಾಜರ ಬಿಡುವುದಿಲ್ಲವಾದರೆ,
ನಾವು ನಿನ್ನ ವಧಿಸಿ, ನಮ್ಮವರ
ಬಿಡಿಸುತ್ತೇವೆ ಛೇದಿಸಿ ಅವರ ಸೆರೆ.
ಒಂದೋ ಅವರೆಲ್ಲರನ್ನು ಬಿಟ್ಟುಬಿಡು,
ಅಥವಾ ನಮ್ಮೊಂದಿಗೆ ಯುದ್ಧದಿ
ಹೋರಾಡು,
ಬಾ, ಸಾಯಲು ನಿರ್ಧರಿಸಿ ನಮ್ಮೊಡನೆ
ಯುದ್ಧ ಮಾಡು.
No comments:
Post a Comment
ಗೋ-ಕುಲ Go-Kula