ಬಲಂ ಭೀಮೇ ಮನ್ಯಮಾನೋsಧಿಕಂ ತು ಗದಾಶಿಕ್ಷಾಮಾತ್ಮನಿ ಚಾಧಿಕಾಂ ನೃಪಃ ।
ಭೀತೋ ನಿಯುದ್ಧೇsಸ್ಯ ದದೌ ಗದಾಂ ಸ ಭೀಮಾಯ ಚಾನ್ಯಾಂ ಸ್ವಯಮಗ್ರಹೀದ್ ಬಲೀ ॥೨೧.೧೫೩॥
ಬಲವಂತ ಜರಾಸಂಧನೆಂದುಕೊಂಡ
ಭೀಮನಲ್ಲಿದೆ ಅಧಿಕ ಬಾಹುಬಲ,
ತನ್ನಲ್ಲಿ ಅಧಿಕವಾಗಿದೆ
ಗದಾಭ್ಯಾಸದ ವಿಶೇಷವಾದ ಕೌಶಲ.
ಭೀಮನೊಂದಿಗೆ ಮಲ್ಲಯುದ್ಧಕೆ
ಹೆದರಿದ ಜರಾಸಂಧ,
ಭೀಮಗೊಂದನ್ನು ಕೊಟ್ಟು
ತಾನೊಂದು ಗದೆಯ ಹಿಡಿದವನಾದ.
ತದರ್ತ್ಥಮೇವಾsಶು ಗದಾಂ ಪ್ರಗೃಹ್ಯ ಭೀಮೋ ಯಯೌ ಮಾಗಧಸಂಯುತೋ ಬಹಿಃ ।
ಪುರಾತ್ ಸಕೃಷ್ಣಾರ್ಜ್ಜುನ ಏವ ತತ್ರ ತ್ವಯುದ್ಧ್ಯತಾಂ ಕೇಶವಪಾರ್ತ್ಥಯೋಃ ಪುರಃ ॥೨೧.೧೫೪॥
ಜರಾಸಂಧನ ಆಲೋಚನೆಯನ್ನು
ತಿಳಿದವನಾದ ಭೀಮಸೇನ,
ನಿಶ್ಚಯಿಸಿದ ಮಾಡಲು ತನ್ನ
ಗದಾಯುದ್ಧ ಕಲೆಯ ಅನಾವರಣ.
ಕೃಷ್ಣಾರ್ಜುನರ ಕೂಡಿ
ಜರಾಸಂಧನೊಂದಿಗೆ ಊರ ಹೊರಕ್ಕೆ ಬಂದ,
ನಡೆಯಿತಲ್ಲಿ
ಕೃಷ್ಣಾರ್ಜುನರೆದುರು ಭೀಮ ಜರಾಸಂಧರ ಯುದ್ಧ.
ವಾಚಾsಜಯತ್ ತಂ ಪ್ರಥಮಂ ವೃಕೋದರಃ ಶಿವಾಶ್ರಯಂ ವಿಷ್ಣುಗುಣಪ್ರಕಾಶಯಾ ।
ತತೋ ಗದಾಭ್ಯಾಮಭಿಪೇತತುಸ್ತೌ ವಿಚಿತ್ರಮಾರ್ಗ್ಗಾನಪಿ ದರ್ಶಯನ್ತೌ ॥೨೧.೧೫೫॥
ಭೀಮ ಮೊದಲು ಭಗವದ್ಗುಣ
ಪ್ರತಿಪಾದನೆ ಮೂಲಕ ಶಿವಭಕ್ತ ಜರಾಸಂಧನ ಗೆದ್ದ,
ಆನಂತರ ಮೊದಲಾಯಿತು ಭೀಮ
ಜರಾಸಂಧರ ವಿವಿಧ ಮಂಡಲಗಳ ಯುದ್ಧ.
ತಯೋರ್ಗ್ಗದೇ ತೇsಶನಿಸನ್ನಿಕಾಶೇ ಚೂರ್ಣ್ಣೀಕೃತೇ ದೇಹಮಹಾದೃಢಿಮ್ನಾ ।
ಅನ್ಯೋನ್ಯಯೋರ್ವಕ್ಷಸಿ ಪಾತಿತೇ ರುಷಾ ಯಥಾsಶ್ಮನೋಃ ಪಾಂಸುಪಿಣ್ಡೌ
ಸುಮುಕ್ತೌ ॥೨೧.೧೫೬॥
ಯಾವ ರೀತಿ ಆದೀತೋ ಕಲ್ಬಂಡೆಗಳ
ಮೇಲೆ ಹೊಡೆದ ಮಣ್ಣು ಹೆಂಟೆಯ ಗತಿ,
ಹಾಗೇ ಪುಡಿಪುಡಿಯಾಯಿತು
ಅವರಿಬ್ಬರ ಎದೆಗಪ್ಪಳಿಸಿದ ಗದೆಗಳ ಗತಿ.
No comments:
Post a Comment
ಗೋ-ಕುಲ Go-Kula