[ಈ ರೀತಿಯಾಗಿ ಹೇಳಿದ ಕೃಷ್ಣ ಮುಂದೆ ಇನ್ನೂ ಕೆಲವು ಮಾತುಗಳನ್ನು ಹೇಳಲಿದ್ದಾನೆ. ಆದರೆ ಅದಕ್ಕೂ ಮೊದಲು, ಹಿನ್ನೆಲೆಯಾಗಿ, ಮುಂದೆ ಶ್ರೀಕೃಷ್ಣ ಹೇಳಲಿರುವ ಮಾತುಗಳ ಹಿಂದೆ ಯಾವ ಭಾವವಿದೆ ಎನ್ನುವುದನ್ನು ಮುಂದಿನ ಎರಡು ಶ್ಲೋಕಗಳಲ್ಲಿ ಹೇಳುತ್ತಾರೆ:]
ಉದೀರ್ಯ್ಯ ಚೈವಮೀಶ್ವರಃ ಕ್ರತೋರಮುಷ್ಯ ಯೋಗ್ಯತಾ ।
ವೃಕೋದರೇ ಯತೋsಖಿಲಾ ಚತುರ್ಮ್ಮುಖತ್ವಯೋಗ್ಯತಾ
॥೨೧.೯೦॥
ತತಃ ಸುಪೂರ್ಣ್ಣಮಸ್ಯ ತತ್ ಫಲಂ
ವಿಧಾತುಮಞ್ಜಸಾ ।
ಜಗಾದ ವಾಯುವಾಹನೋ ವಚೋ ಯುಧಿಷ್ಠಿರಂ ತ್ವಿದಮ್ ॥೨೧.೯೧॥
ಸರ್ವಸಮರ್ಥನಾದ
ಕೃಷ್ಣಪರಮಾತ್ಮ ಈ ರೀತಿ ಹೇಳಿದ ನಂತರ,
ಭೀಮಸೇನನೇಕೆ ರಾಜಸೂಯದ
ಪೂರ್ಣಫಲದ ಜವಾಬ್ದಾರ.
ಭೀಮನಲ್ಲಿದೆ ಮುಂದೆ
ಚತುರ್ಮುಖ ಬ್ರಹ್ಮನಾಗುವ ಯೋಗ್ಯತಾ ಗುಣ,
ಅದೇ ಮಾತುಗಳ ಸ್ಪಷ್ಟವಾಗಿ
ಹೇಳಿದ್ದ (ಶ್ರೀಕೃಷ್ಣ ) ವಾಯುವಾಹನ.
ಕ್ವ ರಾಜಸೂಯಮದ್ಯ ತೇ ಜರಾಸುತೇ ತು ಜೀವತಿ ।
ಜಯೇತ್ ಕ ಏವ ತಂ ಯುಧಾ ಮೃತೋ ನ ಯೋsಪಿ ಸೀರಿಣಾ ॥೨೧.೯೨॥
ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ರಾಜಸೂಯ ಯಾಗ
ಸಾಧ್ಯವಿಲ್ಲ,
ಜರಾಸಂಧ ಬದುಕಿರುವಾಗ
ಯಾರಿದ್ದಾರೆ ಅವನನ್ನು ಗೆಲ್ಲುವ ಮಲ್ಲ?
ಬಲರಾಮನಿಂದಲೂ ಅವನಿಗೆ
ಬರಲಿಲ್ಲ ಸಾವು,
ಯಾರಲ್ಲಿದೆ ಅವನ ಗೆಲ್ಲುವ ಛಲ
ಬಲದ ಕಾವು.
ವಿರಿಞ್ಚಶರ್ವವಾಕ್ಯತಃ ಸಮಸ್ತಲೋಕಜಾಯಿನಿ ।
ಸ್ಥಿತೇ ತು ತೇ ಜರಾಸುತೇ ನ ಸೇತ್ಸ್ಯತಿ ಕ್ರತೂತ್ತಮಃ ॥೨೧.೯೩॥
ಬ್ರಹ್ಮ ರುದ್ರರ ವರದಿಂದ ಸಮಸ್ತ ಲೋಕ ಗೆದ್ದಿರುವ
ಜರಾಸಂಧ,
ಅವನಿರುವವರೆಗೂ ನಿನ್ನಿಂದ
ರಾಜಸೂಯ ಯಾಗವು ಅಸಾಧ್ಯ.
ಇತೀರಿತೇ ರಥಾಙ್ಗಿನಾ ಜಗಾದ ಧರ್ಮ್ಮನನ್ದನಃ ।
ನಿವರ್ತ್ತಿತಂ ಮನಃ ಕ್ರತೋರಲಂ ಮಮಾಮುನಾ ಪ್ರಭೋ ॥೨೧.೯೪॥
ಇಷ್ಟೆಲ್ಲವನ್ನೂ ಶ್ರೀಕೃಷ್ಣ ಹೇಳುತ್ತಾನೆ,
ಸಾವಧಾನದಿ ಧರ್ಮರಾಜ
ಕೇಳುತ್ತಾನೆ,
ಪ್ರಭುವೇ ನನಗೆ ಯಜ್ಞವೇ
ಬೇಡವೆನ್ನುತ್ತಾನೆ.
ಬಭೂವುರೇವ ಭೂಭೃತೋ ನಚಾsಧಿರಾಜ್ಯಮಾಪಿರೇ ।
ಯದಾ ಚ ಚಕ್ರವರ್ತ್ತಿನಸ್ತದೇದೃಶಾ ನ ಶತ್ರವಃ ॥೨೧.೯೫॥
ಈ ಮೊದಲು ಅನೇಕ ರಾಜರುಗಳು
ಆಗಿಹೋಗಿರುವುದು ಸತ್ಯ,
ಎಲ್ಲರಿಗೆಲ್ಲಿತ್ತು ಪ್ರಪಂಚ
ಗೆದ್ದು ಚಕ್ರವರ್ತಿ ಆಗಿ ಮೆರೆವ ಸಾಮರ್ಥ್ಯ.
ಹಿಂದೆ ಹರಿಶ್ಚಂದ್ರನಂಥವರು
ಚಕ್ರವರ್ತಿಗಳು ಆಗಿದ್ದು ಇತಿಹಾಸ,
ಜರಾಸಂಧನಂಥ
ಶತ್ರುಗಳಿರಲಿಲ್ಲವೆಂಬುದು ಗಮನಿಸೋ ಅಂಶ.
ಇತೀರಿತೇsಮುನಾsವದತ್ ಪ್ರಧಾನಮಾರುತಾತ್ಮಜಃ ।
ಪದಂ ಚತುರ್ಮ್ಮುಖಸ್ಯ ವಾ ಸುಸಾದ್ಧ್ಯಮೇವ ಯತ್ನತಃ ॥೨೧.೯೬॥
ಹೀಗೆ ಹೇಳುವಾಗ
ಮುಖ್ಯಪ್ರಾಣಸುತ ಭೀಮಸೇನ ಹೇಳುತ್ತಾನೆ,
ಪ್ರಯತ್ನ ಮಾಡಿದರೆ
ದಕ್ಕಿಸಿಕೊಳ್ಳಬಹುದು ಬ್ರಹ್ಮಪದವಿಯನ್ನೇ.
ನಿಜಾನುಭಾವವರ್ಜ್ಜಿತಾ ಹರೇರನುಗ್ರಹೋಜ್ಝಿತಾಃ ।
ಮಹಾಪ್ರಯತ್ನವರ್ಜ್ಜಿತಾ ಜನಾ ನ ಜಗ್ಮುರುನ್ನತಿಮ್ ॥೨೧.೯೭॥
ಸ್ವರೂಪಭೂತವಾದ ಭಕ್ತಿಯಿಂದ
ರಹಿತ,
ಭಗವಂತನ ಅನುಗ್ರಹದಿಂದ
ವರ್ಜಿತ,
ಮಹಾಪ್ರಯತ್ನವನ್ನೇ ಮಾಡದಂಥಾ
ಜನ,
ಹೊಂದಲಾರರು ಎಂದೂ ಎತ್ತರದ
ಸ್ಥಾನ ಮಾನ.
ಸ್ಥಿರೋsನುಭಾವ ಏವ ಮೇ ಮಹಾನನುಗ್ರಹೋ ಹರೇಃ ।
ಪ್ರಯತ್ನಮೇಕಮಗ್ರತೋ ನಿಧಾಯ ಭೂತಿಮಾಪ್ನುಮಃ ॥೨೧.೯೮॥
ಭಗವಂತನಲ್ಲಿ ನನಗಿರುವ ಭಕ್ತಿ
ಸ್ಥಿರ,
ಸದಾ ಇದೆ ಭಗವದನುಗ್ರಹದ ಧಾರ,
ನಮ್ಮ ಪ್ರಯತ್ನವನ್ನು ಮಾಡೋಣ,
ಪ್ರಯತ್ನದಿಂದ ಸಂಪತ್ತು
ಗಳಿಸೋಣ.
No comments:
Post a Comment
ಗೋ-ಕುಲ Go-Kula