Wednesday, 30 March 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 113-117

 

ಇತೀರಿತೇsವದತ್ ಪುನರ್ವೃಕೋದರೋsರಿಕಕ್ಷಭುಕ್ ।

ಯದೀಯನೇತೃಕಾ ರಮಾವಿರಿಞ್ಚಶರ್ವಪೂರ್ವಕಾಃ      ॥೨೧.೧೧೩॥

 

ವಶೇ ಚ ಯಸ್ಯ ತದ್ ಬಲಂ ಸುರಾಸುರೋರಗಾದಿನಾಮ್ ।

ಸ ಏಷ ಕೇಶವಃ ಪ್ರಭುಃ ಕ್ವ ಚಾಸ್ಯ ಬಾರ್ಹದ್ರಥಃ             ॥೨೧.೧೧೪॥

ಹೀಗೆ ಧರ್ಮರಾಜ ಹೇಳಲು,ನುಡಿವ: ಶತ್ರುಗಳೆಂಬ ಕಾಡಿಗೆ ಕಾಡ್ಗಿಚ್ಚಿನಂತಿರುವ ಭೀಮಸೇನ,

ಲಕ್ಷ್ಮಿ, ಬ್ರಹ್ಮ, ರುದ್ರ ಮುಂತಾದ ಎಲ್ಲಾ ದೇವತೆಗಳಿಗೂ ಯಾರದಿದೆಯೋ ಮಾರ್ಗದರ್ಶನ.

ದೇವತೆಗಳು, ದೈತ್ಯರು, ಮೊದಲಾದವರಿಗೆ ಯಾರದಿದೆಯೋ ಬಲದ ಪ್ರೇರಣೆ,

ಜರಾಸಂಧನೇನು ಮಹಾ, ನಮಗಿರಲು ನಮ್ಮೊಡೆಯನಾದ ಕೇಶವನ ಕರುಣೆ.

 

ಅಧೃಷ್ಯಮಸ್ತಿ ಮೇ ಬಲಂ ಹರಿಃ ಪ್ರಣಾಯಕೋsಸ್ಯ ಚ ।

ಸಮಸ್ತಲೋಕನೇತರಿ ಪ್ರಭೌ ಹಿ ಸರ್ವಶಕ್ತಿತಾ               ॥೨೧.೧೧೫॥

ಶ್ರೀಕೃಷ್ಣನೇ ಪ್ರೇರಕನಾಗಿರುವ ನನ್ನ ಬಲಕ್ಕಿದೆ ಅಜೇಯತ್ವ,

ಕೃಷ್ಣನಲ್ಲಿದೆ ಲೋಕಗಳನ್ನೆಲ್ಲಾ ನಿಯಂತ್ರಿಸುವ ಸರ್ವಶಕ್ತಿತ್ವ.

 

ಅಜೇಯತಾ ತಥಾsರ್ಜ್ಜುನೇ ಹರೇರ್ವರೋದ್ಭವಾsಸ್ತಿ ಹಿ ।

ಅತೋ ವಯಂ ತ್ರಯೋsದ್ಯ ತಂ ಪ್ರಯಾಮ ಮಾಗಧಂ  ರಿಪುಮ್             ॥೨೧.೧೧೬॥

ಅದರಂತೆಯೇ ಅರ್ಜುನನಲ್ಲಿ ದೈವವರದಿಂದಿರುವ ಅಜೇಯತ್ವ ಅಬಾಧಿತ,

ಈ ಕಾರಣದಿಂದ ನಾವು ಮೂರುಜನ ಜರಾಸಂಧನಲ್ಲಿಗೆ ಹೋಗುವುದದು ನಿಶ್ಚಿತ.

 

ಹನಿಷ್ಯ ಏವ ಮಾಗಧಂ ಹರೇಃ ಪುರೋ ನ ಸಂಶಯಃ ।

ಇತೀರಿತೇsಮುನಾ ಹರಿರ್ಜ್ಜಗಾದ ಧರ್ಮ್ಮನನ್ದನಮ್     ॥೨೧.೧೧೭॥

ನಿಸ್ಸಂಶಯವಾಗಿ ಕೃಷ್ಣನೆದುರು ನಾನು ಜರಾಸಂಧನ ಕೊಲ್ಲುವೆನೆಂದು ಭೀಮ ಹೇಳಿದ,

ಭೀಮಸೇನ ಹೀಗೆ ಹೇಳುತ್ತಿರಲು, ಶ್ರೀಕೃಷ್ಣ ಧರ್ಮರಾಜನ ಉದ್ದೇಶಿಸಿ ಮಾತನಾಡಿದ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula