Wednesday, 30 March 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 118-122

 

ವಯಂ ತ್ರಯಃ ಸಮೇತ್ಯ ತಂ ಪ್ರಯಾತಯಾಮ ಮೃತ್ಯವೇ ।

ಹನಿಷ್ಯತಿ ಸ್ಫುಟಂ ರಣೇ ವೃಕೋದರೋ ಜರಾಸುತಮ್             ॥೨೧.೧೧೮॥

ನಾವು ಮೂವರು ಸೇರಿ ಜರಾಸಂಧನ ಯಮನಲ್ಲಿಗೆ ಕಳಿಸುವುದು ಖಚಿತ,

ಭೀಮಸೇನ ತಾನು ಯುದ್ಧದಲ್ಲಿ ಜರಾಸಂಧನ ಸಂಹರಿಸುವುದು ಖಂಡಿತ.

 

ಭಯಂ ನ ಕಾರ್ಯ್ಯಮೇವ ತೇ ಮಯಾ ಹತಃ ಸ ನೇತಿ ಹ ।

ಮಯಾ ಹಿ ನೀತಿಹೇತುತಃ ಸ್ವಯಂ ನ ಹನ್ಯತೇ ರಿಪುಃ               ॥೨೧.೧೧೯॥

 

ಸ ಶರ್ವಸಂಶ್ರಯಾಗ್ರಣೀರ್ಮ್ಮದಾಶ್ರಯೋತ್ತಮೇನ ತು ।

ನಿಹನ್ಯತೇ ಯದಾ ತದಾ ಪ್ರಕಾಶಿತಂ ಹಿ ಮೇ ಬಲಮ್               ॥೨೧.೧೨೦॥

ನಾನೇಕೆ ಜರಾಸಂಧನನ್ನು ಈವರೆಗೂ ಕೊಲ್ಲಲಿಲ್ಲವೆಂದು ನಿನಗೆ ಬೇಡ ಭಯ,

ಈ ವಿಷಯದಲ್ಲಿ ಒಂದು ನೀತಿಯನ್ನು ಪ್ರಕಟಿಸುವುದು ಆಗಿದೆ ನನ್ನ ಆಶಯ.

ಶಿವಾಶ್ರಿತ ಭಕ್ತರಲ್ಲಿ ಅಗ್ರಗಣ್ಯನಾಗಿದ್ದಾನೆ ಜರಾಸಂಧ,

ನನ್ನ ಭಕ್ತರಲ್ಲಿ ಅಗ್ರಗಣ್ಯನಾದವ ಭೀಮನೆಂಬುದು ಸಿದ್ಧ.

ಅಂಥಾ ಭೀಮನಿಂದಾಗುತ್ತದೆ ಜರಾಸಂಧನ ಮರಣ,

ಈ ರೀತಿ ಆದಾಗ ಆಗುತ್ತದೆ ನನ್ನ ಬಲದ ಅನಾವರಣ.

 

ಅತೋ ನ ಶಙ್ಕಿತಂ ಮನಃ ಕುರುಷ್ವ ಭೂಪತೇ ಕ್ವಚಿತ್ ।

ಪ್ರದರ್ಶಯಾಮಿ ತೇsನುಜೌ ನಿಹತ್ಯ ಮಾಗಧೇಶ್ವರಮ್             ॥೨೧.೧೨೧॥

ರಾಜನೇ,ನನ್ನ ಭೀಮಾರ್ಜುನರ ವಿಷಯದಲ್ಲಿ ನಿನಗೆ ಬೇಡ ಸಂಶಯ,

ಜರಾಸಂಧನ ಸಂಹರಿಸಿ ನಿನ್ನ ತಮ್ಮಂದಿರನ್ನು ತೋರಿಸುವೆ ನಿಶ್ಚಯ.

 

ಇತೀರಿತಃ ಸ ವಿಷ್ಣುನಾ ವಿಚಾರ್ಯ್ಯ ತದ್ಗುಣಾನ್ ಪರಾನ್ ।

ತಥೇತಿ ಚಾsಹ ತೇ ತ್ರಯಃ ಪ್ರತಸ್ಥುರಾಶು ಮಾಗಧಾನ್             ॥೨೧.೧೨೨॥

ಇಷ್ಟೆಲ್ಲಾ ಕೇಳಿಸಿಕೊಂಡ ಧರ್ಮರಾಜ ತಾನು,

ಕೃಷ್ಣನ ಉತ್ಕೃಷ್ಟ ಗುಣಗಳನ್ನು ಚಿಂತಿಸಿದನು.

ಯುಧಿಷ್ಠಿರ 'ಆಯಿತು' ಎಂದು ಕೊಟ್ಟ ಒಪ್ಪಿಗೆ,

ಮೂವರೂ ಹೊರಟರು ಮಗಧದೇಶದೆಡೆಗೆ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula