Wednesday 30 March 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 139-152

 

[ಅವರು ಬ್ರಾಹ್ಮಣ ವೇಷದಲ್ಲಿ ಏಕೆ ಬಂದಿರುವುದು ಎನ್ನುವುದನ್ನು ವಿವರಿಸುತ್ತಾರೆ:]

 

ಕೃಷ್ಣಭೀಮಾರ್ಜ್ಜುನಾಸ್ತೇನ ವಿಪ್ರವೇಷಾಶ್ಚ ತೇsಭವನ್ ।

ನಿರಾಯುಧಃ ಕ್ಷತ್ರವೇಷೋ ನೈವ ಯೋಗ್ಯಃ ಕಥಞ್ಚನ    ॥೨೧.೧೩೯॥

ಕ್ಷಾತ್ರ ವೇಷ -ಧರ್ಮಕ್ಕೆ ಆಯುಧವೇ ಪ್ರಧಾನ ಭೂಷಣ,

ನಿರಾಯುಧರಾಗಿರಬೇಕಾಗಿಯೇ ವಿಪ್ರವೇಷದ ಕಾರಣ.

 

ತತೋ ಜಗ್ಮುರ್ವಿಪ್ರವೇಷಾಸ್ತೃಣೀಕರ್ತ್ತುಂ ಹಿ ಮಾಗಧಮ್ ।

ಮಾಗಧಸ್ಯ ಸಸೈನ್ಯಸ್ಯ ಸ್ವಗೃಹೇ ಸಂಸ್ಥಿತಸ್ಯ                         ॥೨೧.೧೪೦॥

 

ನಿರಾಯುಧೇನ ಭೀಮೇನ ಸಮಾಹ್ವಾನೇ ಕೃತೇsಮಿತಮ್ ।

ಧರ್ಮ್ಮಂ ಯಶಶ್ಚ ಭೀಮಸ್ಯ ವರ್ದ್ಧಯಾಮಾಸ ಕೇಶವಃ             ॥೨೧.೧೪೧॥

ಜರಾಸಂಧನನ್ನು ಕಡೆಗಣಿಸುವುದೇ ಕೃಷ್ಣನ ಉದ್ದೇಶ,

ಅದಕ್ಕಾಗೇ ತೊಟ್ಟದ್ದವರು ಆಯುಧವಿರದ ವಿಪ್ರವೇಷ.

ಜರಾಸಂಧನಿದ್ದದ್ದು ಸೈನ್ಯದೊಂದಿಗೆ ತನ್ನ ಸ್ವಸ್ಥಾನದಲ್ಲಿ,

ಭೀಮಸೇನನಿದ್ದದ್ದು ನಿರಾಯುಧನಾಗಿ ಶತ್ರುಸ್ಥಾನದಲ್ಲಿ,

ಭೀಮಗದು ಕೀರ್ತಿ ಜರಾಸಂಧನು ಭೀಮನನ್ನು ಎದುರಿಸುವಲ್ಲಿ,

ಕೃಷ್ಣನುದ್ದೇಶ ಭೀಮನ ಕೀರ್ತಿಯೆಂಬುದು ಎದ್ದು ಕಾಣುವುದಿಲ್ಲಿ.

 

[ಅರ್ಜುನನನ್ನು ಏಕೆ ಶ್ರೀಕೃಷ್ಣ ಕರೆದುಕೊಂಡು ಹೋಗಿದ್ದ ಎನ್ನುವುದನ್ನು ವಿವರಿಸುತ್ತಾರೆ:]

 

ತೃತೀಯಮರ್ಜ್ಜುನಂ ಚೈವ ಸಮಾದಾಯ ಯಯೌ ರಿಪುಮ್ ।

ಹರಿಸ್ತಸ್ಮಾಚ್ಚ ಭೀಮಸ್ಯ ಮಹಾಧಿಕ್ಯಂ ಪ್ರಕಾಶಯನ್                  ॥೨೧.೧೪೨॥

 

ಮುಖೇನ ಮಾಗಧಸ್ಯೈವ ವೃಣ್ವೇಕಂ ನ ಇತಿ ಬ್ರುವನ್ ।

ವೃಣ್ವೇಕಮಸ್ಮಾಸ್ವಿತಿ ಸಃ ಪ್ರೋಕ್ತ ಆಹ ಜರಾಸುತಃ                    ॥೨೧.೧೪೩॥

ಕೃಷ್ಣ ಮೂರನೇಯವನನ್ನಾಗಿ ಕರೆತಂದದ್ದು ಅರ್ಜುನನನ್ನ,

ಭೀಮಾಧಿಕ್ಯವನ್ನು ಮೆರೆಸುವುದೇ ಇದರ ಹಿಂದಿನ ಕಾರಣ.

ಕೃಷ್ಣ ಜರಾಸಂಧಗೆ ನಮ್ಮಲ್ಲೊಬ್ಬನನ್ನು ಆರಿಸಿಕೋ ಎಂದ,

ಕೃಷ್ಣ ಈ ರೀತಿಯ ಆಯ್ಕೆ ಕೊಟ್ಟಾಗ ಜರಾಸಂಧ ಹೀಗೆಂದ.

 

ಕುರ್ಯ್ಯಾಂ ನೈವಾರ್ಜ್ಜುನೇನಾಹಮಬಲೇನೈವ ಸಙ್ಗರಮ್ ।

ಪಞ್ಚಪಞ್ಚಾಶದಬ್ದೋsದ್ಯ ಹ್ಯಯಮೇವಂ ಚ ಬಾಲವತ್              ॥೨೧.೧೪೪॥

 

ಅಬಲತ್ವಾದ್ ಯುವಾsಪ್ಯೇಷ ಬಾಲ ಏವ ಮತೋ ಮಮ ।

ಇತ್ಯುಕ್ತೋsಪ್ಯರ್ಜ್ಜುನೋ ನಾsಹ ಕುರು ತರ್ಹಿ ಪರೀಕ್ಷಣಮ್              ॥೨೧.೧೪೫॥

ಮಾಡಲಾರೆ ದುರ್ಬಲನಾದ ಅರ್ಜುನನೊಡನೆ ಯುದ್ಧ,

ಐವತ್ತೈದು ವರ್ಷವಾದರೂ ಅವನು ಬಾಲಕನೆಂದೇ ಸಿದ್ಧ.

ಯುವಕನೆಂದುಕೊಂಡರೂ ಅವನು ಬಲಹೀನ ಹುಡುಗ,

ಹೀಗೆಲ್ಲ ಅಂದಾಗಲೂ ಪ್ರತಿಕ್ರಿಯಿಸಲಿಲ್ಲ ಅರ್ಜುನನಾಗ.

 

ಬಾಹುಭ್ಯಾಂ ಧನುಷಾ ವೇತಿ ಶಙ್ಕಮಾನಃ ಪರಾಜಯಮ್ ।

ಅತೋ ಭೀಮೇ ಬಲಾಧಿಕ್ಯಂ ಸುಪ್ರಸಿದ್ಧಮಭೂನ್ಮಹತ್              ॥೨೧.೧೪೬॥

ಮಲ್ಲಯುದ್ಧ ಅಥವಾ ಬಿಲ್ಲುಯುದ್ಧ ಎರಡಕ್ಕೂ ನಾನು ಸಿದ್ಧ ಎನಬಹುದಿತ್ತು ಅರ್ಜುನ,

ಸೋಲಿನ ಭೀತಿ ಅವನಲ್ಲಿತ್ತು ಎಂಬುದಕ್ಕೆ ಅವನು ಮೌನವಹಿಸಿದುದೇ ಮುಖ್ಯ ಕಾರಣ.

ಹೀಗೆ ಆಯಿತಲ್ಲಿ ಭೀಮನ ಬಲಾಧಿಕ್ಯದ ಸ್ಪಷ್ಟತೆಯ ಅನಾವರಣ,

ದೇವತಾ ತಾರತಮ್ಯದ ಸೂಕ್ಷ್ಮತೆಗಳನ್ನೂ ಕೊಡುತ್ತಾನಲ್ಲಿ ಶ್ರೀಕೃಷ್ಣ.

 

 

ಏತದರ್ತ್ಥಂ ಹಿ ಕೃಷ್ಣೇನ ಸಹಾsನೀತಃ ಸ ಫಲ್ಗುನಃ ।

ಜಾನನ್ ಕೃಷ್ಣೇ ಬಲಂ ಘೋರಮವಿಷಹ್ಯಂ ಸ ಮಾಗಧಃ             ॥೨೧.೧೪೭॥

 

ಕುತ್ಸಯನ್ ಗೋಪ ಇತಿ ತಂ ಭಯಾನ್ನೈವಾsಹ್ವಯತ್ ಪ್ರಭುಮ್ ।

ಆಹ್ವಯಾಮಾಸ ಭೀಮಂ ತು ಸ್ಯಾದ್ ವಾ ಮೇ ಜೀವನಂ ತ್ವಿತಿ              ॥೨೧.೧೪೮॥

 

ಹನಿಷ್ಯತ್ಯೇವ ಮಾಂ ಕೃಷ್ಣ ಇತ್ಯಾಸೀನ್ನೃಪತೇರ್ಭಯಮ್ ।

ತಸ್ಮಾತ್ ತಂ ನಾsಹ್ವಯಾಮಾಸ ವಾಸುದೇವಂ ಸ ಮಾಗಧಃ             ॥೨೧.೧೪೯॥

ಜಗತ್ತಿಗೆ ಮತ್ತು ಅರ್ಜುನನಿಗೆ ತಿಳಿಸಬೇಕಿತ್ತವನ ಇತಿ ಮಿತಿ,

ಆ ಕಾರಣಕ್ಕಾಗಿಯೇ ಅವನ ಕರೆದೊಯ್ದಿದ್ದ ರುಗ್ಮಿಣೀಪತಿ.

ಜರಾಸಂಧಗರಿವಿತ್ತು-ತಡೆಯಲಸಾಧ್ಯವಾದ ಕೃಷ್ಣಬಲ ಮತ್ತವನ ಪಟ್ಟು,

ಗೊಲ್ಲನೆಂದು ನಿಂದಿಸಿದರೂ ತಿಳಿದಿತ್ತು ಇವ ಎನ್ನ ಕೊಲ್ಲುವ ಎಂಬ ಗುಟ್ಟು.

ಭೀಮಸೇನನೊಡನೆ ಮಾಡಿದರೆ ಕದನ,

ದೊರಕೀತು ಗೆಲುವು ಸಿಕ್ಕೀತು ಜೀವದಾನ.

ಹೀಗೆ ಯೋಚಿಸುತ್ತಾ ತಾನು ಜರಾಸಂಧ,

ಭೀಮಸೇನನನ್ನೇ ಯುದ್ಧಕ್ಕಾಗಿ ಕರೆದ.

 

[ಹಾಗಿದ್ದರೆ ಜರಾಸಂಧ ಸುಲಭವಾಗಿ ಅರ್ಜುನನನ್ನು ಯುದ್ಧಕ್ಕೆ ಕರೆದು ಗೆಲ್ಲಬಹುದಿತ್ತಲ್ಲವೇ ಎಂದರೆ : ]

 

ಅರ್ಜ್ಜುನೇ ತು ಜಿತೇ ಕೃಷ್ಣಭೀಮೌ ಮಾಂ ನಿಹನಿಷ್ಯತಃ ।

ತ್ರಯಾಣಾಂ ದುರ್ಬಲಾಹ್ವಾನಾನ್ನಶ್ಯೇತ್ ಕೀರ್ತ್ತಿಶ್ಚ ಮೇ ದ್ಧ್ರುವಾ ॥೨೧.೧೫೦॥

 

ಇತಿ ಮತ್ವಾsಹ್ವಯಾಮಾಸ ಭೀಮಸೇನಂ ಸ ಮಾಗಧಃ ।

ಕಥಞ್ಚಿಜ್ಜೀವಿತಂ ವಾ ಸ್ಯಾನ್ನತು ನಶ್ಯತಿ ಮೇ ಯಶಃ                  ॥೨೧.೧೫೧॥

ಒಂದುವೇಳೆ ಅರ್ಜುನ ನನ್ನಿಂದ ಸೋಲಿಸಲ್ಪಟ್ಟರೆ,

ಕೃಷ್ಣಭೀಮರೆನ್ನ ಕೊಲ್ಲುವಾಗ ನನಗ್ಯಾರು ಆಸರೆ.

ಅರ್ಜುನನ ಆರಿಸಿದರೆ ದುರ್ಬಲನ ಆರಿಸಿಕೊಂಡ ಎಂಬ ಅಪಕೀರ್ತಿ,

ಭೀಮನೊಡನೆ ಗೆದ್ದರೂ ಸೋತರೂ ನಾಶವಾಗದು ಎನ್ನಯ ಕೀರ್ತಿ.

 

ಇತಿ ಸ್ಮ ಭೀಮಂ ಪ್ರತಿಯೋಧನಾಯ ಸಙ್ಗೃಹ್ಯ ರಾಜಾ ಸ ಜರಾಸುತೋ ಬಲೀ ।

ರಾಜ್ಯೇ ನಿಜಂ ಚಾsತ್ಮಜಮಭ್ಯಷಿಞ್ಚತ್ ಪುರಾ ಖ್ಯಾತಂ ಪತ್ರತಾಪಾಖ್ಯರುದ್ರಮ್ ॥೨೧.೧೫೨॥

ಹೀಗೆ ಆಲೋಚನೆ ಮಾಡುತ್ತಾ ತೀರ್ಮಾನಿಸಿದ ಬಲಶಾಲಿ ಜರಾಸಂಧ,

ಭೀಮನ ಕದನಕ್ಕಾರಿಸಿ ಮಗ ಸಹದೇವಗೆ ರಾಜ್ಯ ಅಭಿಷೇಕ ಮಾಡಿದ.

ಸಹದೇವನವನು ಏಕಾದಶರುದ್ರರಲ್ಲಿ ಒಬ್ಬನಾದ ಪತ್ರತಾಪನಾಗಿದ್ದ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula