ಜಯತ್ಯಜೋSಕ್ಷೀಣಸುಖಾತ್ಮಬಿಮ್ಬಃ
ಸ್ವೈಶ್ವರ್ಯಕಾನ್ತಿಪ್ರತತಃ ಸದೋದಿತಃ ।
ಸ್ವಭಕ್ತಸನ್ತಾಪದುರಿಷ್ಟಹನ್ತಾ ರಾಮಾವತಾರೋ ಹರಿರೀಶಚನ್ದ್ರಮಾಃ
॥೩.೦೨॥
ಹುಟ್ಟು ಸಾವಿರುವ
-ರಾತ್ರಿ ಬಾನು ಬೆಳಗುವ ಚಂದ್ರ,
ಹುಟ್ಟು ಸಾವಿರದ
-ಸದಾ ಬೆಳಗುವ ಶ್ರೀರಾಮಚಂದ್ರ.
ಚಂದ್ರನಿಗುಂಟು
ಸೀಮಿತ ಬೆಳಕು ಕ್ಷಯವಾಗೋ ಬಿಂಬ,
ರಾಮಚಂದ್ರನೋ ಅಸೀಮ
ಅಕ್ಷಯ ಎಲ್ಲರೊಳಿಹ ಬಿಂಬ.
ಸಜ್ಜನರಿಂದ
ಪ್ರಾರ್ಥಿಸಲ್ಪಡುವ ಭೂಪ,
ಕಳೆದುಬಿಡುವ ತನ್ನ
ಭಕ್ತರ ಬೇಗೆ ಸಂತಾಪ.
ಚಂದ್ರನದದು
ಕ್ಷೀಣಿಸುವ ಅಶಾಶ್ವತ ಕಾಂತಿ,
ರಾಮಚಂದ್ರ ಶಾಶ್ವತ
ಕಾಂತಿ-ಅವನಿಗಾಗಲಿ ಪ್ರೀತಿ.
[Contributed by
Shri Govind Magal]
No comments:
Post a Comment
ಗೋ-ಕುಲ Go-Kula